ಪುತ್ತೂರು: ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಜಿಲ್ಲೆಯ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಚುನಾವಣಾ ಕ್ಷೇತ್ರದ ವ್ಯಾಪ್ತಿಯನ್ನು ನಿಗದಿಪಡಿಸಿ ಕರ್ನಾಟಕ ರಾಜ್ಯ ಪತ್ರದಲ್ಲಿ ಹೊರಡಿಸಿದೆ.
ದ.ಕ ಜಿಲ್ಲಾ ಪಂಚಾಯತ್ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 35 ಏಕ ಸದಸ್ಯ ಜಿಲ್ಲಾ ಪಂಚಾಯತ್ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಲಾಗಿದ್ದು ಈ ಪೈಕಿ ಸುಳ್ಯದಲ್ಲಿ 3, ಕಡಬದಲ್ಲಿ 3 ಹಾಗೂ ಪುತ್ತೂರಿನಲ್ಲಿ 4 ಜಿ.ಪಂ.ಕ್ಷೇತ್ರಗಳನ್ನು ಮಾಡಲಾಗಿದೆ. ದ.ಕ ಜಿಲ್ಲಾ ಪಂಚಾಯತ್ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 126 ಏಕ ಸದಸ್ಯ ತಾಲೂಕು ಪಂಚಾಯತ್ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಲಾಗಿದ್ದು ಈ ಪೈಕಿ ಸುಳ್ಯದಲ್ಲಿ 11, ಕಡಬದಲ್ಲಿ 12 ಹಾಗೂ ಪುತ್ತೂರಿನಲ್ಲಿ 14ತಾ.ಪಂ ಕ್ಷೇತ್ರಗಳನ್ನಾಗಿ ಮಾಡಲಾಗಿದೆ.
ಜಿ.ಪಂ ಹಾಗೂ ತಾ.ಪಂ ಚುನಾಯಿತ ಸದಸ್ಯರ ಸಂಖ್ಯೆ ಮತ್ತು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ ಪ್ರಕಟಣೆಯ ದಿನಾಂಕದಿಂದ 15 ದಿವಸಗಳ ಒಳಗಾಗಿ ಅಂದರೆ ಸೆ.19ರ ಸಂಜೆ 5 ಗಂಟೆಯ ಒಳಗಾಗಿ ಆನ್‌ಲೈನ್ ಮೂಲಕ ಅಥವಾ ಖುದ್ದಾಗಿ/ ಅಂಚೆಯ ಮೂಲಕ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ, 3ನೇ ಗೇಟ್, 2ನೇ ಮಹಡಿ ಕೊಠಡಿ ಸಂಖ್ಯೆ:222/ಎ. ಬಹುಮಹಡಿ ಕಟ್ಟಡ, ಅಂಬೇಡ್ಕರ್ ಬೀದಿ ಬೆಂಗಳೂರು-56೦೦೦1 ಹಾಗೂ ವೆಬ್ ppm://bm.hZZpZhZ.dlq.fÕ/b/maÔfÑ ZqZ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು ಕ್ಲಿಕ್ ಮಾಡಿ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಸದಸ್ಯ ಕಾರ್ಯದರ್ಶಿ ಡಾ. ನೋಮೇಶ್ ಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಕ್ಷೇತ್ರ ಹಾಗೂ ವ್ಯಾಪ್ತಿಗಳು:
ಪುತ್ತೂರು ತಾಲೂಕಿನ ಉಪ್ಪಿನಂಗಡಿ ಕ್ಷೇತ್ರ-ಕೋಡಿಂಬಾಡಿ, ಬೆಳ್ಳಿಪ್ಪಾಡಿ. 34 ನೆಕ್ಕಿಲಾಡಿ, ಉಪ್ಪಿನಂಗಡಿ, ಬಜತ್ತೂರು, ಹಿರೇಬಂಡಾಡಿ, ಆರ್ಯಾಪು ಕ್ಷೇತ್ರ-ಕಬಕ, ಕೊಡಿಪ್ಪಾಡಿ, ಬನ್ನೂರು, ಪಡ್ನೂರು, ಚಿಕ್ಕಮುಡ್ನೂರು, ಬಲ್ನಾಡು, ಆರ್ಯಾಪು, ಕುರಿಯ, ಬೆಟ್ಟಂಪಾಡಿ, ಇರ್ದೆ, ಪಾಣಾಜೆ, ನರಿಮೊಗರು ಕ್ಷೇತ್ರ-ನರಿಮೊಗರು, ಶಾಂತಿಗೋಡು, ಸರ್ವೆ, ಮುಂಡೂರು, ಕೆಮ್ಮಿಂಜೆ, ಕೆದಂಬಾಡಿ, ಕೆಯ್ಯೂರು, ಕೊಳ್ತಿಗೆ, ನೆಟ್ಟಣಿಗೆ ಮುಡ್ನೂರು ಕ್ಷೇತ್ರ_ಒಳಮೊಗ್ರು, ನಿಡ್ಪಳ್ಳಿ, ಅರಿಯಡ್ಕ, ಮಾಡ್ನೂರು, ಬಡಗನ್ನೂರು, ಪಡುವನ್ನೂರು, ನೆಟ್ಟಣಿಗೆ ಮುಡ್ನೂರು ಗ್ರಾಮಗಳನ್ನು ಹೊಂದಿದೆ.
ಕಡಬ ತಾಲೂಕಿನ ಕೊಯಿಲ ಕ್ಷೇತ್ರ-ಕೊಯಿಲ, ರಾಮಕುಂಜ, ಹಳೆನೇರಂಕಿ, ಗೋಳಿತೊಟ್ಟು, ಕೊಣಾಲು, ಆಲಂತಾಯ, ಕೌಕ್ರಾಡಿ, ಇಚ್ಲಂಪಾಡಿ, ನೆಲ್ಯಾಡಿ, ಆಲಂಕಾರು, ಸುಬ್ರಹ್ಮಣ್ಯ ಕ್ಷೇತ್ರ-ಸುಬ್ರಹ್ಮಣ್ಯ, ಏನೆಕಲ್ಲು, ಐನೆಕಿದು, ಬಳ್ಪ, ಕೇನ್ಯ, ಬಿಳಿನೆಲೆ, ಐತ್ತೂರು, ಕೊಂಬಾರು, ಸಿರಿಬಾಗಿಲು, ಕೊಣಾಜೆ, ನೂಜಿಬಾಳ್ತಿಲ, ರೆಂಜಿಲಾಡಿ, ಬಂಟ್ರ, 102 ನೆಕ್ಕಿಲಾಡಿ, ಶಿರಾಡಿ, ಕುಟ್ರುಪ್ಪಾಡಿ ಕ್ಷೇತ್ರ-ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ, ಬೆಳಂದೂರು, ಕುದ್ಮಾರು, ಕಾಮಣ, ಕಾಣಿಯೂರು, ದೋಳ್ಪಾಡಿ, ಚಾರ್ವಾಕ, ಎಡಮಂಗಲ, ಎಣ್ಮೂರು, ಪೆರಾಬೆ, ಕುಂತೂರು, ಕುಟ್ರುಪ್ಪಾಡಿ ಹಾಗೂ ಬಲ್ಯ ಗ್ರಾಮಗಳನ್ನು ಒಳಗೊಂಡಿದೆ.
ಬಂಟ್ವಾಳ ತಾಲೂಕಿನ ವಿಟ್ಲ ಹೋಬಳಿಯ ಮಾಣಿ ಕ್ಷೇತ್ರ-ಮಾಣಿ, ಪೆರಾಬೆ, ನೆಟ್ಲಮುಡ್ನೂರು, ವೀರಕಂಬ, ಅನಂತಾಡಿ, ವಿಟ್ಲಪಡ್ನೂರು, ಬೋಳಂತೂರು, ಕೆದಿಲ, ಪೆರ್ನೆ, ಬಿಳಿಯೂರು, ಕೊಳ್ನಾಡು ಕ್ಷೇತ್ರ-ಕೊಳ್ನಾಡು, ಕನ್ಯಾನ, ಕರೋಪಾಡಿ, ಮಂಚಿ, ಸಾಲೆತ್ತೂರು, ಪುಣಚ ಕ್ಷೇತ್ರ-ಕೇಪು, ಪುಣಚ, ಪೆರುವಾಯಿ, ಮಾಣಿಲ, ಅಳಿಕೆ, ವಿಟ್ಲ ಮುಡ್ನೂರು, ಇಡ್ಕಿದು ಹಾಗೂ ಕುಳ ಗ್ರಾಮಗಳನ್ನು ಒಳಗೊಂಡಿದೆ.
ತಾಲೂಕು ಪಂಚಾಯತ್ ಕ್ಷೇತ್ರ ಹಾಗೂ ವ್ಯಾಪ್ತಿಗಳು:
ಪುತ್ತೂರು ತಾಲೂಕಿನ ಕಬಕ ಕ್ಷೇತ್ರ-ಕಬಕ, ಬನ್ನೂರು, ಪಡ್ನೂರು, ಚಿಕ್ಕಮುಡ್ನೂರು, ಬಲ್ನಾಡು ಕ್ಷೇತ್ರ-ಬಲ್ನಾಡು, ಕುಡಿಪ್ಪಾಡಿ, 34 ನೆಕ್ಕಿಲಾಡಿ ಕ್ಷೇತ್ರ-ಕೋಡಂಬಾಡಿ, ಬೆಳ್ಳಿಪ್ಪಾಡಿ, 34 ನೆಕ್ಕಿಲಾಡಿ, ಉಪ್ಪಿನಂಗಡಿ ಕ್ಷೇತ್ರ-ಉಪ್ಪಿನಂಗಡಿ, ಬಜತ್ತೂರು ಕ್ಷೇತ್ರ-ಬಜತ್ತೂರು, ಹಿರೇಬಂಡಾಡಿ, ನರಿಮೊಗರು ಕ್ಷೇತ್ರ-ನರಿಮೊಗರು, ಶಾಂತಿಗೋಡು, ಸರ್ವೆ ಕ್ಷೇತ್ರ-ಸರ್ವೆ, ಮುಂಡೂರು, ಕೆಮ್ಮಿಂಜೆ, ಕೆದಂಬಾಡಿ, ಆರ್ಯಾಪು ಕ್ಷೇತ್ರ-ಆರ್ಯಾಪು, ಕುರಿಯ, ಬೆಟ್ಟಂಪಾಡಿ ಕ್ಷೇತ್ರ-ಬೆಟ್ಟಂಪಾಡಿ, ಇರ್ದೆ, ಪಾಣಾಜೆ, ಒಳಮೊಗ್ರು ಕ್ಷೇತ್ರ-ಒಳಮೊಗ್ರು, ನಿಡ್ಪಳ್ಳಿ, ಕೊಳ್ತಿಗೆ ಕ್ಷೇತ್ರ-ಕೊಳ್ತಿಗೆ, ಕೆಯ್ಯೂರು, ಮಾಡ್ನೂರು ಕ್ಷೇತ್ರ-ಮಾಡ್ನೂರು, ಅರಿಯಡ್ಕ, ಪಡುವನ್ನೂರು ಕ್ಷೇತ್ರ-ಬಡಗನ್ನೂರು, ಪಡುವನ್ನೂರು, ನೆಟ್ಟಣಿಗೆ ಮುಡ್ನೂರು ಕ್ಷೇತ್ರ-ನೆಟ್ಟಣಿಗೆ ಮುಡ್ನೂರು ಗ್ರಾಮಗಳನ್ನು ಹೊಂದಿದೆ.
ಕಡಬ ತಾಲೂಕಿನ ಕೊಯಿಲ ಕ್ಷೇತ್ರ-ಕೊಯಿಲ, ರಾಮಕುಂಜ, ನೆಲ್ಯಾಡಿ ಕ್ಷೇತ್ರ-ನೆಲ್ಯಾಡಿ, ಕೊಣಾಲು, ಗೋಳಿತೊಟ್ಟು, ಆಲಂಕಾರು ಕ್ಷೇತ್ರ-ಆಲಂಕಾರು, ಹಳೆನೇರಂಕಿ, ಆಲಂತಾಯ, ಕೌಕ್ರಾಡಿ ಕ್ಷೇತ್ರ-ಕೌಕ್ರಾಡಿ, ಇಚ್ಲಂಪಾಡಿ, ಐತ್ತೂರು ಕ್ಷೇತ್ರ-ಐತ್ತೂರು, ಕೊಂಬಾರು, ಸಿರಿಬಾಗಿಲು, ಶಿರಾಡಿ, ನೂಜಿಬಾಳ್ತಿಲ ಕ್ಷೇತ್ರ-ನೂಜಿಬಾಳ್ತಿಲ, ಕೊಣಾಜೆ, ರೆಂಜಿಲಾಡಿ, ಬಂಟ್ರ, 102 ನೆಕ್ಕಿಲಾಡಿ, ಸುಬ್ರಹ್ಮಣ್ಯ ಕ್ಷೇತ್ರ-ಸುಬ್ರಹ್ಮಣ್ಯ, ಬಿಳಿನೆಲೆ, ಬಳ್ಪ ಕ್ಷೇತ್ರ-ಐನೆಕಿದು, ಏನೆಕಲ್ಲು, ಬಳ್ಪ, ಕೇನ್ಯ, ಸವಣೂರು ಕ್ಷೇತ್ರ-ಸವಣೂರು, ಕುದ್ಮಾರು, ಪುಣ್ಚಪ್ಪಾಡಿ, ಪಾಲ್ತಾಡಿ, ಚಾರ್ವಾಕ ಕ್ಷೇತ್ರ-ಚಾರ್ವಕ, ಕಾಮಣ, ದೋಳ್ಪಾಡಿ, ಬೆಳಂದೂರು, ಕಾಣಿಯೂರು, ಕುಟ್ರಪ್ಪಾಡಿ ಕ್ಷೇತ್ರ-ಕುಟ್ರುಪ್ಪಾಡಿ, ಎಡಮಂಗಲ, ಎಣ್ಮೂರು, ಪೆರಾಬೆ ಕ್ಷೇತ್ರ-ಪೆರಾಬೆ, ಕುಂತೂರು ಹಾಗೂ ಬಲ್ಯ ಗ್ರಾಮಗಳನ್ನು ಒಳಗೊಂಡಿದೆ.
ಬಂಟ್ವಾಳ ತಾಲೂಕಿನ ವಿಟ್ಲ ಹೋಬಳಿಯ ಮಾಣಿ ಕ್ಷೇತ್ರ-ಮಾಣಿ, ಪೆರಾಜೆ, ನೆಟ್ಲಮುಡ್ನೂರು, ವೀರಕಂಬ ಕ್ಷೇತ್ರ-ವೀರಕಂಬ, ಅನಂತಾಡಿ, ವಿಟ್ಲ ಪಡ್ನೂರು ಕ್ಷೇತ್ರ-ವಿಟ್ಲ ಪಡ್ನೂರು, ಬೋಳಂತೂರು, ಕೆದಿಲ ಕ್ಷೇತ್ರ- ಕೆದಿಲ, ಪೆರ್ನೆ, ಬಿಳಿಯೂರು, ಕೊಳ್ನಾಡು ಕ್ಷೇತ್ರ-ಕೊಳ್ನಾಡು, ಕನ್ಯಾನ ಕ್ಷೇತ್ರ-ಕನ್ಯಾನ, ಕರೋಪಾಡಿ, ಮಂಚಿ ಕ್ಷೇತ್ರ-ಮಂಚಿ, ಸಾಲೆತ್ತೂರು, ಪುಣಚ ಕ್ಷೇತ್ರ-ಕೇಪು, ಪುಣಚ, ಅಳಿಕೆ ಕ್ಷೇತ್ರ-ಪೆರುವಾಯಿ, ಮಾಣಿಲ, ಅಳಿಕೆ, ವಿಟ್ಲಮುಡ್ನೂರು ಕ್ಷೇತ್ರ-ವಿಟ್ಲಮುಡ್ನೂರು, ಇಡ್ಕಿದು, ಕುಳ ಗ್ರಾಮಗಳನ್ನು ಒಳಗೊಂಡಿದೆ.