ಈ ಬಾರಿ ಗಣೇಶ ಚತುರ್ಥಿಗೆ ಸರಕಾರಿ ರಜೆ ಇಲ್ಲ

0

ಸೆ.18ರಂದು ಸರಕಾರಿ ರಜೆ ,ಸೆ.19ರಂದು ಗಣೇಶ ಚತುರ್ಥಿ

ಸವಣೂರು : ಈ ಬಾರಿಯ ಗಣೇಶ ಚತುರ್ಥಿಗೆ ಸರಕಾರಿ ರಜೆ ಇಲ್ಲ.ಗಣೇಶ ಚತುರ್ಥಿಯ ಬದಲಿಗೆ ಮುನ್ನಾ ದಿನ ಗೌರಿ ಹಬ್ಬಕ್ಕೆ ಸರಕಾರಿ ರಜೆ ನೀಡಲಾಗಿದೆ.2023ನೇ ಸಾಲಿನಲ್ಲಿ ರಾಜ್ಯಾದ್ಯಂತ 19 ಸಾರ್ವತ್ರಿಕ ರಜೆ ಮತ್ತು ಸರಕಾರಿ ನೌಕರರಿಗೆ 17 ಪರಿಮಿತ ರಜೆಗಳೂ ಸೇರಿದಂತೆ ಒಟ್ಟು 36 ರಜೆಗಳನ್ನು ಘೋಷಿಸಲಾಗಿತ್ತು.

ಸರಕಾರಿ ಘೋಷಿಸಿದ ರಜೆಗಳಲ್ಲಿ ಸೆಪ್ಟೆಂಬರ್‌ ತಿಂಗಳಿನಲ್ಲಿ 2 ಸಾರ್ವತ್ರಿಕ ರಜೆಗಳನ್ನು ನೀಡಿದ್ದು ,ಅದರಲ್ಲಿ ಸೆ.18ರಂದು ಗಣೇಶ ಚತುರ್ಥಿಗೆ ಮತ್ತು ಸೆ.28ರಂದು ಈದ್‌ ಮಿಲಾದ್‌ ಗೆ ರಜೆ.ಈ ರಜೆಗಳ ಪಟ್ಟಿಯಲ್ಲಿ ಸೇರಿಸಿರುವ ಮುಸಲ್ಮಾನರ ಹಬ್ಬಗಳನ್ನು ನಿಗದಿತ ದಿನಾಂಕಗಳು ಬೀಳದಿದ್ದರೆ ಹಬ್ಬದ ದಿನದಂದೇ ಮುಸಲ್ಮಾನ ಸರ್ಕಾರಿ ಅಧಿಕಾರಿಗಳಿಗೆ ರಜೆ ನೀಡಬೇಕೆಂದೂ ಸೂಚನೆ ನೀಡಲಾಗಿತ್ತು.ಆದರೆ ಹಿಂದೂ ಹಬ್ಬಗಳ ರಜೆಯ ದಿನಾಂಕ ಬದಲಾವಣೆಗೆ ಯಾವುದೇ ಸೂಚನೆ ಇರದ ಕಾರಣ, ಸೆ.19ರಂದೇ ಗಣೇಶ ಚತುರ್ಥಿಗೆ ಸರಕಾರಿ ರಜೆ ನೀಡುವಂತೆ ಸಾರ್ವಜನಿಕ ವಲಯದಿಂದ ಬೇಡಿಕೆ ವ್ಯಕ್ತವಾಗಿದೆ.ಗಣೇಶ ಚತುರ್ಥಿ ರಜೆಯನ್ನು ಸೆ.18ರ ಗೌರಿಹಬ್ಬದ ಬದಲಿಗೆ ಸೆ.19ರ ಗಣೇಶ ಚತುರ್ಥಿಯಂದೇ ರಜೆ ನೀಡಬೇಕಿದೆ.

LEAVE A REPLY

Please enter your comment!
Please enter your name here