ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ:ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ವಿದ್ಯಾಭಾರತಿ ಸಂಯೋಜಿತ ಶಾಲೆಗಳ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯು ಆ.28 ರಂದು ಶ್ರೀದೇವಿ ವಿದ್ಯಾ ಸಂಸ್ಥೆ ಪುಣಚದಲ್ಲಿ ನಡೆಯಿತು. ಈ ಸ್ಪರ್ದೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. 

ಕಿಶೋರ ವರ್ಗದ ಬಾಲಕರ ವಿಭಾಗದಲ್ಲಿ (17ರ ವಯೋಮಾನದ) – ಪ್ರಮಥ.ಎಂ.ಭಟ್, 10ನೇ ತರಗತಿ(ಶ್ರೀ ರವಿನಾರಾಯಣ.ಎಂ ಮತ್ತು ಶ್ರೀಮತಿ ಶರಾವತಿ ದಂಪತಿ ಪುತ್ರ) -ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.

ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ:(14ರ ವಯೋಮಾನದ) ಅಭಿಜ್ಞಾ ಶಾಂಭವಿ, 6ನೇ ತರಗತಿ(ಶ್ರೀ ಸುಧೀರ್ ಮತ್ತು ಶ್ರೀಮತಿ ಲತಾ ದಂಪತಿ ಪುತ್ರಿ) – ಪ್ರಥಮ ಸ್ಥಾನ, ಮಹತಿ, 6ನೇ ತರಗತಿ(ಶ್ರೀ ಶಿವರಂಜನ್.ಎಂ ಮತ್ತು ಶ್ರೀಮತಿ ಲಾವಣ್ಯ ಭಟ್  ದಂಪತಿ ಪುತ್ರಿ)-ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವರ್ಷಿ.ರೈ, 7ನೇ ತರಗತಿ(ಶ್ರೀ ಶಶಿಧರ ರೈ ಮತ್ತು ಶ್ರೀಮತಿ ರವಿಕಲಾ ರೈ ದಂಪತಿ ಪುತ್ರಿ) ದ್ವಿತೀಯ ಸ್ಥಾನ ಪಡೆದಿರುತ್ತಾಳೆ. 

14ರ ವಯೋಮಾನದ ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ ನಮ್ಮ ಶಾಲಾ ಬಾಲಕಿಯರ ತಂಡ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದಿರುತ್ತಾರೆ ಹಾಗೂ ಪ್ರಥಮ ಸ್ಥಾನ ಪಡೆದ 3 ವಿದ್ಯಾರ್ಥಿಗಳು, ಮಧ್ಯಪ್ರದೇಶದ ದೇವಾಸ್‍ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿಲಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

LEAVE A REPLY

Please enter your comment!
Please enter your name here