ಉಪ್ಪಿನಂಗಡಿ ಶ್ರೀರಾಮ ಶಾಲೆಯ ಮೋಕ್ಷ ಪ್ರಥಮ

0

ಪುತ್ತೂರು: ವಿದ್ಯಾಭಾರತಿ ಮತ್ತು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾದ ಸದಸ್ಯ ಸಂಸ್ಥೆಯ ವತಿಯಿಂದ ತೆಂಕಿಲದ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆದ ಶಿಶುವರ್ಗ ವಿಭಾಗದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಉಪ್ಪಿನಂಗಡಿ ವೇದಶಂಕರನಗರದ ಶ್ರೀರಾಮ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಮೋಕ್ಷ ಕೆ.ಎನ್. ಪ್ರಥಮ ಸ್ಥಾನ ಗಳಿಸಿದ್ದಾರೆ. ಅಲ್ಲದೆ ಇವರು 200 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಇವರಿಗೆ ಶಾಲೆಯ ದೈಹಿಕ ಶಿಕ್ಷಣ ಮಾತಾಜಿ ಕು.ಶ್ರೀ ರಂಜಿನಿ ತರಬೇತಿ ನೀಡಿದ್ದರು.‌ ಮೋಕ್ಷ ಅವರು ಕೆಮ್ಮಾರ ನಿವಾಸಿ ರಮೇಶ್ ಎನ್. ಮತ್ತು ವನಿತಾರವರ ಪುತ್ರಿ.

LEAVE A REPLY

Please enter your comment!
Please enter your name here