ಸುದ್ದಿ ಕೃಷಿ ಸೇವಾ ಕೇಂದ್ರದಲ್ಲಿ ಸೋಲಾರ್ ಎನರ್ಜಿ ವಿವಿಧ ಆವಿಷ್ಕಾರ,ಕೆಂಗನ್ ವಾಟರ್ ಆರೋಗ್ಯ ಲಾಭಗಳ ಮಾಹಿತಿ ಕಾರ್ಯಾಗಾರ

0

ಪುತ್ತೂರು:ಸುದ್ದಿ ಕೃಷಿ ಸೇವಾ ಕೇಂದ್ರದ ವತಿಯಿಂದ ಸೋಲಾರ್ ಎನರ್ಜಿ ವಿವಿಧ ಆವಿಷ್ಕಾರ, ಕೆಂಗನ್ ವಾಟರ್ ಆರೋಗ್ಯ ಲಾಭಗಳ ಮಾಹಿತಿ ಕಾರ್ಯಾಗಾರವು ಸೆ.2ರಂದು ಎಪಿಎಂಸಿ ರಸ್ತೆಯ ಕ್ರಿಸ್ತೋಫರ್ ಬಿಲ್ಡಿಂಗ್‌ನಲ್ಲಿರುವ ಸುದ್ದಿಕೃಷಿ ಮಾಹಿತಿ ಕೇಂದ್ರದಲ್ಲಿ ನಡೆಯಿತು.

ಉಮೇಶ್ ರೈ ಕೈಕಾರರವರು ಸೋಲಾರ್ ಎನರ್ಜಿಯ ವಿವಿಧ ಉಪಯುಕ್ತ ಸಿಸ್ಟಮ್‌ಗಳು, ಸೋಲಾರ್ ಅನ್‌ಗ್ರಿಡ್ ವ್ಯವಸ್ಥೆಗಳಿಂದ ವಿದ್ಯುತ್ ಇಲಾಖೆಗೆ ವಿದ್ಯುತ್ ಕೊಡುವ ಬಗ್ಗೆ, ಲಾಭ ನಷ್ಟಗಳ ಕುರಿತು ಹಾಗೂ ಹೈಬ್ರಿಡ್ ಇನ್ವರ್ಟರ್‌ಗಳ ಬಗ್ಗೆ ಮಾಹಿತಿ ಪ್ರಾತ್ಯಕ್ಷಿಕೆಯೊಂದಿಗೆ ನೀಡಿದರು. ಮಾಧವ ಭಂಡಾರಿಯವರು ಕೆಂಗನ್ ವಾಟರ್‌ನ ಆರೋಗ್ಯಕರ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.


ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ, ಪುತ್ತೂರು ವರ್ತಕರ ಸಂಘದ ಕಾರ್ಯದರ್ಶಿ ಉಲ್ಲಾಸ್ ಪೈ, ಮೆಲ್ವಿನ್ ಪುತ್ತೂರು, ವರದನಾಯಕ್ ಆರ್ಲಪದವು, ರವಿಶಂಕರ ಭಟ್ ನಗರ, ಪ್ರವೀಣ್ ಕುಮಾರ್ ಕೊಳ್ತಿಗೆ, ಸುದ್ದಿ ಸಿಬ್ಬಂದಿಗಳಾದ ಶಿವಕುಮಾರ್ ಈಶ್ವರಮಂಗಲ, ಪ್ರಚಲಿತಾ ಮೋಹನ್ ಬಡಾವು, ರಾಜೇಶ್ ಎಂ,ಎಸ್., ರವೀಶ್ ವಿಟ್ಲ, ಹೊನ್ನಪ್ಪ ಬನ್ನೂರು, ಶರತ್ ಕುಮಾರ್, ಸುಧಾಕರ ಕಾಣಿಯೂರು, ಪ್ರವೀಣ್ ಚೆನ್ನಾವರ, ಸಿ.ಶೇ ಕಜೆಮಾರ್, ಸುಳ್ಯದ ರಮ್ಯ ಹಾಗೂ ಹಸೈನಾರ್ ಸೇರಿದಂತೆ ಹಲವು ಮಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here