ಉಪ್ಪಿನಂಗಡಿ ಅರಫಾ ವಿದ್ಯಾಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ

0

ಉಪ್ಪಿನಂಗಡಿ: ಅರಫಾ ವಿದ್ಯಾಕೇಂದ್ರ ಉಪ್ಪಿನಂಗಡಿ ಇಲ್ಲಿ ಸೆ.5ರಂದು ವಿದ್ಯಾರ್ಥಿಗಳ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.


ಶಾಲೆಯ ಮುಖ್ಯಶಿಕ್ಷಕಿ ಕವಿತಾನವೀನ್ ಕುಲಾಲ್‌ರವರು ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳೇ ಒಂದು ದಿನದ ಶಿಕ್ಷಕರಾಗಿ ಶಿಕ್ಷಕರಿಗೆ ವಿವಿಧ ವಿನೋದಾವಳಿಗಳ ಕಾರ್‍ಯಕ್ರಮ ಆಯೋಜಿಸಿ ಶಿಕ್ಷಕರನ್ನು ಮನರಂಜಿಸಿದರು ಮತ್ತು ಬಹುಮಾನ ನೀಡಿ ಗೌರವಿಸಿದರು. ಕಾರ್‍ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಭಾಗವಹಿಸಿದರು. ವಿದಾರ್ಥಿನಿ ಆಯಿಶತುಲ್ ನಿಶಾನ ಸ್ವಾಗತಿಸಿ, ಸಾರಾ ಮೈಮುನ ವಂದಿಸಿದರು. ಫಾತಿಮ ಹಿಬಾ ನಿರೂಪಿಸಿದರು. ಇತರೇ ವಿದ್ಯಾರ್ಥಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here