ಕಾಣಿಯೂರು: ಕುದ್ಮಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 21ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಕುದ್ಮಾರು ಸ್ಕಂದ ಶ್ರೀ ಕ್ರೀಡಾಂಗಣದಲ್ಲಿ ಆಚರಿಸಲಾಯಿತು.
ಕುದ್ಮಾರು ಮತ್ತು ಬರೆಪ್ಪಾಡಿ ಅಂಗನವಾಡಿಯ ಪುಟಾಣಿಗಳು ಶ್ರೀ ಕೃಷ್ಣ ವೇಷದಾರಿಗಳ ಶೋಭ ಯಾತ್ರೆಯು ಕುದ್ಮಾರು ಅಂಗನವಾಡಿಯಿಂದ ಹೊರಟು ಕ್ರೀಡಾಂಗಣಕ್ಕೆ ಆಗಮಿಸಿ ಮಡಕೆ ಒಡೆಯುವುದರ ಮುಖಾಂತರ ಚಾಲನೆ ನೀಡಲಾಯಿತು. ಊರಿನ ಗ್ರಾಮಸ್ಥರಿಗೆ ಕಂಬದ ನಡಿಗೆ, ವಾಲಿಬಾಲ್ ಹಗ್ಗಜಗಾಟ ಮಡಕೆ ಹೊಡೆಯುವುದು, ವಾಲಿಬಾಲ್, ತ್ರೋಬಾಲ್, ಹಗ್ಗ ಜಗ್ಗಾಟ, ಭಕ್ತಿ ಗೀತೆ ಸ್ಪರ್ಧೆ ಪುಟಾಣಿ ಮಕ್ಕಳಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ ನಡೆಸಲಾಯಿತು. ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ಧಾರ್ಮಿಕ ಕಾರ್ಯಕ್ರಮವನ್ನು ರಮಾನಂದ ಭಟ್ ನೆರವೇರಿಸಿದರು. ಈ ಸಂದರ್ಭದಲ್ಲಿ ಕುದ್ಮಾರು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ರಾಜ್ ದೀಪಕ್ ಜೈನ್ ಕುದ್ಮಾರುಗುತ್ತು, ಯಶೋಧರ್ ಕೆಡೆಂಜಿಕಟ್ಟ, ದೇವರಾಜ್ ನೂಜಿ, ಉತ್ಸವ ಸಮಿತಿಯ ಅಧ್ಯಕ್ಷರಾದ ಅಂಚನ್ ಡೆಬ್ಬೆಲಿ, ಕಾರ್ಯದರ್ಶಿ ಬಾಲಚಂದ್ರ ನೂಜಿ, ಲೋಕೇಶ್, ಲೋಹಿತಾಕ್ಷ ಕೆಡೆಂಜಿಕಟ್ಟ ಪದ್ಮನಾಭ ಕೆರೆನಾರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಕ್ರೀಡಾಕೂಟದ ತೀರ್ಪುಗಾರರಾಗಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ರೇವತಿ ಕುದ್ಮಾರು, ಕುದ್ಮಾರು ಶಾಲಾ ಮುಖ್ಯ ಗುರುಗಳಾದ ಕುಶಾಲಪ್ಪ ಗೌಡ, ಮೇದಪ್ಪ ಗೌಡ, ರಾಧಾ ನಡುಮನೆ ಕವಿತಾ ದೇವರಗುಡ್ಡೆ, ಆನಂದ ಕೊಪ್ಪ ಸಹಕರಿಸಿದರು.