ಇಚ್ಲಂಪಾಡಿ: ರಸ್ತೆ ಸಂಪರ್ಕ ಬಂದ್-ತಹಶೀಲ್ದಾರ್‌ರಿಂದ ತೆರವು

0

ನೆಲ್ಯಾಡಿ: ಗ್ರಾಮ ಪಂಚಾಯಿತಿ ಸಂಪರ್ಕ ರಸ್ತೆ ಬಂದ್ ಮಾಡಿ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಕಡಬ ತಹಶೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರು ರಸ್ತೆ ಸಂಪರ್ಕ ಬಂದ್ ತೆರವುಗೊಳಿಸಿರುವ ಘಟನೆ ಸೆ.8ರಂದು ಇಚ್ಲಂಪಾಡಿ ಗ್ರಾಮದಲ್ಲಿ ನಡೆದಿದೆ.


ಇಚ್ಲಂಪಾಡಿ ಗ್ರಾಮದ ಬದನೆ ಎಂಬಲ್ಲಿಗೆ ಸಂಪರ್ಕಿಸುವ ಸಾರ್ವಜನಿಕ ರಸ್ತೆಯನ್ನು ಸ್ಥಳೀಯರಾದ ವೆಂಕಪ್ಪ ಪೂಜಾರಿ, ರೂಪೇಶ್ ಕುಮಾರ್‌ರವರು ಬಂದ್ ಮಾಡಿ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಇಚ್ಲಂಪಾಡಿ ಗ್ರಾಮದ ಬದನೆ ನಿವಾಸಿ ಶ್ರೀನಿವಾಸ ಪೂಜಾರಿಯವರು ಜಿಲ್ಲಾಧಿಕಾರಿ, ಪುತ್ತೂರು ಸಹಾಯಕ ಆಯುಕ್ತರಿಗೆ, ಕಡಬ ತಹಶೀಲ್ದಾರ್, ಗ್ರಾಮ ಪಂಚಾಯಿತಿ ಹಾಗೂ ಪೊಲೀಸರಿಗೆ ದೂರು ನೀಡಿ ರಸ್ತೆ ಸಂಪರ್ಕ ಬಂದ್ ತೆರವುಗೊಳಿಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಸೆ.8ರಂದು ಸ್ಥಳಕ್ಕೆ ಭೇಟಿ ನೀಡಿದ ಕಡಬ ತಹಶೀಲ್ದಾರ್ ಪ್ರಭಾಕರ ಕಜುರೆ, ಕಂದಾಯ ನಿರೀಕ್ಷಕ ಪೃಥ್ವಿರಾಜ್‌ರವರು ಸ್ಥಳ ಪರಿಶೀಲನೆ ನಡೆಸಿ ಎರಡೂ ಕಡೆಯವರ ಜೊತೆಗೆ ಮಾತುಕತೆ ನಡೆಸಿದರು. ಬಳಿಕ ಬಂದ್ ಮಾಡಲಾಗಿದ್ದ ರಸ್ತೆಯನ್ನು ಹಿಟಾಚಿ ಬಳಸಿ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ. ವೆಂಕಪ್ಪ ಪೂಜಾರಿಯವರ ಮನವಿ ಬಗ್ಗೆಯೂ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ತಹಶೀಲ್ದಾರ್ ಪ್ರಭಾಕರ ಕಜುರೆ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here