ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ

0

ದೇವರ ಆಶೀರ್ವಾದ ಸಿಗಬೇಕಾದರೆ ನಾವು ಸಜ್ಜನರಾಗಬೇಕು: ಅಶೋಕ್ ರೈ

ಪುತ್ತೂರು: ದೇವರಿದ್ದಾನಾ ಎಂದು ಕೇಳುವವರೂ ನಮ್ಮೊಳಗಿದ್ದಾರೆ ಆದರೆ ಯಾರೂ ಇದುವರೆಗೂ ದೇವರನ್ನು ನೇರವಾಗಿ ಕಂಡಿಲ್ಲ, ಮನೆಯೊಳಗೆ ಜೀವಂತವಾಗಿರುವ ತಾಯಿ ಎಂಬ ದೇವರನ್ನು ಎಲ್ಲರೂ ನಿತ್ಯ ಕಾಣುತ್ತಿದ್ದಾರೆ ಮನೆಯಲ್ಲಿರುವ ತಂದೆತಾಯಿ ಎಂಬ ದೇವರ ಆಶೀರ್ವಾದ ದೊರೆತರೆ ನಾವು ಉತ್ತಮ ಮಾನವರಾಗುವ ಜೊತೆಗೆ ಸಮಾಜದಲ್ಲಿ ಸಜ್ಜನರಾಗಲು ಸಾಧ್ಯವಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ತಾನ ಪಿಲಿಪ್ಪೆ ವಿಷ್ಣುನಗರ ಶ್ರೀ ಮಲರಾಯ ಮೂವರ್ ದೈವಂಗಳ ದೈವಸ್ಥಾನ ಶಿಬರಿಕಲ್ಲ ಮಾಡ ಇದರ ಆಶ್ರಯದಲ್ಲಿ ನಡೆದ ಶ್ರೀ ಕೃಷ್ಣಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಹಳೆಯ ಪರಂಪರಾಗತ ಸಂಸ್ಕಾರವನ್ನು ನಾವು ಎಂದಿಗೂ ಮರೆಯಬಾರದು. ಕುಟುಂಬ ಸಂಬಂಧವನ್ನು ಗಟ್ಟಿಗೊಳಿಸಬೇಕು, ತಂದೆ ತಾಯಿ ಜೀವಂತವಾಗಿರುವಾಗಲೇ ಅವರಿಗೆ ಗೌರವ ಕೊಡುವ ಕೆಲಸವನ್ನು ಮಾಡಿ ಎಂದು ಹೇಳಿದರು.
ರಾಜ್ಯ ಸರಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು ಈಗಾಗಲೇ ರಾಜ್ಯ ಸರಕಾರ ಮಹಿಳೆಯರ ಸಬಲೀಕರಣಕ್ಕಾಗಿಯೇ ನಾಲ್ಕು ಗ್ಯಾರಂಟಿಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಗಳು ಇಂದು ರಾಜ್ಯದಲ್ಲಿ ಲಕ್ಷಾಂತರ ಮನೆಗಳನ್ನು ಬೆಳಗಿಸುವ ಕೆಲಸವನ್ನು ಮಾಡುತ್ತಿದೆ. ಉಚಿತ ಬಸ್ ಮೂಲಕ ಪ್ರಯಾಣಿಸುವ ಬಡವರು ರಾಜ್ಯದ ದೇವಸ್ಥಾನಗಳಿಗೆ ತೆರಳಿ ದೇವರ ಆಶೀರ್ವಾದವನ್ನು ಬೇಡುತ್ತಿದ್ದಾರೆ. ಕರೆಂಟ್ ಬಿಲ್ ಉಚಿತವಾಗಿ ನೀಡುತ್ತಿದೆ, ಅನ್ನಾಭಾಗ್ಯದ ಅಕ್ಕಿಯ ಹಣ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ ಇದೆಲ್ಲವೂ ರಾಜ್ಯ ಸರಕಾರ ಮಹಿಳೆಯರಿಗಾಗಿ ಮಾಡಿದ ಯೋಜನೆಗಳಾಗಿದ್ದು ಎಲ್ಲರಿಗೂ ಇದರ ಪ್ರಯೋಜನ ದೊರೆಯುವಂತಾಗಿದೆ. ಇಷ್ಟೊಂದು ಮೊತ್ತದ ಯೋಜನೆಗಳನ್ನು ಜಾರಿ ಮಡಿದ ರಾಜ್ಯ ದೇಶದಲ್ಲಿ ಎಲ್ಲೂ ಇಲ್ಲ ಎಂದು ಹೇಳಿದ ಶಾಸಕರು ಜನರು ಸರಕಾರದ ಜೊತೆ ಬೆಂಬಲಕ್ಕೆ ನಿಲ್ಲಬೇಕು ಎಂದು ಮನವಿ ಮಾಡಿದರು.
ದೇವಸ್ಥಾನದ ಮೊಕ್ತೇಸರರಾದ ಕೃಷ್ಣಯ್ಯ ಕೆ ವಿಟ್ಲ ಅರಮನೆ, ನಿಕಟಪೂರ್ವ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು, ಕೃಷ್ಣ ಜನ್ಮಾಷ್ಟಮಿ ಅಧ್ಯಕ್ಷರಾದ ಕೇಶವ ಪಾಂಡೇಲು, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಹಿಂದುಳಿದ ವರ್ಗಗಳ ಬ್ಲಾಕ್ ಅಧ್ಯಕ್ಷರಾದ ಮೋಹನ್ ಗುರ್ಜಿನಡ್ಕ, ಎಸ್ ಸಿ ಘಟಕದ ಅಧ್ಯಕ್ಷ ರಾಮಣ್ಣ ಪಿಲಿಂಜ, ಕಿಸಾನ್ ಘಟಕದ ಅಧ್ಯಕ್ಷ ಎಲ್ಯಣ್ಣ ಪೂಜಾರಿ, ಕೋಡಿಂಬಾಡಿ ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಚೇತನ್ ಪೂಜಾರಿ ಓಜಾಲ, ವಿಶ್ವನಾಥ ಕೆಮ್ಮನಾಜೆ, ಕೇಶವ ಅರ್ಕ,ಲೋಹಿತ್ ಪಿಲಿಂಜ, ನಾರಾಯಣ ಬದಿಗುಡ್ಡೆ, ಕಾರ್ಯದರ್ಶಿ ಹರೀಶ್ ಮರ್ವಾಲ, ಕೋಶಾಧಿಕಾರಿ ಜಿನ್ನಪ್ಪ ಗೌಡ ಗಾಳಿಗುಡ್ಡೆ, ಉಪಾಧ್ಯಕ್ಷ ನಾರಾಯಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here