ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ತೀವ್ರ ರಕ್ತಹೀನತೆಯಿಂದ ಬಳಲುತ್ತಿದ್ದ ಭ್ರೂಣಕ್ಕೆ ಜೀವದಾನ

0

ಮಂಗಳೂರು: ತೀವ್ರ ರಕ್ತಹೀನತೆಯಿಂದ ಬಳಲುತ್ತಿದ್ದ 29 ವಾರಗಳ ಭ್ರೂಣವನ್ನು ಮಂಗಳೂರಿನ ಎ. ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಭ್ರೂಣ ಔಷಧ ತಜ್ಞರ ತಂಡ ಇಂಟರ್ವೆನ್ಷನ್ ಕಾರ್ಯವಿಧಾನದ ಮೂಲಕ ರಕ್ಷಿಸಿದ್ದಾರೆ.ಭ್ರೂಣತಜ್ಞ ವೈದ್ಯರಾದ ಡಾ ಅಕ್ಷಿತ್ ಅಯ್ಯಪ್ಪ ಎಂ. ಜೆ. ಮಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಗರ್ಭಾಶಯದ ಒಳಗಿನ ರಕ್ತ ವರ್ಗಾವಣೆಯನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರು: ತೀವ್ರ ರಕ್ತ ಹೀನತೆಯಿಂದ ಬಳಲುತ್ತಿದ್ದ 29 ವಾರಗಳ ಭ್ರೂಣವನ್ನು ಮಂಗಳೂರಿನ ಎ. ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಭ್ರೂಣ ಔಷಧ ತಜ್ಞರ ತಂಡ ಇಂಟರ್ವೆನ್ಷನ್‌ಕಾರ್ಯವಿಧಾನದ ಮೂಲಕ ರಕ್ಷಿಸಿದ್ದಾರೆ. ಭ್ರೂಣ ತಜ್ಞ ವೈದ್ಯರಾದ ಡಾ. ಅಕ್ಷಿತ್‌ಅಯ್ಯಪ್ಪ ಎಂ. ಜೆ. ಮಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಗರ್ಭಾಶಯದ ಒಳಗಿನ ರಕ್ತ ವರ್ಗಾವಣೆಯನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.


ತಾಯಿ ಮತ್ತು ಮಗುವಿನ ರಕ್ತದ ಗುಂಪಿನ ನಡುವಿನ ವ್ಯತ್ಯಾಸದಿಂದ ಭ್ರೂಣದ ರಕ್ತ ಹೀನತೆಯು ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಕಂಡು ಬರುತ್ತದೆ. ತಾಯಿಯ ಬ್ಲಡ್‌ಗ್ರೂಪ್ ನೆಗೆಟಿವ್ ಮತ್ತು ತಂದೆಯ ಬ್ಲಡ್‌ಗ್ರೂಪ್ ಪಾಸಿಟಿವ್ ಆಗಿದ್ದಲ್ಲಿ ತಾಯಿ ಮತ್ತು ಮಗುವಿನ ರಕ್ತದ ಗುಂಪಿನ ನಡುವೆ ವ್ಯತ್ಯಾಸ ಕಂಡು ಬರುತ್ತದೆ. ಇದರಿಂದ ತಾಯಿಯ ರಕ್ತದಲ್ಲಿ ಪ್ರತಿಕಾಯಗಳ ಉತ್ಪಾದನೆಯಾಗಿ ಮಗುವಿನ ಕೆಂಪು ರಕ್ತ ಕಣಗಳ ವಿರುದ್ಧ ಕಾರ್ಯನಿರ್ವಹಿಸುತ್ತದೆ ಮತ್ತು ಅಂತಿಮವಾಗಿ ಭ್ರೂಣದ ರಕ್ತ ಹೀನತೆಗೆ ಕಾರಣವಾಗುತ್ತದೆ. ಇದಕ್ಕೆ ಪರಿಣಾಮಕಾರಿ ಚಿಕಿತ್ಸೆ ನೀಡದಿದ್ದಲ್ಲಿ ಭ್ರೂಣದ ಸಾವಿಗೆ ಕಾರಣವಾಗಬಹುದು.


ತಾಯಿಯು 26 ವಾರಗಳ ಗರ್ಭಾವಸ್ಥೆಯಲ್ಲಿ ತಪಾಸಣೆಗಾಗಿ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಬಂದರು. ಆಸ್ಪತ್ರೆಯ ಕನ್ಸಲ್ಟೆಂಟ್‌ರೇಡಿಯಾಲಜಿಸ್ಟ್ ಮತ್ತು ಫೀಟಲ್ ಮೆಡಿಸಿನ್ ಸ್ಪೆಷಲಿಸ್ಟ್ ಡಾ. ಅಕ್ಷಿತ್‌ಅಯ್ಯಪ್ಪ ಎಂ.ಜೆ.ಅವರು ಭ್ರೂಣದ ರಕ್ತಹೀನತೆಯ ಆರಂಭಿಕ ಲಕ್ಷಣಗಳನ್ನು ಪತ್ತೆಹಚ್ಚಿ ನಿಯಮಿತವಾದ ಫಾಲೋ-ಅಪ್ ಸ್ಕ್ಯಾನ್‌ಗೆ ಸಲಹೆ ನೀಡಿದರು. ಸಂಭವನೀಯ ಫಲಿತಾಂಶಗಳು ಮತ್ತು ಭ್ರೂಣವನ್ನು ಉಳಿಸಲು ಅಗತ್ಯವಿರುವ ಇಂಟರ್ವೆನ್ಷನ್‌ಗಳ ಬಗ್ಗೆ ಅವರು ತಾಯಿಗೆ ಮತ್ತು ಅವರ ಕುಟುಂಬಕ್ಕೆ ಸಲಹೆ ನೀಡಿದರು.
ನಂತರದ ಸ್ಕ್ಯಾನ್‌ಗಳಲ್ಲಿ, ಭ್ರೂಣದ ರಕ್ತ ಹೀನತೆಯು ಹೆಚ್ಚಾಗಿ ತಕ್ಷಣದ ಚಿಕಿತ್ಸೆಯ ಅಗತ್ಯವಿದೆ ಎಂದು ಕಂಡು ಬಂದಿದ್ದು, ಡಾ. ಅಕ್ಷಿತ್ ಅಯ್ಯಪ್ಪ ಮತ್ತು ಡಾ. ಕಾರ್ತಿಕ್ ಸೆಂಥಿಲ್ವೆಲ್ ಅವರು ಅಗತ್ಯಗಳಿಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ರಕ್ತವನ್ನು ಬಳಸಿಕೊಂಡು ಗರ್ಭಾಶಯದ ಒಳಗಿನ ಭ್ರೂಣಕ್ಕೆ ಮಾಡಿದರು. ಭ್ರೂಣಕ್ಕೆ ಅರಿವಳಿಕೆ ನೀಡಿ ಕಾರ್ಯವಿಧಾನವು ಒಂದು ಗಂಟೆಯವರೆಗೆ ನಡೆಯಿತು. ಆಸ್ಪತ್ರೆಯ ರಕ್ತ ಕೇಂದ್ರದ ಅಧಿಕಾರಿ ಡಾ.ಅರವಿಂದ್ ಹಾಗೂ ಗುಣಮಟ್ಟ ಮತ್ತು ತಾಂತ್ರಿಕ ವ್ಯವಸ್ಥಾಪಕರಾದ ಪಿ.ಆರ್.ಗೋಪಾಲಕೃಷ್ಣ ಅವರು ವಿಶೇಷವಾಗಿ ರಕ್ತವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾದರು.


ಗರ್ಭಾಶಯದ ಒಳಗಿನ ಭ್ರೂಣರಕ್ತ ವರ್ಗಾವಣೆ ಯಯಶಸ್ವಿ ಕಾರ್ಯವಿಧಾನದ ನಂತರ ಭ್ರೂಣವು ಸುಧಾರಣೆಯ ಲಕ್ಷಣಗಳನ್ನು ತೋರಿಸಿದೆ. ಪ್ರಸ್ತುತ, ತಾಯಿ ಮತ್ತು ಭ್ರೂಣವು ಚೆನ್ನಾಗಿಯೇ ಇದೆ. ಭ್ರೂಣವನ್ನು ಜಾಗರೂಕತೆಯಿಂದ ಮೇಲ್ವಿಚಾರಣೆ ಮಾಡಲಾಗುವುದು ಮತ್ತು 15-20 ದಿನಗಳ ನಂತರ ಪುನರಾವರ್ತಿತ ರಕ್ತ ವರ್ಗಾವಣೆಯ ಅಗತ್ಯವಿರಬಹುದು ಎಂದು ಡಾ.ಅಕ್ಷಿತ್ ಹೇಳಿದರು.


ಗರ್ಭಾಶಯದ ಒಳಗಿನ ಭ್ರೂಣದ ರಕ್ತ ಪರಿಚಲನೆಯು ಭ್ರೂಣದ ರಕ್ತಹೀನತೆಗೆ ಚಿಕಿತ್ಸೆ ನೀಡುವ ಹಾಗೂ ಜೀವ ಉಳಿಸುವ ವಿಧಾನವಾಗಿದೆ. ಇದು ಪರಿಣತಿ ಮತ್ತು ಅನುಭವದ ಅಗತ್ಯವಿರುವ ಸಂಕೀರ್ಣ ಕಾರ್ಯ ವಿಧಾನವಾಗಿದೆ. ಎ. ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಈ ವಿಧಾನವನ್ನು ನಿರ್ವಹಿಸಲು ಸೌಲಭ್ಯಗಳು ಮತ್ತು ತಜ್ಞರನ್ನು ಹೊಂದಿರುವ ಭಾರತದ ಕೆಲವೇ ಆಸ್ಪತ್ರೆಗಳಲ್ಲಿ ಒಂದಾಗಿದೆ.
ಡಾ. ಪ್ರಶಾಂತ್ ಮಾರ್ಲ ಕೆ, ಎಂ.ಸ್., ಎಂ.ಸಿಹೆಚ್ (ಯುರಾಲಜಿ)
ಮೆಡಿಕಲ್ ಡೈರೆಕ್ಟರ್ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ
ರೊಬಾಟಿಕ್ ಹಾಗು ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸಕ

LEAVE A REPLY

Please enter your comment!
Please enter your name here