ಬನ್ನೂರು ಶ್ರೀ ಶಿವಪಾರ್ವತಿ ಮಂದಿರದಲ್ಲಿ ಮೊಸರು ಕುಡಿಕೆ ಉತ್ಸವ: ಶ್ರೀಕೃಷ್ಣನ ವಿಚಾರಧಾರೆ ಇವತ್ತಿನ ಕಾಲಗಟ್ಟದಲ್ಲೂ ಪ್ರಸ್ತುತ – ರಾಮಚಂದ್ರ ಎಂ

0

ಪುತ್ತೂರು: ಪ್ರೀತಿ, ಸ್ನೇಹದಿಂದಲೇ ಅಧರ್ಮವನ್ನು ಅಳಿಸಿ ಧರ್ಮಪ್ರತಿಷ್ಠಾಪನೆ ಮಾಡಿದ ಶ್ರೀಕೃಷ್ಣನ ವಿಚಾರಧಾರೆಗಳು ಇವತ್ತಿನ ಕಾಲಗಟ್ಟದಲ್ಲೂ ಪ್ರಸ್ತುತ ಎಂದು ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎಂ ಅವರು ಹೇಳಿದರು.

ಬನ್ನೂರು ಅಯೋಧ್ಯನಗರ ಶ್ರೀ ಶಿವಪಾರ್ವತಿ ಮಂದಿರ ವಠಾರದಲ್ಲಿ ಸೆ.10ರಂದು ನಡೆದ 41ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಧಾರ್ಮಿಕ ಬಾಷಣ ಮಾಡಿದರು. ಶ್ರೀ ಕೃಷ್ಣ ಬಾಲ್ಯ ಲೀಲೆಯಲ್ಲಿ ಆಟದ ಜೊತೆಯಲ್ಲೇ ದುಷ್ಟರನ್ನು ಸಂಹರಿಸುವ ಮೂಲಕ ಜಗತ್ತಿಗೆ ಬೆಳಕು ತೋರಿಸಿದ್ದಾರೆ. ಪ್ರೀತಿ ಸ್ನೇಹದ ಜೊತೆಗೆ ಅಧರ್ಮವನ್ನು ಅಳಿಸಿ ಧರ್ಮವನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಆತನ ಹಲವು ವಿಚಾರಗಳು ಇವತ್ತಿನ ಕಾಲಗಟ್ಟದಲ್ಲೂ ಪ್ರಸ್ತುತ ಎಂದರು.

ಸಂಪ್ರದಾಯ ಉಳಿಸುವ ಕೆಲಸ:
ನಗರಸಭಾ ಸದಸ್ಯೆ ಮೋಹಿನಿ ವಿಶ್ವನಾಥ್ ಅವರು ಮಾತನಾಡಿ ನಮ್ಮ ಹಿಂದೂ ಧರ್ಮದ ಸಂಪ್ರದಾಯ ಅಚಾರ ವಿಚಾರಗಳನ್ನು ಉಳಿಸುವ ನಿಟ್ಟಿನಲ್ಲಿ ಆಯೋಜಿಸುವ ಕಾರ್ಯಕ್ರಮಗಳು ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಲು ಸಹಕಾರಿಯಾಗಲಿದೆ ಎಂದರು.

ಭಕ್ತರ ಸಹಕಾರ ಅಗತ್ಯ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಶಿವಪಾರ್ವತಿ ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ ಅವರು ಮಾತನಾಡಿ ಧರ್ಮ ಕಾರ್ಯ ಉಳಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಮಂದಿರದಲ್ಲಿ ಹಲವಾರು ಕಾರ್ಯಕ್ರಮವನ್ನು ಭಕ್ತರ, ಊರವರ ಸಹಕಾರದೊಂದಿಗೆ ಮಾಡಲಾಗುತ್ತಿದೆ. ನವರಾತ್ರಿ, ಶಿವರಾತ್ರಿ, ಗೋಪೂಜೆ, ಅಶ್ವತ್ಥ ಪೂಜೆ, ದುರ್ಗಾಪೂಜೆಯನ್ನು ಮಂದಿರದ ವತಿಯಿಂದ ಮಾಡಲಾಗುತ್ತಿದ್ದು, ಮುಂದೆ ಭಕ್ತರ ಸಹಕಾರ ನಿರಂತರವಿರಲಿ ಎಂದರು.

ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಗೌತಮ್, ಮಂದಿರದ ಕೋಶಾಧಿಕಾರಿ ಮೋಹನ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುರೇಶ್ ಪೂಜಾರಿ, ರತ್ನಾಕರ್ ರೈ, ರಾಧಾಕೃಷ್ಣ ಗೌಡ, ಮಮತಾ ಶೆಟ್ಟಿ, ಲೋಕೇಶ್ ಬನ್ನೂರು ಅತಿಥಿಗಳನ್ನು ಗೌರವಿಸಿದರು. ಇದೇ ಸಂದರ್ಭ ಮೊಸರುಕುಡಿಕೆ ಉತ್ಸವದ ವಿವಿಧ ಸ್ಪರ್ಧಾ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಜೀವಿತಾ ಮತ್ತು ಪಾಯಲ್ ಪ್ರಾರ್ಥಿಸಿದರು. ಶೇಖರ್ ಬಿರ್ವ ಸ್ವಾಗತಿಸಿದರು. ದಯಾನಂದ ವಂದಿಸಿದರು. ಬೆಳಿಗ್ಗೆ ಮಂದಿರದ ಅರ್ಚಕ ರಘುರಾಮ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಸ್ಥಳೀಯರಾದ ಎನ್.ಸಂಜೀವ ನಾಯ್ಕ ಅವರು ಮೊಸರು ಕುಡಿಕೆ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಈ ಸಂದರ್ಭ ಹಿರಿಯರಾದ ಚಂದ್ರಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇತ್ತೀಚೆಗೆ ನಿಧನರಾದ ಮಂದಿರದ ಸ್ಥಾಪಕರಲ್ಲೋರ್ವರಾದ ಶೇಷಪ್ಪ ಪೂಜಾರಿ ಅವರ ಅತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಂಜೆ ಸಮಾರೋಪ ಸಮಾರಂಭದ ಬಳಿಕ ಮಂದಿರದಲ್ಲಿ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here