ರೂ.84.68 ಲಕ್ಷ ನಿವ್ವಳ ಲಾಭ. ಶೇ.12 ಡೆವಿಡೆಂಡ್ ಘೋಷಣೆ.
ನಿಡ್ಪಳ್ಳಿ: ಇರ್ದೆ- ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ರಂಗನಾಥ ಕೆ.ಯಸ್ ಇವರ ಅಧ್ಯಕ್ಷತೆಯಲ್ಲಿ ಸೆ.9 ರಂದು ಸಂಘದ ಸಭಾಭವನದಲ್ಲಿ ನಡೆಯಿತು.
ವರದಿ ಸಾಲಿನಲ್ಲಿ ಸಂಘ ಒಟ್ಟು ರೂ. 84.64 ಲಕ್ಷ ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.12 ಡೆವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷರು ಘೋಷಿಸಿದರು. ಉಪಾಧ್ಯಕ್ಷ ಗಿರೀಶ್ವರ ಭಟ್ ಯಂ, ನಿರ್ದೇಶಕರುಗಳಾದ ಶಶಿಕುಮಾರ್ ರೈ ಬಾಲ್ಯೋಟ್ಟು, ಚಂದ್ರನ್ ತಲೆಪ್ಪಾಡಿ, ಶೇಷಪ್ಪ ರೈ ಮೂರ್ಕಾಜೆ, ಕರುಣಾಕರ ಶೆಟ್ಟಿ ಕೊಮ್ಮಂಡ, ಹರೀಶ್ ಗೌಡ, ಸದಾಶಿವ, ದೇವಪ್ಪ ನಾಯ್ಕ, ನಾಗರಾಜ ಕೆ, ಆಶಾ ಅರವಿಂದ, ದೀಪಿಕಾ ಪಿ.ರೈ ವಲಯ ಮೆಲ್ವೀಚಾರಕ ವಸಂತ್ ಯಸ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಮಯ್ಯ ರೈ ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿಬ್ಬಂದಿಗಳಾದ ಸ್ವಾತಿ, ನವ್ಯ, ಪ್ರಜ್ಞಾ ಪ್ರಾರ್ಥಿಸಿದರು. ನಿರ್ದೇಶಕ ಗಿರೀಶ್ವರ ಭಟ್ ಸ್ವಾಗತಿಸಿ ಹಿರಿಯ ಗುಮಾಸ್ತ ಆರ್.ಬಿ. ಸುವರ್ಣ ವಂದಿಸಿದರು. ಸಿಬ್ಬಂದಿ ಲಿಂಗಪ್ಪ ಗೌಡ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಮಹಮ್ಮದ್ ಕುಂಞ, ಗಂಗಾ.ಸಿ, ಅಬ್ದುಲ್ ಕುಂಞ, ಬಾಲಕೃಷ್ಣ ನಾಯ್ಕ, ರವಿ ಗುಂಡ್ಯಡ್ಕ ಸಹಕರಿಸಿದರು. ಸಂಘದ ಸದಸ್ಯರು ಪಾಲ್ಗೊಂಡರು.