ಮಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ 2023-24ನೇ ಸಾಲಿನಲ್ಲಿ ಸಿಇಟಿ, ನೀಟ್ ಮೂಲಕ ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ಆಯ್ಕೆಯಾಗಿರುವ ಬೌದ್ಧ ಕ್ರೈಸ್ತ, ಜೈನ, ಮುಸ್ಲಿಂ, ಪಾರ್ಸಿ, ಸಿಕ್ಸ್ ಜನಾಂಗದ ವಿದ್ಯಾರ್ಥಿಗಳಿಗೆ ಕರ್ನಾಟಕ ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ಅರಿವು ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ kmdconline.karnataka.gov.in ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗಿದ್ದು, ಬೇರೆ ಬೇರೆ ವರ್ಷಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಪಸಂಖ್ಯಾಕ ವಿದ್ಯಾರ್ಥಿಗಳು ಅರಿವು ಸಾಲ ಪಡೆಯದಿದ್ದಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಿದ ಅನಂತರ ಇಂಡೆನ್ಸಿಟಿ ಬಾಂಡ್ ಹಾಗೂ ಇತರ ದಾಖಲಾತಿಗಳನ್ನು ಮಂಗಳೂರಿನ ಪಾಂಡೇಶ್ವರದಲ್ಲಿರುವ ಮೌಲಾನಾ ಆಜಾದ್ ಭವನದ 2ನೇ ಮಹಡಿಯಲ್ಲಿರುವ ಕರ್ನಾಟಕ ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಿಗೆ ಸಲ್ಲಿಸಬೇಕು.
ಅಗತ್ಯ ದಾಖಲೆಗಳು
ಜಾತಿ ಮತ್ತು ಆದಾಯ ಪ್ರಮಾಣ ಪತ್ರ 8ಲಕ್ಷ ರೂ.ಗಳ ಮಿತಿಯಲ್ಲಿರಬೇಕು. ಆಧಾರ್, ರೇಷನ್ ಕಾರ್ಡ್ ಜೆರಾಕ್ಸ್ ಪ್ರತಿ ಸಿಇಟಿ, ನೀಟ್ ಪ್ರವೇಶ ಪತ್ರ, ಎಸೆಸೆಲ್ಸಿ ಮತ್ತು ಪಿಯುಸಿ ಅಂಕಪಟ್ಟಿಯ ದೃಢೀಕೃತ ಪ್ರತಿ, 50 ರೂ.ಗಳ ಇ-ಸ್ಟ್ಯಾಂಪ್ ನೊಂದಿಗೆ ಇಂಡಿಮಿಟೆ ಬಾಂಡ್, ಹಿಂದಿನ ವರ್ಷದ ಅಂಕ ಪಟ್ಟಿಯ ದೃಢೀಕೃತ ಪ್ರತಿ, ವಿದ್ಯಾರ್ಥಿ ಮತ್ತು ಹೆತ್ತವರ 2 ಭಾವಚಿತ್ರ, ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಸ್ಟಡಿ ಸರ್ಟಿಫಿಕೇಟ್, ಕಾಲೇಜ್‌ನ ಬ್ಯಾಂಕ್ ಖಾತೆಯ ವಿವರ, ಶುಲ್ಕ ಕಟ್ಟಿದ ರಶೀದಿ, ವಿದ್ಯಾರ್ಥಿ ಮತ್ತು ಹೆತ್ತವರ ಸ್ವಯಂ ಘೋಷಣ ಪತ್ರ ಬೇಕು.