ಪಾಪೆಮಜಲು ಹಾಲು ಉತ್ಪಾದಕರ ಸಹಕಾರ ಸಂಘದ 2022-23 ನೇ ಸಾಲಿನ ಮಹಾಸಭೆ

0

ಅರಿಯಡ್ಕ: ಪಾಪೆಮಜಲು ಹಾಲು ಉತ್ಪಾದಕರ ಸಹಕಾರ ಸಂಘದ 2022-23 ನೇ ಸಾಲಿನ ಮಹಾಸಭೆಯು ಸೆ 11 ರಂದು ಸಂಘದ ಅಧ್ಯಕ್ಷ ವಿನಯಕುಮಾರ್ ರವರ ಅಧ್ಯಕ್ಷತೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ವಿನಯಕುಮಾರ್ ಮಾತನಾಡಿ “ಈ ವಾರ್ಷಿಕ ಸಾಲಿನಲ್ಲಿ ಸಂಘವು 8,04,745 ಲಕ್ಷ ರೂಪಾಯಿ ವ್ಯವಹಾರ ನಡೆಸಿದ್ದು 3,75,831.34ಲಕ್ಷ ರೂ ಲಾಭ ಗಳಿಸಿದೆ.ಸದಸ್ಯರಿಗೆ 17% ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು.ಸಂಘದ ಏಳಿಗೆಗೆ ಆಡಳಿತ ಮಂಡಳಿ, ಸಿಬ್ಬಂದಿಗಳ ಶ್ರಮ, ಸದಸ್ಯರ ಸಹಕಾರದಿಂದ ಸಾಧ್ಯ ಎಂದು ಹೇಳಿದರು.


ಸನ್ಮಾನ
ಸಂಘದ ನಿಕಟಪೂರ್ವ ಅಧ್ಯಕ್ಷರು ಹಾಗೂ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪಿ.ಎಸ್ ರಾಮ್ ಮೋಹನ್ ನೆಕ್ಕರೆ ಮತ್ತು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಗಣಪತಿ ಭಟ್ ಮತ್ತು ನಿರ್ದೇಶಕರಾದ ರಾಘವ ಪೂಜಾರಿ ಮರತ್ತಮೂಲೆ ಇವರು ಗಳನ್ನು ಸನ್ಮಾನಿಸಲಾಯಿತು.


ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಸಿರುವ ನಿತ್ಯಾನಂದ ಮಣಿಯಾಣಿಯವರಿಗೆಪ್ರಥಮಬಹುಮಾನ ಮತ್ತು ರಮೇಶ್ ರೈ ಯವರಿಗೆ ದ್ವಿತೀಯ ಬಹುಮಾನ ಹಾಗೂ ಹಿಂದಿನ ಅವಧಿಯಲ್ಲಿ ಹಾಲು ಪೂರೈಸಿರುವ ಪ್ರತಿ ಸದಸ್ಯರಿಗೂ ಪ್ರೋತ್ಸಾಹ ಬಹುಮಾನ ನೀಡಿ ಗೌರವಿಸಲಾಯಿತು.


ವೇದಿಕೆಯಲ್ಲಿ ಉಪಸ್ಥಿತರಿದ್ದ ದ.ಕ ಹಾಲು ಉತ್ಪಾದಕರ ಸಂಘದ ವೈದ್ಯಾಧಿಕಾರಿ ಅನುದೀಪ್ ಸದಸ್ಯರಿಗೆ ಹೈನುಗಾರಿಕಾ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರು, ಸದಸ್ಯರು ಹಾಗೂ ಸಿಬ್ಬಂದಿ ಗಳು ಉಪಸ್ಥಿತರಿದ್ದರು.ಕಾರ್ಯದರ್ಶಿರಮೇಶ್ ವಾರ್ಷಿಕ ವರದಿ ಮತ್ತು ಲೆಕ್ಕ ಪರಿಶೋಧನಾ ವರದಿ ಮಂಡಿಸಿದರು.ನಿರ್ದೇಶಕರುಗಳಾದ ದಿನೇಶ್ ಕುಮಾರ್ ಸ್ವಾಗತಿಸಿ , ಲೋಕೇಶ್. ಕೆ ವಂದಿಸಿದರು.

LEAVE A REPLY

Please enter your comment!
Please enter your name here