






ಪುತ್ತೂರು: ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಸೆ.2 ರಂದು ರೋಟರಿ ಕ್ಲಬ್, ಪುತ್ತೂರು ಯುವ ಇವರ ಸಹಯೋಗದಲ್ಲಿ ಇಂಟರಾಕ್ಟ್ ಕ್ಲಬ್ ಆಫ್ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಅನುಸ್ಥಾಪನೆ ಮತ್ತು ಪ್ರಮಾಣವಚನ ಸಮಾರಂಭವು ನಡೆಯಿತು.
ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಸಮಾಜಮುಖಿಯಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಅದೇ ರೀತಿ ಸಮಾಜದ ಸುಸ್ಥಿರತೆಯನ್ನು
ಕಾಪಾಡುವ ಹೊಣೆ ನಿಮ್ಮದಾಗಬೇಕು ಎಂದು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಆರ್.ಟಿ.ಮಂಜುನಾಥ್ ಆಚಾರ್ಯ, ಜಿಲ್ಲಾ ಅಧ್ಯಕ್ಷರು, ಇಂಟರಾಕ್ಟ್ ಕ್ಲಬ್ ಇವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಹಾಗೆಯೇ 10ನೇ ತರಗತಿಯ ಪವನ್ ಶೆಣೈ. ಕೆ. ಇವರು ಇಂಟರಾಕ್ಟ್ ಕ್ಲಬ್ ಆಫ್ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಅಧ್ಯಕ್ಷರಾಗಿ ಆಯ್ಕೆಯಾದರು. ಅದೇ ರೀತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತದನಂತರ ರೋಟರಿ ಕ್ಲಬ್, ಪುತ್ತೂರು ಯುವ. ಇದರ ಅಧ್ಯಕ್ಷ ಪಶುಪತಿ ಶರ್ಮ ಇವರು ಪ್ರಮಾಣವಚನ ಸ್ವೀಕಾರ ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿದರು. ಮುಖ್ಯ ಅತಿಥಿಗಳಾದ ಝೋನ್ ವಿ ಯ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈ ಹಾಗೂ ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ವಸಂತಿ ಕೆದಿಲ, ಶಾಲಾ ಸಂಚಾಲಕ ಭರತ್ ಪೈ, ಪ್ರಾಂಶುಪಾಲೆ ಸಿಂಧೂ ವಿ. ಜಿ, ಉಪ ಪ್ರಾಂಶುಪಾಲೆ ಹೇಮಾವತಿ ಎಮ್. ಎಸ್. ಉಪಸ್ಥಿತರಿದ್ದರು.









