ಕೊಕ್ಕಡ: ಜೇಸಿ ಸಪ್ತಾಹ-ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ

0

ನೆಲ್ಯಾಡಿ: ಕೊಕ್ಕಡ ಕಪಿಲಾ ಜೇಸಿಐ ಇದರ ವತಿಯಿಂದ 2023ರ ಜೇಸಿ ಸಪ್ತಾಹದ ಅಂಗವಾಗಿ ಆಸಕ್ತ ಮಕ್ಕಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ ಸೆ.10ರಂದು ನಡೆಸಲಾಯಿತು.


ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕಾಧ್ಯಕ್ಷರಾದ ಜಿತೇಶ್ ಎಲ್. ಪಿರೇರಾ ವಹಿಸಿದ್ದರು. ಸಂತೋಷ್ ಕುಮಾರ್ ಜೈನ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಕೆ. ಶ್ರೀಧರ ರಾವ್ ಅವರು ಶುಭ ಹಾರೈಸಿದರು. ಅಕ್ಷತ್ ರೈ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಸಪ್ತಾಹದ ಯೋಜನಾ ನಿರ್ದೇಶಕರಾದ ಯು. ನರಸಿಂಹ ನಾಯಕ್ ಅವರು ಸ್ಪರ್ಧೆಗಳ ಮಾಹಿತಿ ನೀಡಿದರು. ಶ್ರವಣ್ ಅವರು ಜೇಸಿ ವಾಣಿ ವಾಚಿಸಿದರು. ವಿದ್ಯಾರ್ಥಿಗಳಾದ ಧ್ಯಾನ ಮತ್ತು ಯಶ್ವಿತಾರವರು ತಮ್ಮ ಅನಿಸಿಕೆ ಹಂಚಿಕೊಂಡರು. ಜೆಸಿಂತಾ ಡಿ ಸೋಜ ಅವರು ತೀರ್ಪುಗಾರರಾಗಿ ಸಹಕರಿಸಿದರು. ಜೇಸಿ ಸದಸ್ಯರುಗಳಾದ ಜೋಸೆಫ್ ಪಿರೇರಾ, ಜಸ್ವಂತ್ ಪಿರೇರಾ, ಸ್ಥಳೀಯರಾದ ರಘುಚಂದ್ರ ಪೂಜಾರಿ, ಗೀತಾ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಜೇಸಿ ಕಾರ್ಯದರ್ಶಿ ವಿಕ್ಟರ್ ಸುವಾರಿಸ್ ವಂದಿಸಿದರು.


ಫಲಿತಾಂಶ:
ಚಿತ್ರ ಬಿಡಿಸುವ ಸ್ಪರ್ಧೆಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಅನ್ವಿತ್ ಆರ್.ಪಿ.( ಪ್ರಥಮ), ನಿಕ್ಷಿತ್ ಆರ್. (ದ್ವಿತೀಯ), ಜನನಿ(ತೃತೀಯ)ಬಹುಮಾನಗಳಿಸಿದರು. ಕೌಶಿಕ್, ಸೃಜನ್ ಸ್ಪರ್ಧೆಗಳ ಪ್ರೋತ್ಸಾಹಕ ಬಹುಮಾನ ಪಡೆದುಕೊಂಡರು. ಪ್ರೌಢ ಶಾಲೆಯ ವಿಭಾಗದಲ್ಲಿ ಪ್ರತೀಕ್(ಪ್ರಥಮ), ನಿಶಾಂತ್ ( ದ್ವಿತೀಯ), ಹೇಮಾವತಿ (ತೃತೀಯ) ಬಹುಮಾನ ಪಡೆದರು. ಯಶ್ವಿತಾ, ಮೋಹಿತ್ ಕುಮಾರ್ ಪ್ರೋತ್ಸಾಹಕ ಬಹುಮಾನ ಪಡೆದುಕೊಂಡರು.

LEAVE A REPLY

Please enter your comment!
Please enter your name here