ಬಡಗನ್ನೂರುಃ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಪುತ್ತೂರು ಹಾಗೂ ಪಟ್ಟೆ ವಿದ್ಯಾಸಂಸ್ಥೆಗಳ ಸಹಭಾಗಿತ್ವದಲ್ಲಿ ಸವಣೂರು ವಲಯ ಮಟ್ಟದ ಬಾಲಕರ ಮತ್ತು ಬಾಲಕಿಯರ ತ್ರೋಬಾಲ್ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮ.ಸೆ.9 ರಂದು ಪಟ್ಟೆ ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪಟ್ಟೆ ವಿದ್ಯಾಸಂಸ್ಥೆಗಳ ಸಂಚಾಲಕ ನಾರಾಯಣ ಭಟ್ ಪಿ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಕ್ರೀಡೆ ಮನುಷ್ಯ ವ್ಯಕ್ತಿತ್ವ ವಿಕಾಸದಲ್ಲಿ ಮಹತ್ವ ಪಾತ್ರವಾದದ್ದು. ಕ್ರೀಡಾ ಪಟುಗಳು ಉತ್ತಮವಾಗಿ ಆಟ ಆಡಿ ಭವಿಷ್ಯದಲ್ಲಿ ತಮ್ಮ ಜೀವನ ಉತ್ತಮ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.
ಮಕ್ಕಳಲ್ಲಿ ಕ್ರೀಡಾ ಪ್ರತಿಭೆ ಬೆಳೆಯಬೇಕು – ಮಹಮ್ಮದ್ ಬಡಗನ್ನೂರು,
ಮುಖ್ಯ ಅತಿಥಿಗಳಾಗಿ ಪಂಚಾಯತ್ ರಾಜ್ ರಾಜ್ಯ ತರಬೇತುದಾರ ಮಹಮ್ಮದ್ ಬಡಗನ್ನೂರು ಕ್ರೀಡಾಂಗಣವನ್ನು ತೆಂಗಿನ ಕಾಯಿ ಹೊಡೆಯುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿ , ಪಟ್ಟೆ ವಿದ್ಯಾಸಂಸ್ಥೆಗಳು ಪಾಠ ಮತ್ತು ಪಠ್ಯತೇತರ ಚಟುವಟಿಕೆಯಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಕಳೆದ 72 ವರ್ಷಗಳ ಸುದೀರ್ಘ ಅವಧಿಯಲ್ಲಿ ಎಲ್ಲಾ ಮಕ್ಕಳಿಗೆ ಅದರಲ್ಲೂ ಬಡತನ ರೇಖೆಗಿಂತ ಕೆಳಗಿರುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ದೈಹಿಕ ಶಿಕ್ಷಕ ಮೋನಪ್ಪ ರವರು ಬಂದ ಬಳಿಕ ಈ ಕ್ರೀಡಾಂಗಣ ಅನೇಕ ಕ್ರೀಡಾಪಟುಗಳನ್ನು ತರಬೇತಿ ನೀಡಿ ರಾಜ್ಯ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸುವಲ್ಲಿ ದೈಹಿಕ ಶಿಕ್ಷಕ ಮೋನಪ್ಪ ರವರ ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಮಕ್ಕಳ ಪ್ರತಿಭೆಯನ್ನು ಹೊರಹಾಕುವಲ್ಲಿ ನಾವೆಲ್ಲರೂ ಶ್ರಮಿಸುವ ಮೂಲಕ ಕ್ರೀಡಡಾ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಎಂದು ಹೇಳಿದರು.
ಬಡಗನ್ನೂರು ಗ್ರಾ.ಪಂ. ಅಧ್ಯಕ್ಷೆ ಪುಷ್ಪಲತಾ ಎಂ, ಕ್ರೀಡಾಂಗಣವನ್ನು ರಿಬ್ಬನ್ ಕತ್ತರಿಸಿ ಉದ್ಘಾಟನೆ ಮಾಡಿ ಮಾತನಾಡಿ ವಲಯ ಮಟ್ಟದ ಕ್ರೀಡಾ ಕೂಟ ನಡೆಯುವುದು ಸಂತೋಷವಾಗಿದೆ. ಗ್ರಾ.ಪಂ ನ ತನ್ನ ಎರಡುವರೆ ವರ್ಷಗಳ ಅವಧಿಯಲ್ಲಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದು ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತೇನೆ.ಎಂದು ಹೇಳಿ ಶುಭ ಹಾರೈಸಿದರು.
.ಸಭೆ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಗಳ ಅಧ್ಯಕ್ಷ ವೇಣುಗೋಪಾಲ ಭಟ್ವ ವಹಿಸಿ ಮಾತನಾಡಿ ,ಸವಣೂರು ವಲಯ ಮಟ್ಟದ ತ್ರೋಬಾಲ್ ಪಂದ್ಯಾಟ ನಡೆಯುತ್ತಿರುವುದು ಹೆಮ್ಮೆಯಯಾಗುತ್ತಿದೆ. ಮುಂದೆ ಇನ್ನಷ್ಟು ಕ್ರೀಡಾಕೂಟ ಈ ಕ್ರೀಡಾಂಗಣದಲ್ಲಿ ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು. ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಸಂಘದ ಕಾರ್ಯದರ್ಶಿ ಮಾಮಚ್ಚನ್,, ಸವಣೂರು ವಲಯ ನೋಡೆಲ್ ಅಧ್ಯಕ್ಷ ಸಹದೇವ, ಕುಂಬ್ರ ಸಿ.ರ್.ಪಿ. ಶಶಿಕಲಾ ಸಂದಭೋಚಿತ ಮಾತನಾಡಿದರು.
ಪುತ್ತೂರು ತಾಲೂಕು ಪ್ರಾಥಮಿಕ ಶಾಲಾ ಸಂಯೋಜಕಿ ಅಮೃತಕಲಾ ಪ್ರಾಸ್ತಾವಿಕ ಮಾತನಾಡಿ, .ಪಾಠ ಮತ್ತು ಪಾಠ್ಯೇತರ ಚಟುವಟಿಕೆ ಒಟ್ಟಾಗಿ ನಡೆದಾಗ ಜೀವನದಲ್ಲಿ ಮಹತ್ವರ ಸಾಧನೆ ಮಾಡಲು ಸಾಧ್ಯ.
ಆಟದಲ್ಲಿ ಸೋಲು ಗೆಲುವು ಬಗ್ಗೆ ನಿರಾಶೆಯಾಗಬಾರದು, ಗೆಲುವಗೆ ಒಂದು ದಾರಿ, ಸೋಲಿಗೆ ನೂರು ದಾರಿ ಇದೆ. ಪಟ್ಟೆ ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ ಕ್ರೀಡಾ ಕೂಟ ಅಯೋಜನೆ ಮಾಡಿದ ಪಟ್ಟೆ ವಿದ್ಯಾಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು..
ವೇದಿಕೆಯಲ್ಲಿ ಪಟ್ಟೆ ವಿದ್ಯಾಸಂಸ್ಥೆಗಳ ನಿರ್ದೇಶಕ ಶಿವಪ್ರಸಾದ್ ಪಟ್ಟೆ, ಪ್ರೌಢಶಾಲಾ ಎಸ್ ಡಿ.ಯಂ.ಸಿ ಅಧ್ಯಕ್ಷ ಬೆಳ್ಲಿಯಪ್ಪ ಗೌಡ ಪೆರೀಗೇರಿ, ಪ್ರಾಥಮಿಕ ಶಾಲಾ ಎಸ್ ಡಿ.ಯಂ.ಸಿ ಅಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ, ಶ್ರೀ ಕೃಷ್ಣ ಹಿ.ಪ್ರಾ.ಶಾಲಾ ನಿವೃತ್ತ ಮುಖ್ಯ ಶಿಕ್ಷಕ ರಾದ ರಾಜಗೋಪಾಲ ಭಟ್, ಶಂಕರಿ ಪಟ್ಟೆ , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನುಫ್ , ಕುಂಬ್ರ ಸ.ಪ.ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಯರಾಂ, , ಗೋಪಾಲಕೃಷ್ಣ ಭಟ್, ನಾರಾಯಣ ಪಾಟಾಳಿ ಪಟ್ಟೆ, ಶ್ರೀ ಕೃಷ್ಣ ಹಿ.ಪ್ರಾ ಶಾಲಾ ಎಸ್. ಡಿ.ಯಂ.ಸಿ ಉಪಾಧ್ಯಕ್ಷ ತುಳಸಿ, ಉಪಸ್ಥಿತರಿದ್ದರು.
ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮನ ಸ್ವಾಗತಿಸಿದರು.ಶಿಕ್ಷಕ ವಿಠ್ಠಲ ಸುವರ್ಣ ವಂದಿಸಿದರು. ರಾಜಗೋಪಾಲ ಕಾರ್ಯಕ್ರಮ ನಿರೂಪಿಸಿದರು .ಶಾಲಾ ಶಿಕ್ಷಕ ವೃಂದದವರು ಸಹಕರಿಸಿದರು.