ಪುಣ್ಚಪ್ಪಾಡಿ: ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದ ಶಿಲಾನ್ಯಾಸ

0

ಸವಣೂರು  :  ಪುಣ್ಚಪ್ಪಾಡಿ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಟ್ರಸ್ಟ್‌ ವತಿಯಿಂದ ಜೀರ್ಣೋದ್ಧಾರ ಪ್ರಯುಕ್ತ ಪುನರ್‌  ನಿರ್ಮಾಣಗೊಳ್ಳುತ್ತಿರುವ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ಮತ್ತು ಕೊರಗಜ್ಜ ದೈವದ ಕಟ್ಟೆಯ ಶಿಲಾನ್ಯಾಸ ಮತ್ತು ಭೂಮಿ ಪೂಜಾ ಕಾರ್ಯಕ್ರಮ ಸೆ.11ರಂದು ಪುಣ್ಚಪ್ಪಾಡಿ ಗ್ರಾಮದ ನೇರೋಳ್ತಡ್ಕದಲ್ಲಿ ನಡೆಯಿತು.ತಂತ್ರಿ ಕೇಶವ ಕಲ್ಲೂರಾಯ, ವಾಸ್ತುಶಿಲ್ಪಿ ಸುರೇಶ್‌ ಸಾಲಿಯಾನ್‌ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಟ್ರಸ್ಟ್‌ ಅಧ್ಯಕ್ಷ ಬಾಬು ಎನ್‌, 200 ವರ್ಷಗಳ ಇತಿಹಾಸ ಇರುವ ಜೀರ್ಣಾವಸ್ಥೆಯಲ್ಲಿದ್ದ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ, ಗುಳಿಗ ದೈವ, ಕೊರಗಜ್ಜ ದೈವ ಕಟ್ಟೆ, ಬ್ರಹ್ಮರಗುಂಡದ ಪುನರ್‌ ನಿರ್ಮಾಣ ಪ್ರಯುಕ್ತ ಜ್ಯೋತಿಷಿ ಸ್ವಾಮಿನಾಥನ್‌ ಪಣಿಕ್ಕಾರ್‌ ಅವರ ಮೂಲಕ ಸ್ಥಳಪ್ರಶ್ನೆ ನಡೆಸಿ ಪರಿಹಾರ ಕಾರ್ಯ ನಡೆಸಲಾಗಿದೆ. ಬಾಲಾಲಯ ಸ್ಥಾಪಿಸಿ ದೈವಗಳ ಭಂಡಾರವನ್ನು ಅಲ್ಲಿ ಇರಿಸಲಾಗಿದೆ. ನೂತನ ಗುಡಿ ನಿರ್ಮಾಣಕ್ಕೆ ₹40 ಲಕ್ಷ ವೆಚ್ಚ ಅಂದಾಜಿಸಿದ್ದು, ದಾನಿಗಳು, ಭಕ್ತರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ದಾನಿ, ವಿಜಯ ಬ್ಯಾಂಕ್‌ ನಿವೃತ್ತ ರೀಜನಲ್‌ ಮೆನೇಜರ್‌ ಎ. ಕೃಷ್ಣ ರೈ ಉದ್ಘಾಟಿಸಿದರು. ವಿಜಯ ಬ್ಯಾಂಕ್‌ ನಿವೃತ್ತ ಮೆನೇಜರ್‌ ಪಿ.ಡಿ. ಕೃಷ್ಣ ಕುಮಾರ್‌ ರೈ ದೇವಸ್ಯ, ಸವಣೂರು ಗ್ರಾಮ ಪಂಚಾಯಿತಿ ಸದಸ್ಯ ಶೀನಪ್ಪ ಶೆಟ್ಟಿ ನೆಕ್ರಾಜೆ ಮಾತನಾಡಿದರು.

ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್‌ ನಿಡ್ವಣ್ಣಾಯ, ತಾಲ್ಲೂಕು ಜನ ಜಾಗೃತಿ ವೇದಿಕೆ ಅಧ್ಯಕ್ಷ, ವಕೀಲ ಮಹೇಶ್‌ ಕೆ, ಪುತ್ತೂರು ಹಿಂದೂ ಜಾಗರಣಾ ವೇದಿಕೆ ಗೌರವಾಧ್ಯಕ್ಷ ಪ್ರಕಾಶ್‌ ರೈ ಮುಗೇರುಗುತ್ತು, ಸುಳ್ಯ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಪ್ರಗತಿಪರ ಕೃಷಿಕರಾದ ರವೀಂದ್ರ ರೈ, ಬಾಲಕೃಷ್ಣ ರೈ ಅಭ್ಯುದಯ, ಪ್ರಸನ್ನ ರೈ ನೆಕ್ಕರೆ, ಸಂತೋಷ್‌ ಶೆಟ್ಟಿ ಕಲಾಯಿ, ಸವಣೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು, ಸದಸ್ಯರಾದ ತೀರ್ಥರಾಮ ಕೆಡೆಂಜಿ, ರಪೀಕ್‌, ರಝಾಕ್‌ ಕೆನರಾ, ನಿವೃತ್ತ ಮುಖ್ಯಶಿಕ್ಷಕ ಮೋನಪ್ಪ ನಾಯ್ಕ, ಸಿಎ ಬ್ಯಾಂಕ್ ನಿರ್ದೇಶಕ ಸೋಮನಾಥ ಡಿ. ಕನ್ಯಾಮಂಗಲ, ಪಿ.ಡಿ. ಗಂಗಾಧರ ರೈ ದೇವಸ್ಯ, ಉದ್ಯಮಿ ಸುಂದರ ರೈ ಸವಣೂರು, ದೈವಗಳ ಪಾತ್ರಿಗಳು, ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು, ಸದಸ್ಯರು ಇದ್ದರು. ಪುರುಷೋತ್ತಮ ಕುಂಡಡ್ಕ, ಸವಿತಾ ಮುಂಡಾಜೆ ನಿರೂಪಿಸಿದರು.

LEAVE A REPLY

Please enter your comment!
Please enter your name here