ನೆಲ್ಯಾಡಿ: ಬಜತ್ತೂರು ಗ್ರಾಮದ ವಳಾಲು ಹಾಲು ಉತ್ಪಾದಕರ ಸಹಕಾರಿ ಸಂಘದ ವಿಸ್ತೃತ ಕಟ್ಟಡದ ಉದ್ಘಾಟನೆ ಸೆ.12ರಂದು ನಡೆಯಿತು.
ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿಯವರು ವಿಸ್ತೃತ ಕಟ್ಟಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದ.ಕ.ಜಿಲ್ಲೆಯಲ್ಲಿ ಹಾಲಿನ ಕೊರತೆ ಇದ್ದು ದಿನವೊಂದಕ್ಕೆ 1 ಲಕ್ಷ ಲೀ.ಹಾಲು ಹೊರ ಜಿಲ್ಲೆಯಿಂದ ತರಿಸಲಾಗುತ್ತಿದೆ. ಒಕ್ಕೂಟದಲ್ಲಿ ದಿನವೊಂದಕ್ಕೆ 5 ಲಕ್ಷ ಲೀ.ಹಾಲು ಸಂಗ್ರಹಣೆಯಾದಲ್ಲಿ ಮಾತ್ರ ಅನುಕೂಲವಾಗಲಿದೆ. ಹಾಲು ಉತ್ಪಾದನೆಗೆ ಯುವಕರು ಮುಂದೆ ಬರಬೇಕೆಂದು ಹೇಳಿದರು.
ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಪದ್ಮನಾಭ ಶೆಟ್ಟಿ ಅರ್ಕಜೆ, ನಾರಾಯಣ ಪ್ರಕಾಶ್ ಕೆ., ಸವಿನಾ ಎನ್.ಶೆಟ್ಟಿ, ವ್ಯವಸ್ಥಾಪಕ ಡಾ.ರಾಮಕೃಷ್ಣ ಭಟ್, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ.ಪ್ರಸಾದ್, ಬಜತ್ತೂರು ಗ್ರಾ.ಪಂ.ಅಧ್ಯಕ್ಷ ಗಂಗಾಧರ ಗೌಡ ಪಿ.ಎನ್.ನೆಕ್ಕರಾಜೆರವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪಿ.ವಸಂತ ಗೌಡ ಪಿಜಕ್ಕಳ ಮಾತನಾಡಿ, ಹೈನುಗಾರಿಕೆ ಲಾಭದಾಯಕವಲ್ಲದೇ ಇದ್ದರೂ ಕೃಷಿಗೆ ಪೂರಕವಾಗಿರುತ್ತದೆ. ಗ್ರಾಮದಲ್ಲಿ ಹೆಚ್ಚಿನ ಹಾಲು ಉತ್ಪಾದನೆ ಮೂಲಕ ಹಿರಿಯರು ಕಟ್ಟಿಬೆಳೆಸಿದ ಸಂಘವನ್ನು ಮತ್ತಷ್ಟೂ ಬೆಳೆಸಲು ಎಲ್ಲರೂ ಕೈ ಜೋಡಿಸಬೇಕೆಂದು ಹೇಳಿದರು. ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪವ್ಯವಸ್ಥಾಪಕ ಡಾ| ಡಿ.ಆರ್.ಸತೀಶ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯನಿರ್ವಹಣಾಧಿಕಾರಿ ಪದ್ಮಾವತಿ ವರದಿ ಮಂಡಿಸಿದರು. ಪಿ.ವಸಂತ ಗೌಡ ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ಸುಧಾಕರ ಯನ್.ವಂದಿಸಿದರು. ವಿಸ್ತರಣಾಧಿಕಾರಿ ಮಾಲತಿ ಪಿ.,ಕಾರ್ಯಕ್ರಮ ನಿರೂಪಿಸಿದರು. ಶ್ರೇಯಾ ಹಾಗೂ ಶ್ರದ್ಧಾ ಪ್ರಾರ್ಥಿಸಿದರು. ನಿರ್ದೇಶಕರಾದ ಎನ್.ಹೊನ್ನಪ್ಪ ಗೌಡ, ದಾಮೋದರ ಗೌಡ ಎಸ್., ಡಿ.ಕುಶಾಲಪ್ಪ ಗೌಡ, ಅಣ್ಣಿ ಪೂಜಾರಿ, ರಾಮಪ್ಪ ಪೂಜಾರಿ, ಸದಾನಂದ ಗೌಡ, ಪಿ.ಸುಲೋಚನಾ, ಸುಶೀಲ ಪಿ.,ಕಮಲ, ಯಮುನಾ, ಸಂಘದ ಸದಸ್ಯರು ಉಪಸ್ಥಿತರಿದ್ದರು. ಹಾಲು ಪರೀಕ್ಷಕ ಶಬೀರ್, ಬಿ.ಎಂ.ಸಿ.ನಿರ್ವಾಹಕ ಸಿದ್ದಾರ್ಥ್ ಟಿ.ಜಿ., ಸಹಾಯಕ ಯತೀಶ್ ಗೌಡ ಡಿ.ಎಸ್., ಕೃ.ಗ.ಕಾರ್ಯಕರ್ತ ಎ.ಕಿಶೋರ್ ಮಾಡ್ತಾ ಸಹಕರಿಸಿದರು.
ಸನ್ಮಾನ:
ಮುಂಬಯಿಯಲ್ಲಿ ಉದ್ಯೋಗದಲ್ಲಿದ್ದರೂ ಊರಿಗೆ ಬಂದು ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ಯುವಕ ಅನಂತನಾಭ ಆರಾಲು ಹಾಗೂ ಹಿರಿಯ ಹೈನುಗಾರರಾದ ಶೇಖರ ಪೂಜಾರಿ ಶಿಬಾರ್ಲ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಶೇಖರ ಪೂಜಾರಿ ಅವರು ಅನಿಸಿಕೆ ವ್ಯಕ್ತಪಡಿಸಿದರು.