ಪುತ್ತೂರು: ಗೃಹ ಬಳಕೆಯ ಗ್ರಾಹಕರಿಗೆ ಸಿಹಿ ಸುದ್ದಿ. ಗೇಲ್ ಇಂಡಿಯಾ ಲಿ. ಕಂಪನಿಯ ಗೃಹ ಬಳಕೆಯ ಗೇಲ್ ಗ್ಯಾಸ್(ಪಿಎನ್ಜಿ)ನ್ನು ಮನೆ ಮನೆಗೆ ಸರಬರಾಜು ಮಾಡುತ್ತಿದ್ದು ಉಚಿತ ಪಿಎನ್ಜಿ ನೋಂದಣಿಯ ಯೋಜನೆಯನ್ನು ಸಹ ಹೊಂದಿದೆ.
ಈ ಗ್ಯಾಸ್ ಪರವಾನಿಗೆಯನ್ನು ಮೆ|ಯೋಗಮಯ ಮತ್ತು ಕಂಪನಿಗೆ ವಹಿಸಲಾಗಿರುತ್ತದೆ. ಈಗಾಗಲೇ ಈ ಸಂಸ್ಥೆಯು ಮೂಲ್ಕಿ, ಮಂಗಳೂರು, ಮೂಡಬಿದ್ರೆಯಲ್ಲಿ ಯಶಸ್ವಿಯಾಗಿ ವ್ಯವಹರಿಸುತ್ತಿದ್ದು ಇದೀಗ ಪುತ್ತೂರು ತಾಲೂಕಿಗೆ ತನ್ನ ಉದ್ಯಮವನ್ನು ವಿಸ್ತರಿಸುತ್ತಿದೆ. ಪಿ.ಎನ್.ಜಿ ಗ್ಯಾಸ್ ಈಗ ಗ್ರಾಹಕ ಸ್ನೇಹಿತರಾಗಿದ್ದು ಇದು ಪ್ರತಿಯೊಂದು ಕುಟುಂಬಕ್ಕೂ ಅನುಕೂಲಕರ ಮತ್ತು ಮಿತವ್ಯಯಿಯಾಗಿ ಪರಿಣಮಿಸಿದೆ.
ಇದೀಗ ಈ ಅಧಿಕಾರವನ್ನು ಪುತ್ತೂರು ತಾಲೂಕಿಗೆ (ದಕ್ಷಿಣ ಕನ್ನಡ) ನೀಡಿದ್ದು ಮತ್ತು ಸ್ಪಷ್ಟವಾದ ಫೋಟೋ ಮತ್ತು ಸಹಿ ಮಾಡಿದ ಗುರುತಿನ ಚೀಟಿಗಳನ್ನು ಹೊಂದಿರುವ ಪ್ರತಿನಿಧಿಗಳಿಗೆ ಮಾತ್ರ ಮಾನ್ಯವಾಗಿರುತ್ತದೆ ಮತ್ತು ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಉಲ್ಲೇಖಿಸಿ ಮೂಲ ಕೆವೈಸಿ ವಿವರಗಳೊಂದಿಗೆ ಪಿಎನ್ಜಿ ಅರ್ಜಿ ನಮೂನೆಗಳನ್ನು ಸಂಗ್ರಹಿಸಲು ಅವರಿಗೆ ಅಧಿಕಾರ ನೀಡಿರುತ್ತದೆ.
ಗೇಲ್ ಗ್ಯಾಸ್ ತನ್ನ ಮಾರಾಟಗಾರರು ಮತ್ತು ಅವರ ಪ್ರತಿನಿಧಿಗಳು ಗ್ರಾಹಕರ ಬಗ್ಗೆ ಅನಪೇಕ್ಷಿತ ನಡವಳಿಕೆಯ ಬಗ್ಗೆ ಶೂನ್ಯ ಸಹಿಷ್ಣು ನೀತಿಯನ್ನು ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ ಸಾಮೆತ್ತಡ್ಕ ಪ್ರಥಮ ಕ್ರಾಸ್ ನಿವಾಸಿ ಚಾರ್ಲ್ಸ್ ಫುಡ್ತಾದೊ(9449030091, 08251-230091, 8050077985) ರವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಪಿ.ಎನ್.ಜಿ ಪ್ರಯೋಜನಗಳು…
*ಸಿಲಿಂಡರ್ ಬದಲಾಯಿಸುವ ಸಮಸ್ಯೆಯಿಲ್ಲ
*ಬಳಕೆಗೆ ಅನುಗುಣವಾಗಿ ಹಣ ಪಾವತಿಸಿ
*ನಿರಂತರ ಪೂರೈಕೆ *ಮಿತವ್ಯಯಕಾರಿ
*ಪರಿಸರ ಸ್ನೇಹಿ ಇಂಧನ *ಕಳ್ಳತನದ ಅವಕಾಶವಿಲ್ಲ *ಸುರಕ್ಷಿತ
ನೋಂದಣಿಗೆ ಅಗತ್ಯವಿರುವ ದಾಖಲೆಗಳು..
*ಗುರುತಿನ ಚೀಟಿ *ಮಾಲಿಕತ್ವದ ರುಜುವಾತು