ಮಕ್ಕಳ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ತಜ್ಞ ಡಾ.ಪ್ರಸಾದ್ ಬಿ.ಎಸ್.ರವರು ಉಷಾ ಪಾಲಿ ಕ್ಲಿನಿಕ್‌ನಲ್ಲಿ ಸೇವೆಗೆ ಲಭ್ಯ

0

ಪುತ್ತೂರು: ಮಂಗಳೂರಿನ ಪ್ರತಿಷ್ಠಿತ ಎಜೆ ಆಸ್ಪತ್ರೆ ಮತ್ತು ಎಸ್.ಸಿ.ಎಸ್ ಆಸ್ಪತ್ರೆಯಲ್ಲಿ ಮಕ್ಕಳ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಪ್ರಸಾದ್ ಬಿ.ಎಸ್ ಅವರು ತಿಂಗಳ ಎರಡನೇ ಹಾಗೂ ನಾಲ್ಕನೇ ಬುಧವಾರ ಸಂಜೆ ಪುತ್ತೂರಿನ ಉಷಾ ಪಾಲಿಕ್ಲಿನಿಕ್‌ನಲ್ಲಿ ಸೇವೆಗೆ ಲಭ್ಯರಿದ್ದಾರೆ. ಇವರು ಪುತ್ತೂರಿನ ಮರೀಲ್ ನಿವಾಸಿ, ಸರ್ಕಾರಿ ಪದವಿ ಕಾಲೇಜು, ಬೆಳ್ಳಾರೆಯ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಭಟ್ ಬಿ ಹಾಗೂ ಸೀತಾಲಕ್ಷ್ಮಿ ಬಿ ಭಟ್ ಅವರ ಪುತ್ರ.


ಬೆಂಗಳೂರಿನ ಪ್ರತಿಷ್ಠಿತ ಸಾಕ್ರ ವರ್ಲ್ಡ್ ಹಾಸ್ಪಿಟಲ್ ಮತ್ತು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಈ ಕ್ಷೇತ್ರದಲ್ಲಿ ಐದು ವರ್ಷಕ್ಕೂ ಅಧಿಕ ಅನುಭವ ಇರುವ ಇವರು ಮಕ್ಕಳ ಜೀರ್ಣಾಂಗವ್ಯೂಹ, ಯಕೃತ್ತು, ಪಿತ್ತಜನಕಾಂಗ ಹಾಗೂ ಮೇದೋಜೀರಕ ಗ್ರಂಥಿ ಸಂಬಂಧಿಸಿದ ಹಾಗೂ ಮಕ್ಕಳ ಇತರ ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಹಾಗೂ ಎಂಡೋಸ್ಕೋಪಿ ಮತ್ತು ಕೊಲೊನೋಸ್ಕೋಪಿ ಕಾರ್ಯವಿಧಾನದಲ್ಲಿ ಉತ್ತಮ ಪರಿಣತಿ ಹೊಂದಿರುತ್ತಾರೆ. ಇವರು ಪ್ರತಿಷ್ಠಿತ ಇಂಡಿಯನ್ ಸೊಸೈಟಿ ಆಫ್ ಪೀಡಿಯಾಟ್ರಿಕ್ಸ್ ಗ್ಯಾಸ್ಟ್ರೋಎಂಟರಾಲಜಿ, ಹೆಪಟಾಲಜಿ ಮತ್ತು ನ್ಯೂಟ್ರಿಷನ್ ಹಾಗೂ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್‌ನ ಸದಸ್ಯರಾಗಿದ್ದು ಅನೇಕ ಅಂತರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪೀಡಿಯಾಟ್ರಿಕ್ ಗ್ಯಾಸ್ಟ್ರೋಎಂಟರಾಲಜಿ ಕ್ಷೇತ್ರಕ್ಕೆ ಸಂಬಂಧಪಟ್ಟ ವೈದ್ಯಕೀಯ ಲೇಖನಗಳನ್ನು ಬರೆದಿರುತ್ತಾರೆ. ಇವರಲ್ಲಿ ಸಲಹೆ ಮತ್ತು ಚಿಕಿತ್ಸೆ ಪಡೆಯಲು ಉಷಾ ಪಾಲಿ ಕ್ಲಿನಿಕ್ ದೂರವಾಣಿ ಸಂಖ್ಯೆ 9008256005 ಗೆ ಕರೆ ಮಾಡಬಹುದೆಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here