ಸೆ.30:ತಾ|ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನಿಂದ ಪ್ರೊ ಕಬಡ್ಡಿ

0

ಪಂದ್ಯಾಟ ಯಶಸ್ವಿಗೊಳಿಸಲು ಎಲ್ಲರ ಸಹಕಾರ ಅಗತ್ಯ-ಚಂದ್ರಹಾಸ ಶೆಟ್ಟಿ

ಪುತ್ತೂರು: ಪುತ್ತೂರಿನಲ್ಲಿ ಅಮೆಚೂರು ವತಿಯಿಂದ ಆಯೋಜಿಸುತ್ತಿರುವ ಕಬಡ್ಡಿ ಪಂದ್ಯಾಟಕ್ಕೆ ಕ್ರೀಡಾಭಿಮಾನಿಗಳ ಪ್ರೋತ್ಸಾಹ ಬಹಳಷ್ಟಿದೆ. ಅಮೆಚೂರು ಕಬಡ್ಡಿ ಕ್ರೀಡೆಯನ್ನು ಆಸ್ವಾದಿಸಲು, ಕಣ್ತುಂಬಿಕೊಳ್ಳಲು ಎಲ್ಲೆಡೆಯಿಂದ ಜನಸಾಗರ ಹರಿದು ಬರುತ್ತಿರುವುದು ಸಂತಸದ ವಿಚಾರ. ಮುಂದಿನ ದಿನಗಳಲ್ಲಿ ಅಮೆಚೂರು ಅಸೋಸಿಯೇಶನ್‌ನಿಂದ ನಡೆಯುವ ಪಂದ್ಯಾಟ ಯಶಸ್ವಿಗೊಳಿಸಲು ಸರ್ವರ ಸಹಕಾರ ಅಗತ್ಯ ಬೇಕಾಗಿದೆ ಎಂದು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಗೌರವಾಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿರವರು ಹೇಳಿದರು.


ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನ ವತಿಯಿಂದ ಗಣೇಶೋತ್ಸವದ ಸಲುವಾಗಿ ಕಬಡ್ಡಿ ಆಟಗಾರ, ಏಕಲವ್ಯ ಪ್ರಶಸ್ತಿ ಪುರಸ್ಕೃತ ದಿ.ಉದಯ ಚೌಟರವರ ಸ್ಮರಣಾರ್ಥ ಕಿಲ್ಲೆ ಮೈದಾನದ ಮ್ಯಾಟ್ ಅಂಕಣದಲ್ಲಿ ಸೆ.30 ರಂದು ನಡೆಯುವ ಪ್ರೊ ಕಬಡ್ಡಿ ಮಾದರಿಯ ಆಹ್ವಾನಿತ ತಂಡಗಳ ಕಬಡ್ಡಿ ಪಂದ್ಯಾಟದ ಪೂರ್ವಭಾವಿ ಸಭೆಯು ಸೆ.8 ರಂದು ದರ್ಬೆ ನಿರೀಕ್ಷಣ ಮಂದಿರದ ಬಳಿ ನಡೆದಿದ್ದು, ಈ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಆಮಂತ್ರಣ ಪತ್ರಿಕೆ ರಚನೆ:
ಸಭೆಯಲ್ಲಿ ಪಂದ್ಯಾಟದ ಉದ್ಘಾಟನೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮಕ್ಕೆ ಅತಿಥಿಗಳ ಆಯ್ಕೆ ಕುರಿತು ಚರ್ಚಿಸಲಾಯಿತು. ಉದ್ಘಾಟನೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯರವರು ನೆರವೇರಿಸಲಿರುವರು. ಅಧ್ಯಕ್ಷತೆಯನ್ನು ಶಾಸಕ ಅಶೋಕ್ ಕುಮಾರ್ ರೈ ವಹಿಸಲಿರುವರು. ಜೊತೆಗೆ ವಿವಿಧ ಗಣ್ಯರನ್ನು ಕರೆಯಿಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.


12 ಬಲಿಷ್ಟ ತಂಡಗಳು:
ಕಿಲ್ಲೆ ಮೈದಾನದಲ್ಲಿನ ಮ್ಯಾಟ್ ಅಂಕಣದಲ್ಲಿ ನಡೆಯಲಿರುವ ಆಹ್ವಾನಿತ ತಂಡಗಳ ಪ್ರೊ ಕಬಡ್ಡಿ ಅಹರ್ನಿಶಿ ಪಂದ್ಯಾಟದಲ್ಲಿ ಬಲಿಷ್ಟ 12 ತಂಡಗಳು ಭಾಗವಹಿಸಲಿದೆ ಜೊತೆಗೆ ಪ್ರದರ್ಶನ ಪಂದ್ಯಾಟವೂ ನಡೆಯಲಿದೆ.


ಪ್ರೊ ಕಬಡ್ಡಿ ಆಟಗಾರರು ಭಾಗಿ:
ನಾಕೌಟ್ ಮಾದರಿಯಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ಪ್ರೊ ಕಬಡ್ಡಿಯ ಪ್ರಖ್ಯಾತ ಆಟಗಾರರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಮಧ್ಯಾಹ್ನ ಹನ್ನೆರಡು ಗಂಟೆಗೆ ಸರಿಯಾಗಿ ಕಬಡ್ಡಿ ಪಂದ್ಯಾಟ ಜರಗಲಿದೆ. ಈ ಬಾರಿಯೂ ಕ್ರೀಡಾಭಿಮಾನಿಗಳ ಪ್ರೋತ್ಸಾಹವನ್ನು ನಿರೀಕ್ಷೆ ಮಾಡುತ್ತಾ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಲಾಗುತ್ತಿದ್ದು, ಕಬಡ್ಡಿ ಕ್ರೀಡಾಭಿಮಾನಿಗಳು ಆಶೀರ್ವದಿಸಬೇಕಾಗಿದೆ ಎಂದು ಗೌರವಾಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿರವರು ಸಭೆಯಲ್ಲಿ ಹೇಳಿದರು.
ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸುರೇಂದ್ರ ರೈ ನೇಸರ, ಪಂದ್ಯಾಟ ಸಮಿತಿಯ ಗೌರವಾಧ್ಯಕ್ಷ ಉದ್ಯಮಿ ಶಿವರಾಂ ಆಳ್ವ, ರೆಫ್ರೀ ಬೋರ್ಡ್ ಅಧ್ಯಕ್ಷ ಆಸಿಫ್ ತಂಬುತ್ತಡ್ಕ, ಶಶಿಕಿರಣ್ ರೈ ನೂಜಿಬೈಲು, ರೋಶನ್ ರೈ ಬನ್ನೂರು, ಕಬಡ್ಡಿ ಕೋಚ್ ಹಬೀಬ್ ಮಾಣಿ, ಪುರುಷೋತ್ತಮ್ ಕೋಲ್ಫೆ, ರಫೀಕ್ ಎಂ.ಕೆ, ಸತ್ಯನಾರಾಯಣ ರೈ, ಸದಾಶಿವ ಶೆಟ್ಟಿ ಪಟ್ಟೆ, ನವನೀತ್ ಬಜಾಜ್, ಸುಧಾಕರ್ ರೈ, ಸುಧೀರ್ ರೈ, ಮಹಮದ್ ಅಶ್ರಫ್, ಸದಾಶಿವ ಶೆಟ್ಟಿ ಪಟ್ಟೆ, ಗಂಗಾಧರ ಶೆಟ್ಟಿ ಕೈಕಾರ, ಚಂದ್ರಹಾಸ ಶೆಟ್ಟಿ ಆನೆಮಜಲು, ಸೀತಾರಾಮ್ ಗೌಡ, ರಾಜೇಶ್ ರೈ, ರಝಾಕ್ ಬಿ.ಎಚ್, ಕಾರ್ತಿಕ್ ಎನ್, ಆನಂದ ರೈಯವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡ ಸ್ವಾಗತಿಸಿ, ವಂದಿಸಿದರು.


ಪಂದ್ಯಾಟ ಸಮಿತಿ ರಚನೆ..
ಸಭೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಪಂದ್ಯಾಟ ಸಮಿತಿಯ ಗೌರವಾಧ್ಯಕ್ಷರಾಗಿ ಉದ್ಯಮಿ ಶಿವರಾಂ ಆಳ್ವ, ಅಧ್ಯಕ್ಷರಾಗಿ ಕಬಡ್ಡಿ ತರಬೇತುದಾರ ಹಬೀಬ್ ಮಾಣಿ, ಕಾರ್ಯದರ್ಶಿಯಾಗಿ ನವನೀತ್ ಬಜಾಜ್, ಸದಸ್ಯರಾಗಿ ರೆಫ್ರಿ ಬೋರ್ಡ್ ಅಧ್ಯಕ್ಷ ಆಸಿಫ್ ತಂಬುತ್ತಡ್ಕ ಅಲ್ಲದೆ ಕ್ರೀಡಾಂಗಣ ಸಮಿತಿ, ಸ್ವಯಂಸೇವಕ ಸಮಿತಿ, ಭೋಜನದ ಉಸ್ತುವಾರಿ, ಆಂಬುಲೆನ್ಸ್ ಹಾಗೂ ಪ್ರಥಮ ಚಿಕಿತ್ಸೆ ಸಮಿತಿಗಳಿಗೆ ಸದಸ್ಯರನ್ನು ನೇಮಿಸಲಾಯಿತು.

-ಬಲಿಷ್ಟ 12 ತಂಡಗಳ ಹಣಾಹಣಿ
-ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ವಿಶಾಲ ಗ್ಯಾಲರಿ ವ್ಯವಸ್ಥೆ
-ಪ್ರೊ ಕಬಡ್ಡಿ ಆಟಗಾರರು ಭಾಗಿ
-ಪ್ರದರ್ಶನ ಪಂದ್ಯಾಟ

LEAVE A REPLY

Please enter your comment!
Please enter your name here