ಪುತ್ತೂರು : ಪುತ್ತೂರು ಯುವಕ ವೃಂದ ಕಲ್ಲಾರೆ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಾಮಿ ಸಲುವಾಗಿ 44 ನೆಯ ವರುಷದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮ ಇಲ್ಲಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮ ಗಳ ವಿವರ:
ಸೆ.6ರ ಬೆಳಗ್ಗೆ ಗಂ.6 ಕ್ಕೆ ,ಎನ್. ಗಣಪತಿ ನಾಯಕ್ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಿರುವರು. ಆ ಬಳಿಕ ಕ್ರಾಸ್ ಕಂಟ್ರಿ ರೇಸ್ ಸ್ಪರ್ಧೆ ನಡೆಯಲಿದೆ. ಬಳಿಕ ರಂಗೋಲಿ ಬಿಡಿಸುವುದು , ಸಂಗೀತ ಸ್ಪರ್ಧೆಗಳು ನಡೆದು , ಅಪರಾಹ್ನ ಶ್ರೀಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆ ,ರಸಪ್ರಶ್ನೆ ,ಗೋಣಿಚೀಲ ಓಟ ,ಲಿಂಬೆ ಚಮಚ ಓಟ ,ಸ್ಮರಣ ಶಕ್ತಿ ,
ಗುಂಡು ಎಸೆತ ,ಜಸ್ಟ್ ಮಿನಿಟ್ ಗೇಮ್ ,ಸಂಗೀತ ಕುರ್ಚಿ ,ಮಡಕೆ ಒಡೆಯೋ (ಮಹಿಳೆಯರಿಗೆ ಮತ್ತು ಪುರುಷರಿಗೆ) ಸ್ಪರ್ಧೆಗಳು ಜರುಗಲಿವೆ.ರಾತ್ರಿ ಎಂಟರಿಂದ
ಭಜನೆ, ವಿಶೇಷ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಸೆ. 7 ರ ಸಂಜೆ 4 ಕ್ಕೆ ಮೊಸರು ಕುಡಿಕೆ ಕಂಬ ಏರುವುದು ,ಶ್ರೀಕೃಷ್ಣನ ವೇಷ ಸ್ಪರ್ಧೆ ಯ ಬಳಿಕ , ಛದ್ಮವೇಷ ಸ್ಪರ್ಧೆ ನಂತರ ಸಭಾ ಕಾರ್ಯಕ್ರಮ ನಡೆಯಲಿದೆ.
ಅಧ್ಯಕ್ಷತೆಯನ್ನು ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ ಇವರು ವಹಿಸಲಿದ್ದು , ಮುಖ್ಯ ಅತಿಥಿಗಳಾಗಿ , ವಿಶ್ವ ಹಿಂದೂ ಪರಿಷತ್ ಇದರ ಗೌರವಾಧ್ಯಕ್ಷ , ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಕಾರ್ಯದರ್ಶಿ ಯು .ಪೂವಪ್ಪ ಭಾವಹಿಸಲಿದ್ದಾರೆ.
ಲೋಕೋಪಯೋಗಿ ಇಲಾಖೆಯ ಕುಕ್ಕೆ ಸುಬ್ರಹ್ಮಣ್ಯ ವಿಭಾಗ ಇದರ ಸಹಾಯಕ ಇಂಜಿನಿಯರ್ ಪ್ರಮೋದ್ ಕುಮಾರ್ ಬಹುಮಾನ ವಿತರಣೆ ನೆರವೇರಿಸಿ ಕೊಡಲಿದ್ದಾರೆ.
ಆ ಬಳಿಕ ಶ್ರೀಕೃಷ್ಣನ ರಥೋತ್ಸವ ಕಾರ್ಯ ನಡೆಯಲಿದೆ.ನಂತರ , ಸಾಂಸ್ಕೃತಿಕ ಕಾರ್ಯಕ್ರಮ “ನೃತ್ಯ ವೈಭವ-2K23″ ಜರುಗಲಿದ್ದು ,ಈ ನೃತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೃತ್ಯ ತಂಡಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಮತ್ತು ಉತ್ತಮ ಪ್ರದರ್ಶನ ನೀಡುವ ನೃತ್ಯ ತಂಡಕ್ಕೆ ನಗದು ಬಹುಮಾನ ಮತ್ತು ಸ್ಮರಣಿಕೆ ನೀಡಿ
ಪ್ರೋತ್ಸಾಹಿಸಲಾಗುವುದೆಂದು ಪ್ರಕಟಣೆ ತಿಳಿಸಿದೆ. ವಿವರಗಳಿಗಾಗಿ ಮೊ.8904808516,9845633564 ಸಂಪರ್ಕಿಸಬಹುದು.