ಪುತ್ತೂರು: ಬಹುಮುಖ ಪ್ರತಿಭೆಯ ಸಂಘಟನಾ ಚತುರೆ ಹಿಂದಿ ರಾಷ್ಟ್ರಭಾಷಾ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ, ಬಂಟ್ವಾಳ ತಾಲೂಕಿನ ಕೊಡಂಗೆ ಸರಕಾರಿ ಪ್ರೌ.ಶಾಲೆಯ ಹಿಂದಿ ಶಿಕ್ಷಕಿ ಗೀತಾಕುಮಾರಿ ಯನ್.ವಿ.ರವರು ದಕ್ಷಿಣ ಕನ್ನಡ ಜಿಲ್ಲಾ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸರ್ವಾನುಮತದಿಂದ ಅಧಿಕೃತವಾಗಿ ಲಕ್ಷ್ಮಣ ಕೆ.ವಿ., ಪ್ರಧಾನ ಕಾರ್ಯದರ್ಶಿಯಾಗಿ ವೆಂಕಟೇಶ್ ಕೆ., ಕೋಶಾಧ್ಯಕ್ಷರಾಗಿ ರಮಾನಂದ, ಸಂಘಟನಾ ಕಾರ್ಯದರ್ಶಿಯಾಗಿ ಜಯರಾಮ, ಸಹಕಾರ್ಯದರ್ಶಿಯಾಗಿ ಶ್ರೀದೇವಿ ಆಯ್ಕೆಗೊಂಡರು. ರಾಜ್ಯಾಧ್ಯಕ್ಷ ಡಿ.ಎಂ.ರಾಥೋಡ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಮಟ್ಟದ ಸಭೆಯಲ್ಲಿ ಈ ಆಯ್ಕೆಗಳನ್ನು ಅಧಿಕೃತವಾಗಿ ಘೋಷಿಸಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.