ಮಾಣಿ: ಕರ್ನಾಟಕ ಪ್ರೌಢ ಶಾಲೆಯಲ್ಲಿ ವಿಶ್ವ ಸಾಕ್ಷರತಾ ದಿನ

0

ವಿಟ್ಲ: ಒಂದು ಕಾಲದಲ್ಲಿ ಅನಕ್ಷರಸ್ಥರನ್ನು ಖಾಲಿ ಕಾಗದಕ್ಕೆ ಹೆಬ್ಬೆಟ್ಟು ಹಾಕಿಸಿ ವಂಚಿಸುತ್ತಿದ್ದರು, ಈಗ ಕಾಲ ಬದಲಾಗಿದೆ, ಇದಕ್ಕೆ ಕಾರಣ ವಯಸ್ಕರ – ಶಿಕ್ಷಣ, ಮುಂದಿನ ದಿನಗಳಲ್ಲಿ ತಾಂತ್ರಿಕ – ಶಿಕ್ಷಣ ಇಲ್ಲದಿದ್ದರೆ ನಾವೂ ಅನಕ್ಷರಸ್ಥರು ಎಂದು ಕರ್ನಾಟಕ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಎಸ್. ಚೆನ್ನಪ್ಪ ಗೌಡರವರು ಹೇಳಿದರು.

ಅವರು ಮಾಣಿಯ ಕರ್ನಾಟಕ ಪ್ರೌಢಶಾಲೆ ನಡೆದ 57ನೇ ಅಂತರರಾಷ್ಟ್ರೀಯ ಸಾಕ್ಷರತಾ ದಿನದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿಂದಿ ಶಿಕ್ಷಕರಾದ ಜಯರಾಮ ಕಾಂಚನ ಮಾತನಾಡಿ ಆಹಾರ ಆಶ್ರಯ ಇತ್ಯಾದಿ ಎಷ್ಟು ಮುಖ್ಯವೋ ಶಿಕ್ಷಣವು ಅಷ್ಟೇ ಮುಖ್ಯ ಎಂರಲ್ಲದೆ ಪ್ರಮಾಣವಚನ ಬೋಧಿಸಿ ರಸಪ್ರಶ್ನೆ ಕಾರ್ಯಕ್ರಮ ನಡೆಸಿದರು.

ವೇದಿಕೆಯಲ್ಲಿ ಶಿಕ್ಷಕರಾದ ಎನ್. ಗಂಗಾಧರ ಗೌಡ ಐ.ಜಯಲಕ್ಷ್ಮಿ, ಸುಶ್ಮಿತ ಕೆ. ಹಾಗೂ ಇತರರು ಉಪಸ್ಥಿತರಿದ್ದರು. ಶಿಕ್ಷಕಿ ಶ್ಯಾಮಲಾ ಕೆ. ಸ್ವಾಗತಿಸಿ ಶಾಲಾ ನಾಯಕ ವಿಜೇತ್ ವಂದಿಸಿ, ಶಿಕ್ಷಣ ಮಂತ್ರಿ ಮರಿಯಮತ್ ರಾಯಿಸ ಕಾರ್ಯಕ್ರಮ ನಿರೂಪಿಸಿ, ಸಾನಿಕ ಮತ್ತು ತಂಡ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here