ಬೆಟ್ಟಂಪಾಡಿ: ಪ್ರಿಯದರ್ಶಿನಿಯಲ್ಲಿ ಶಿಕ್ಷಕರ ದಿನಾಚರಣೆ 

0

ಬೆಟ್ಟಂಪಾಡಿ: ಇಲ್ಲಿನ ವಿದ್ಯಾಗಿರಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ಸೆ. 5 ರಂದು ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಪರೀಕ್ಷಾಧಿಕಾರಿಗಳಾದ ಗುರುರಾಜ್ ಉಬರಡ್ಕ ಆಗಮಿಸಿ ‘ವೃತ್ತಿಯಲ್ಲಿ ಪವಿತ್ರವಾದದ್ದು ಶಿಕ್ಷಕ ವೃತ್ತಿ. ಒಬ್ಬ ಶಿಕ್ಷಕನೆಂದರೆ ಅವನೊಬ್ಬ ನಿರಂತರ ವಿದ್ಯಾರ್ಥಿಯೂ ಹೌದು. ಮಗುವಿನ ಪ್ರತಿಯೊಂದು ಶೈಕ್ಷಣಿಕ ಹೆಜ್ಜೆಗಳಲ್ಲೂ ಶಿಕ್ಷಕ ಬದಲಿ ಪೋಷಕರಾಗಿರುತ್ತಾರೆ’ ಎಂದು ಹೇಳಿ ಶಿಕ್ಷಕ ವೃಂದಕ್ಕೆ ಶುಭಾಶಯ ಕೋರಿದರು. 

ಎಲ್ಲಾ ಶಿಕ್ಷಕರಿಗೆ ಸ್ಮರಣಿಕೆ ಹಾಗೂ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ಹತ್ತನೇ ತರಗತಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಹಲವು ಸ್ಪರ್ಧೆಗಳನ್ನು ಆಯೋಜಿಸಿದ್ದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಸಂಚಾಲಕ ಡಾ. ಸತೀಶ್ ರಾವ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ  ಸುಬ್ರಹ್ಮಣ್ಯ ಭಟ್ ಶರವು, ರಾಧಾಕೃಷ್ಣ ರೈ ಪಟ್ಟೆ, ಸತೀಶ್ ರೈ ಕಟ್ಟಾವು, ಶಿವಕುಮಾರ್ ಬಲ್ಲಾಳ್ ಉಪಸ್ಥಿತರಿದ್ದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ  ರಂಗನಾಥ ರೈ ಗುತ್ತು  ಶುಭ ಹಾರೈಸಿದರು. ಮುಖ್ಯಗುರು ರಾಜೇಶ್ ಎನ್. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. 10ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಹರ್ಷ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here