ಸೆ. 9: ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ 6ನೇ ವರ್ಷದ ಗೋಕುಲಾಷ್ಟಮಿ ಆಚರಣೆ

0

ಬಾಲಕೃಷ್ಣ ತೊಟ್ಟಿಲ ಸಂಭ್ರಮ, ಕೃಷ್ಣ-ರಾಧ ಮೆರವಣಿಗೆ, ಪೋಷಕರ ಕ್ರೀಡಾಕೂಟ


ಬೆಟ್ಟಂಪಾಡಿ: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯಾದ ಬೆಟ್ಟಂಪಾಡಿ ವಿದ್ಯಾಗಿರಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ೬ನೇ ವರ್ಷದ ಗೋಕುಲಾಷ್ಟಮಿ ಆಚರಣೆ ಸೆ. 9 ರಂದು ಶಾಲಾ ಆವರಣದಲ್ಲಿ ವಿಜೃಂಭೆಯಿಂದ ನೆರವೇರಲಿದೆ.


ಉದ್ಘಾಟನಾ ಕಾರ್ಯಕ್ರಮ
ಬೆಳಿಗ್ಗೆ 9 ಗಂಟೆಗೆ ಶಾಲೆಯಲ್ಲಿ ಶ್ರೀ ಬಾಲಕೃಷ್ಣನ ತೊಟ್ಟಿಲ ಸಂಭ್ರಮ ನಡೆದು ಬಳಿಕ ರೆಂಜ ಶ್ರೀರಾಮನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ ವೈಭವದ ಶ್ರೀಕೃಷ್ಣ ವೇಷಧಾರಿಗಳ ಮೆರವಣಿಗೆಯ ಉದ್ಘಾಟನೆ ನಡೆಯಲಿದೆ. ಪ್ರಗತಿಪರ ಕೃಷಿಕ ಶಂಕರ ನಾರಾಯಣ ರಾವ್‌ ಪಾರ ಉದ್ಘಾಟಿಸಲಿದ್ದಾರೆ. ಗುರುಸ್ವಾಮಿ ಕೃಷ್ಣಪ್ಪ ರೆಂಜ ಹಾಗೂ ಬೆಟ್ಟಂಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಧನಂಜಯ ರೆಂಜ ರವರು ಗೌರವ ಉಪಸ್ಥಿತಿ ಇರಲಿದ್ದಾರೆ.
ಮೆರವಣಿಗೆ ಬಳಿಕ ಶಾಲೆಯಲ್ಲಿ ಪೋಷಕರಿಗೆ ವಿವಿಧ ಸ್ಪರ್ಧಾಕೂಟ ನಡೆಯಲಿದೆ.


ಧಾರ್ಮಿಕ ಸಭೆ
ಮಧ್ಯಾಹ್ನ ಭೋಜನ ನಡೆದ ಬಳಿಕ ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ವೇ.ಮೂ. ದಿನೇಶ ಮರಡಿತ್ತಾಯ ಗುಮ್ಮಟೆಗದ್ದೆಯವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್‌ ಪುತ್ತೂರು ಸೆಂಟ್ರಲ್‌ನ ನಿರ್ದೇಶಕ ರಾಕೇಶ್‌ ಶೆಟ್ಟಿ, ಕಮಲ್‌ ಕನ್‌ಸ್ಟ್ರಕ್ಷನ್‌ನ ಕಮಲ್‌ ಕುಲಾಲ್‌ ಆನಾಜೆ, ಪುತ್ತೂರು ಈಶಾನ್ಯ ಬಿಲ್ಡರ್ಸ್‌ನ ಶಂಕರ ಭಟ್‌, ಪ್ರಗತಿಪರ ಕೃಷಿ ನರೇಂದ್ರ ಕುಮಾರ್‌ ಆಜಡ್ಕ, ಬೆಟ್ಟಂಪಾಡಿ ಸಿ.ಎ. ಬ್ಯಾಂಕ್‌ ಸಿಬಂದಿ ಸುವರ್ಣ ಆರ್‌.ಬಿ. ಭಾಗವಹಿಸಲಿದ್ದಾರೆ.


ಸ್ಪರ್ಧೆಗಳು
ಪೋಷಕರ ಸ್ಪರ್ಧಾಕೂಟದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿದ್ದು, ಮಡಕೆ ಒಡೆಯುವುದು, ಸಂಗೀತ ಕುರ್ಚಿ, ಹಗ್ಗಜಗ್ಗಾಟ, ಭಕ್ತಿಗೀತೆ ಮತ್ತು ಮನೋರಂಜನಾ ಆಟಗಳು ನಡೆಯಲಿದೆ.


ಮೆರವಣಿಗೆ ವಿಶೇಷತೆ
ಕೃಷ್ಣ-ರಾಧಾ ವೇಷಧಾರಿಗಳ ವೈಭವದ ಮೆರವಣಿಗೆ ಸಿಂಗಾರಿ ಮೇಳ, ಚೆಂಡೆ ವಾದನಗಳೊಂದಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಶಾಲೆಯ ವಿದ್ಯಾರ್ಥಿಗಳಲ್ಲದೇ ಸ್ಥಳೀಯ ಇತರ 7 ವರ್ಷದವರೆಗಿನ ಮಕ್ಕಳಿಗೆ ಕೃಷ್ಣ-ರಾಧಾ ವೇಷ ಧರಿಸಿ ಮೆರವಣಿಗಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಕೃಷ್ಣ-ರಾಧ ವೇಷಧಾರಿಗಳಿಗೆ ಪುತ್ತೂರು ಮುಳಿಯ ಜ್ಯುವೆಲ್ಸ್‌ ಹಾಗೂ ಶಾಲೆಯ ವತಿಯಿಂದ ಆಕರ್ಷಕ ಉಡುಗೊರೆ ಇರಲಿದೆ.

LEAVE A REPLY

Please enter your comment!
Please enter your name here