ಆರ್ಯಾಪು ಕಂಬಳತ್ತಡ್ಡ ಶ್ರೀ ಕೃಷ್ಣ ಯುವಕ ಮಂಡಲದಿಂದ 29ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

0

ಆರ್ಯಾಪು: ಆರ್ಯಾಪು ಕಂಬಳತ್ತಡ್ಡ ಶ್ರೀ ಕೃಷ್ಣ ಯುವಕ ಮಂಡಲ ಇದರ 29ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಸೆ.10ರಂದು ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜರಗಿತು.


ಶ್ರೀ ಕ್ಷೇತ್ರದಲ್ಲಿ ಶ್ರೀ ಕೃಷ್ಣ ದೇವರಿಗೆ ಪೂಜೆಯನ್ನು ಕ್ಷೇತ್ರದ ತಂತ್ರಿವರ್ಯರಾದ ಪ್ರೀತಂ ಪುತ್ತೂರಾಯ ಹಾಗೂ ದೇವಸ್ಥಾನದ ಆಡಳಿತ ಸಮಿತಿಯ ಆಧ್ಯಕ್ಷ ಗಂಗಾಧರ ಅಮೀನ್ ಹೊಸಮನೆ ಇವರು ದೀಪ ಬೆಳಗಿಸುವ ಮೂಲಕ ಆಚರಿಸಲಾಯಿತು. ನಂತರ ಕಂಬಳತ್ತಡ್ಡ ಅಂಗನವಾಡಿ ಪುಟಾಣಿಗಳು ಹಾಗೂ ಸ್ಥಳೀಯ ಪುಟಾಣಿಗಳು ಶ್ರೀ ಕೃಷ್ಣ ವೇಷವನ್ನು ಹಾಕುವ ಮೂಲಕ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಯುವಕ ಮಂಡಲದ ಸ್ಥಾಪಕಾಧ್ಯಕ್ಷರಾದ ರವಿಚಂದ್ರ ಆಚಾರ್ಯ, ದಿ.ಸೀತಾರಾಮ ಶೆಟ್ಟಿಯವರ ಸಹೋದರರಾದ ಜಯಂತ ಶೆಟ್ಟಿ ಕಂಬಳತ್ತಡ ಹಾಗೂ ರವೀಂದ್ರ ಶೆಟ್ಟಿ ಕಂಬಳತ್ತಡ್ಡ, ಲೋಕೇಶ್ ರೈ ಮೇರ್ಲ, ನೇಮಾಕ್ಷ ಸುವರ್ಣ, ಧನುಷ್ ಹೊಸಮನೆ, ನಾಗೇಶ ಸಂಪ್ಯ, ಸೇಸಪ್ಪ ನಾಯಕ್ ಅಡ್ಕ, ಆನಂದ ಹೊಸಮನೆ, ಶೇಷಪ್ಪ ಗೌಡ(ನಿವೃತ್ತ ಪಿ.ಎಸ್.ಐ), ರಾಘವೇಂದ್ರ ರೈ ಮೇರ್ಲ, ನರೇಂದ್ರ ನಾಯಕ್ ಮರಕ್ಕ, ಚಂದ್ರನಾಥ ಬಂಗೇರ, ವಿಕಾಸ್ ಬಿ.ಎಮ್, ನವೀನ್ ರೈ ಕೈಕಾರ, ನಳಿನಿ ಗೌಡ ಕೊಲ್ಯ, ಅಂಗನವಾಡಿ ಶಿಕ್ಷಕಿ ಶ್ಯಾಮಲ, ರೇಷ್ಮಾ ನಾಗೇಶ್ ಸಹಿತ ಹಲವಾರು ಜನ ಹಾಜರಿದ್ದರು. ಸುರೇಶ್ ಪಿ ಕಾರ್ಯಕ್ರಮವನ್ನು ನಿರೂಪಿಸಿದರು. ಯುವಕ ಮಂಡಲದ ಆಧ್ಯಕ್ಷರಾದ ಸಂತೋಷ್ ಸುವರ್ಣ ಮೇರ್ಲ ವಂದಿಸಿದರು.

ಸೀತಾರಾಮ ಶೆಟ್ಟಿ ಕಂಬಳತ್ತಡ್ಡರವರಿಗೆ ಶ್ರದ್ದಾಂಜಲಿ..
ಇತ್ತೀಚೆಗೆ ಅಗಲಿದ ಶ್ರೀ ಕೃಷ್ಣ ಯುವಕ ಮಂಡಲದ ಮಾಜಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಕಂಬಳತ್ತಡ್ಡರವರ ಭಾವಚಿತ್ರಕ್ಕೆ ಅತಿಥಿಗಳಿಂದ ದೀಪ ಬೆಳಗಿಸಿ, ಪುಷ್ಪಾರ್ಚನೆಗೈಯಲಾಯಿತು. ಈ ಸಂದರ್ಭದಲ್ಲಿ ಹಿಂದೂ ಯುವ ಮುಖಂಡ ಕಿಶೋರ್ ಬೊಟ್ಯಾಡಿರವರು ಸೀತಾರಾಮ ಶೆಟ್ಟಿಯವರು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸಿದರು. ಕ್ಷೇತ್ರದ ತಂತ್ರಿವರ್ಯರಾದ ಪ್ರೀತಂ ಪುತ್ತೂರಾಯರವರು, ಧಾರ್ಮಿಕ ಕ್ಷೇತ್ರದಲ್ಲಿ ಸೀತಾರಾಮ ಶೆಟ್ಟಿಯವರು ಮಾಡಿರುವ ಸೇವೆಯನ್ನು ನೆನೆದು ಇಂದಿನ ಯುವಕರಿಗೆ ಹಾಗೂ ಪ್ರತಿಯೊಬ್ಬರಿಗೂ ಇವರು ಮಾದರಿ ಎಂದು ತಿಳಿಸಿದರು. ಪುತ್ತೂರು ನಗರ ಠಾಣೆಯ ಸಹಾಯಕ ಪೊಲೀಸ್ ನಿರೀಕ್ಷಕ ಚಂದ್ರ, ಉದ್ಯಮಿ ನಿತಿನ್ ಪಕ್ಕಳ, ಗ್ರಾ.ಪಂ ಸದಸ್ಯೆ ಪೂರ್ಣಿಮಾ ರೈ, ಯುವಕ ಮಂಡಲದ ಸದಸ್ಯ ತಾರಾನಾಥ ಬಂಗೇರ ಮೇರ್ಲ ಹಾಗೂ ಇತರರು ನುಡಿನಮನಗಳನ್ನು ಸಲ್ಲಿಸಿದರು. ಮೃತರ ಗೌರವಾರ್ಥವಾಗಿ ಈ ವರ್ಷದ ಅಷ್ಟಮಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.

LEAVE A REPLY

Please enter your comment!
Please enter your name here