ಕಾವು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆ.28 ರಿಂದ ಅ. 4 ರ ತನಕ ನಡೆಯುವ 25 ನೇ ವರ್ಷದ ಭಜನಾ ಕಮ್ಮಟದ ಬಗ್ಗೆ ಪೂರ್ವಭಾವಿ ಸಭೆ

0

ಬಡಗನ್ನೂರುಃ  ಪುತ್ತೂರು ತಾಲೂಕು ಭಜನಾ ಪರಿಷತ್ ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅರಿಯಡ್ಕ ವಲಯ ಮಟ್ಟದಲ್ಲಿ ಶ್ರೀ ಕ್ಷೇತ್ರದಲ್ಲಿ  ಸೆ.28 ರಿಂದ ಅ. 4 ರ ತನಕ ನಡೆಯುವ  25 ನೇ ವರ್ಷದ  ಭಜನಾ ಕಮ್ಮಟದ ಬಗ್ಗೆ ಪೂರ್ವಭಾವಿ ಸಭೆಯು ಕಾವು  ಕಛೇರಿಯಲ್ಲಿ  ಸೆ. 4 ರಂದು ನಡೆಯಿತು.

ತಾ.ಭಜನಾ ಪರಿಷತ್ತ್ ಅಧ್ಯಕ್ಷ ಸುಬ್ಬಯ್ಯ ರೈ ಶ್ರೀ ಕ್ಷೇತ್ರದಲ್ಲಿ ನಡೆಯುವ ಭಜನಾ ಕಮ್ಮಟದ ಬಗ್ಗೆ ಮಾಹಿತಿ ನೀಡಿ ಮಾತನಾಡಿ,  ತಾಲೂಕಿನಿಂದ 10 ಜನರಿಗೆ ಭಜನಾ ಕಮ್ಮಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. 18 ರಿಂದ 45 ಮಯೋಮಾನದವರಿಗೆ ಭಜನಾ ತರಭೇತಿ ಪಡೆಯಲು ಅವಕಾಶ ಇದೆ. ದ.ಕ ಜಿಲ್ಲೆಗೆ  ಪ್ರಮುಖ ಅಧ್ಯತೆ ನೀಡಲಾಗುತ್ತಿದೆ.ಭಜನೆಯಲ್ಲಿ ವಿಶೇಷ ಆಸಕ್ತಿಯುಳ್ಳ ಪ್ರತಿ ಮಂಡಳಿ ಒಬ್ಬ ಸದಸ್ಯ ಅರ್ಜಿ ಸಲ್ಲಿಸಬಹುದಾಗಿದೆ ತಾಲುಕಿನ 3 ಜನರನ್ನು, ಅಯ್ಕೆಮಾಡಿ, ಅದರಲ್ಲಿ ಒಬ್ಬ ಸದಸ್ಯ ಗುರುತಿಸಲಾಗುವುದು.ಎಂದು ಹೇಳಿದರು. 

ಮಕ್ಕಳಿಗೆ ಭಜನೆ ಬಗ್ಗೆ ಪ್ರೋತ್ಸಾಹ ನೀಡಬೇಕು ;-
ಭಜನಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮೊದಲ ಅಧ್ಯತೆ ನೀಡಿ ಬಳಿಕ ಉಳಿದ ಸದಸ್ಯರು ಭಜನೆ ಹೇಳಬೇಕು. ಎಂದು ತಾ. ಭಜನಾ ಪರಿಷತ್ ಅಧ್ಯಕ್ಷ ಸುಬ್ಬಯ್ಯ ರೈ ಹೇಳಿದರು.

 ಅರಿಯಡ್ಕ ವಲಯ ಮೇಲ್ವಿಚಾರಕ ಹರೀಶ್ ಶ್ರೀ ಕ್ಷೇತ್ರದಲ್ಲಿ ನಡೆಯುವ ಭಜನಾ ಕಮ್ಮಟದ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು., ಅರಿಯಡ್ಕ ವಲಯದಲ್ಲಿ 12 ಭಜನಾ ಮಂಡಳಿಗಳಿದೆ.. ಅಧ್ಯಕ್ಷ ಕಾರ್ಯದರ್ಶಿಗಳಿಗೆ ತರಬೇತಿ ನೀಡಲಾಗುತ್ತದೆ.ಒಂದು ಭಾರಿ ಕಮ್ಮಟದಲ್ಲಿ ಭಾಗವಹಿಸಿದ ಸದಸ್ಯರಿಗೆ ಮಗದೊಮ್ಮೆ ಭಾಗವಹಿಸುವಂತಿಲ್ಲ. ಅಧ್ಯಕ್ಷ ಉಪಾಧ್ಯಕ್ಷ ಶಿಫಾರಸ್ಸು ಮಾಡಿ ತಂಡದ ಸದಸ್ಯರನ್ನು ಅಯ್ಕೆ ಮಾಡಿ ಸೆ.10 ರೊಳಗೆ ಹೆಸರು ನೊಂದಣಿ ಮಾಡಬೇಕು. ಸೆ.10 ರಂದು ಪುತ್ತೂರು ಯೋಜನಾ ಕಛೇರಿಯಲ್ಲಿ  ತಾಲೂಕು ಮಟ್ಟದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ ಎಂದು ಹೇಳಿದರು.

ಸಭೆಯಲ್ಲಿ ಸುಮಾರು  7 ಭಜನಾ ಮಂಡಳಿ ಅಧ್ಯಕ್ಷ ಕಾರ್ಯದರ್ಶಿ  ಮತ್ತು ಸದಸ್ಯರು, ಹಾಗೂ ಅರಿಯಡ್ಕ ವಲಯಕ್ಕೆ ಸಂಬಂಧ ಪಟ್ಟ ಅರಿಯಡ್ಕ,, ಮಾಡ್ನೂರು, ಬಡಗನ್ನೂರು, ಪಡುವನ್ನೂರು, ನೆಟ್ಟನಿಗೆ ಮೂಡ್ನೂರು, ಕರ್ನೂರು, ಅಮ್ಚಿನಡ್ಕ, ಭಾಗದ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು. ನೆಟ್ಟನಿಗೆ ಮೂಡ್ನೂರು ಒಕ್ಕೂಟದ ಸೇವಾ ಪ್ರತಿನಿಧಿ ಸುಂದರ ಸ್ವಾಗತಿಸಿ ವಂದಿಸಿದರು.

ಸೌಜನ್ಯ ಕೊಲೆಗೆ ನ್ಯಾಯ ಸಿಗಬೇಕು. ಆದರೆ ಪೂಜ್ಯ ಕಾವಂದರರಿಗೆ  ಮತ್ತು ಶ್ರೀ  ಕ್ಷೇತ್ರಕ್ಕೆ ಕಳಂಕ ಬರದ ಹಾಗೆ ಭಜನಾ ತಂಡಗಳು ಭಜನಾ ಕಾರ್ಯಕ್ರಮದ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಪ್ರಾರ್ಥನೆ ಮಾಡಬೇಕು.
ತಾ.ಭ.ಪರಿಷತ್ ಅಧ್ಯಕ್ಷ ಸುಬ್ಬಯ್ಯ ರೈ ಹಲಸಿನಡಿ.

LEAVE A REPLY

Please enter your comment!
Please enter your name here