ಮಂಗಳೂರು-ಬೆಂಗಳೂರು ಹೆದ್ದಾರಿ ವಿಸ್ತರಣೆ-2.53 ಹೆಕ್ಟೇರ್ ಅರಣ್ಯ ಬಳಕೆಗೆ ಕೇಂದ್ರ ಒಪ್ಪಿಗೆ

0

ಬೆಂಗಳೂರು:ಮಂಗಳೂರು-ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಯ ಅಡ್ಡಹೊಳೆಯಿಂದ ಬಂಟ್ವಾಳ ಕ್ರಾಸ್‌ವರೆಗೆ ಚತುಷ್ಪಥ ಕಾಮಗಾರಿಗೆ 2.53 ಹೆಕ್ಟೇರ್ ಅರಣ್ಯ ಬಳಕೆಗೆ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ಅನುಮತಿ ನೀಡಿದೆ.


ಈ ಯೋಜನೆಗೆ ಅರಣ್ಯ ಸಂರಕ್ಷಣಾ ಕಾಯ್ದೆ 1980ರಡಿ ರೆಖ್ಯಾ ಗ್ರಾಮದಲ್ಲಿ 2.53 ಎಕರೆ ಅರಣ್ಯ ಬಳಕೆಗೆ ಒಪ್ಪಿಗೆ ನೀಡುವಂತೆ ಕೋರಿ ಕರ್ನಾಟಕ ಸರ್ಕಾರವು 2021ರ ಸೆಪ್ಟೆಂಬರ್, 2022ರ ಮಾರ್ಚ್ ಹಾಗೂ 2023ರ ಮೇ ತಿಂಗಳಲ್ಲಿ ಸಚಿವಾಲಯಕ್ಕೆ ಪತ್ರ ಬರೆದಿತ್ತು.ಜೂನ್ 26ರಂದು ನಡೆದ ಪ್ರಾದೇಶಿಕ ಉನ್ನತಾಧಿಕಾರ ಸಮಿತಿಯ (ಆರ್‌ಇಸಿ) ಸಭೆಯಲ್ಲಿ ಈ ಪ್ರಸ್ತಾವನೆ ಬಗ್ಗೆ ಚರ್ಚಿಸಲಾಗಿತ್ತು.ಇದೀಗ ಸಚಿವಾಲಯವು ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ.


ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ದಕ್ಷಿಣ ಕನ್ನಡ ಜಿಲ್ಲೆಯ ಮಲಂತಿಗೆ ಗ್ರಾಮದಲ್ಲಿ 5.10 ಹೆಕ್ಟೇರ್ ಪ್ರದೇಶದಲ್ಲಿ ಕಡ್ಡಾಯವಾಗಿ ಅರಣ್ಯೀಕರಣ ಮಾಡಬೇಕು.ಜತೆಗೆ, ಅರಣ್ಯ ಬಳಕೆಗೆ ಅನುಮತಿ ನೀಡಿರುವ ಪ್ರದೇಶದಲ್ಲಿ ಕನಿಷ್ಠ ಸಂಖ್ಯೆಯ ಮರಗಳನ್ನು ಕಡಿಯಬೇಕು ಎಂದೂ ಸಚಿವಾಲಯವು ಸೂಚಿಸಿದೆ.ಈ ಅನುಮೋದನೆಯು ಐದು ವರ್ಷಗಳಿಗೆ ಸೀಮಿತವಾಗಿರುತ್ತದೆ ಎಂದೂ ಸ್ಪಷ್ಟಪಡಿಸಿದೆ.

LEAVE A REPLY

Please enter your comment!
Please enter your name here