ಪುತ್ತೂರು: ವಿವೇಕಾನಂದ ಬಿಎಡ್ ಕಾಲೇಜು, ರೇಡಿಯೋ ಪಾಂಚಜನ್ಯ 90.8 ಸಮುದಾಯ ಬಾನುಲಿ ಕೇಂದ್ರ, ವಿದ್ಯಾಭಾರತಿ ಉಚ್ಚ ಶಿಕ್ಷಾ ಸಂಸ್ಥಾನ್ ಕರ್ನಾಟಕ ಇದರ ಸಹಯೋಗದೊಂದಿಗೆ ಭಾರತೀಯ ಜ್ಞಾನ ಪರಂಪರೆ ಉಪನ್ಯಾಸ ಮಾಲಿಕೆ ಉದ್ಘಾಟನಾ ಕಾರ್ಯಕ್ರಮ ಸೆ. 8ರಂದು ರೇಡಿಯೋ ಪಾಂಚಜನ್ಯದ ಸ್ಟುಡಿಯೋದಲ್ಲಿ ನೆರವೇರಿತು.
ಉಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಕೆ.ಎಂ. ಕೃಷ್ಣ ಭಟ್ ಮಾತನಾಡಿ, ಆಧುನಿಕತೆ ಹೆಚ್ಚಾದ ಹಾಗೆ ಹೊಸ ಹೊಸ ತಂತ್ರಜ್ಞಾನಗಳು ಬೆಳವಣಿಗೆಯಾದರೂ ಅದರ ಮೌಲ್ಯಗಳನ್ನು ನೆನಪುಳಿಸುವಿಕೆ ಕಡಿಮೆ ಯಾಗುತ್ತದೆ. ಹಾಗೆಯೇ ಮನುಷ್ಯನಿಗಿರುವ ಬಲಗಳಲ್ಲಿ ಪ್ರಜ್ಞಾಬಲವೇ ದೊಡ್ಡದು. ಭಾರತೀಯ ಸಂಸ್ಕೃತಿ ವಿಚಾರಗಳ ಬಾಳ್ವಿಕೆಯ ಜ್ಞಾನ ಪರಂಪರೆ ಪ್ರಾಚೀನದ್ದಾದರೂ ಅದು ಇಂದಿಗೂ ಅತ್ಯಮೂಲ್ಯವಾದದ್ದು. ಈ ಪರಂಪರೆಯನ್ನು ಮುಂದಿನ ತಲೆಮಾರಿಗೂ ತಿಳಿಸುವಂತಾಗಲಿ ಎಂದರು.
ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ತೆಂಕಿಲ ವಿವೇಕಾನಂದ ಬಿ..ಎಡ್. ಕಾಲೇಜು ಸಮಿತಿ ಸಂಚಾಲಕಿ ಗಂಗಮ್ಮ ಎಚ್. ಶಾಸ್ತ್ರೀ ಮತ್ತು ಭಾರತೀಯ ದರ್ಶನಗಳ ಮಹತ್ವದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿದ್ದ ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜೀ ಕೆ.ಎಲ್ ಮತ್ತು ಬಿ.ಎಡ್. ಕಾಲೇಜು ಸಹಪ್ರಾಧ್ಯಾಪಕ ಮುರಳೀಕೃಷ್ಣ ಕೆ.ಎನ್. ಉಪಸ್ಥಿತರಿದ್ದರು.
ತೆಂಕಿಲ ಬಿ.ಎಡ್ ಕಾಲೇಜು ವಿದ್ಯಾರ್ಥಿ ಹರ್ಷಿತ್ ಪ್ರಾರ್ಥನೆ ಹಾಡಿದರು. ಪ್ರಾಂಶುಪಾಲ ಡಾ. ಶೋಭಿತಾ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರೇಡಿಯೋ ಪಾಂಚಜನ್ಯ ಸಮಿತಿ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ ವಂದಿಸಿದರು. ಸಂಯೋಜಕಿ ತೇಜಸ್ವಿನಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ತಾಂತ್ರಿಕ ಸಲಹೆಗಾರ ಪ್ರಶಾಂತ್ ಸಹಕರಿಸಿದರು.