ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಕಬಡ್ಡಿ ಪಂದ್ಯಾಟಕ್ಕೆ ಸಜ್ಜುಗೊಂಡಿದೆ ಲಿಟ್ಲ್ ಫ್ಲವರ್ ಶಾಲಾ ಕ್ರೀಡಾಂಗಣ

0

ನಾಳೆ( ಸೆ.16):ಪಂದ್ಯಾಟ, ಜಿಲ್ಲೆಯ ಬಾಲಕ-ಬಾಲಕಿಯರ 14 ಬಲಿಷ್ಠ ತಂಡಗಳು ಭಾಗಿ


ಪುತ್ತೂರು:ದರ್ಬೆ ಲಿಟ್ಲ್ ಫ್ಲವರ್ ಶಾಲಾ ಕ್ರೀಡಾಂಗಣದಲ್ಲಿ ಸೆ.16ರಂದು ನಡೆಯಲಿರುವ ಜಿಲ್ಲಾ ಮಟ್ಟದ 14ರ ವಯೋಮಾನದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟಕ್ಕೆ ಮ್ಯಾಟ್ ಅಂಕಣ ಸಹಿತ ಸಕಲ ಸಿದ್ದತೆಗಳನ್ನು ಶಾಲಾ ಆಡಳಿತ ಮಂಡಳಿ ಮಾಡಿಕೊಂಡಿದೆ.


ದ.ಕ.ಜಿ.ಪಂ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಪನಿರ್ದೇಶಕರ ಕಚೇರಿ(ಆಡಳಿತ) ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರು ಇದರ ಆಶ್ರಯದಲ್ಲಿ ದ.ಕ ಜಿಲ್ಲಾ ಮಟ್ಟದ ೧೪ರ ವಯೋಮಾನದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ ದರ್ಬೆ ಲಿಟ್ಲ್ ಫ್ಲವರ್ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರೊ| ಕಬಡ್ಡಿ ಮಾದರಿಯಲ್ಲಿಯೇ ಮ್ಯಾಟ್ ಅಂಕಣದಲ್ಲಿ ಬಾಲಕ-ಬಾಲಕಿಯರು ಪ್ರತಿಭೆಗಳನ್ನು ಪ್ರದರ್ಶಿಸಲಿದ್ದಾರೆ. ಪಂದ್ಯಾಟಕ್ಕೆ ವಿಶಾಲ ಕ್ರೀಡಾಂಗಣ, ಪ್ರತ್ಯೇಕ ಅಂಕಣಗಳು, ಮಳೆಯಿಂದ ತಪ್ಪಿಸಿಕೊಳ್ಳಲು ವಿಶಾಲವಾದ ಛಾವಣಿಗಳ ನಿರ್ಮಾಣ, ಸುಸಜ್ಜಿತ ವೇದಿಕೆಗಳು ನಿರ್ಮಾಣಗೊಂಡಿದೆ. ಪಂದ್ಯಾಟದ ಯಶಸ್ವಿಗಾಗಿ ಉಪ ಸಮಿತಿಗಳನ್ನು ರಚಿಸಿಕೊಂಡು ಎಲ್ಲಾ ಪೂರ್ವ ತಯಾರಿಗಳನ್ನು ಮಾಡಿಕೊಂಡಿದ್ದು ಕ್ರೀಡಾಭಿಮಾನಿಗಳನ್ನು ಕೈ ಬೀಸಿ ಕರೆಯುತ್ತಿದೆ.


14 ತಂಡಗಳು:
ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಜಿಲ್ಲೆಯಿಂದ 7 ಬಾಲಕರ ತಂಡ ಹಾಗೂ 7 ಬಾಲಕಿಯರ ತಂಡಗಳು ಸೇರಿದಂತೆ ಒಟ್ಟು 14 ಬಲಿಷ್ಠ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿದೆ. ಪಂದ್ಯಾಟಕ್ಕೆ ಬಾಲಕ- ಬಾಲಕಿಯರಿಗೆ ಪ್ರತ್ಯೇಕ ಕ್ರೀಡಾಂಗಣ ಸಜ್ಜುಗೊಂಡಿದೆ. ಬಾಲಕರ ವಿಭಾಗಕ್ಕೆ ರೇಮಂಡ್ ಹಾಗೂ ಬಾಲಕಿಯರ ವಿಭಾಗಕ್ಕೆ ಸಂತ ತೆರೆಸಾ ಪ್ರತ್ಯೇಕ ಅಂಕಣಗಳನ್ನು ನಿರ್ಮಿಸಲಾಗಿದೆ.


ವೀಕ್ಷಣೆಗೆ ಗ್ಯಾಲರಿ:
ಕಬಡ್ಡಿ ಪಂದ್ಯಾಟದ ವೀಕ್ಷಣೆಗೆ ಅನುಕೂಲವಾಗುವಂತೆ ಗ್ಯಾಲರಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇದರಲ್ಲಿ ಸುಮಾರು 1000 ಮಂದಿಗೆ ಕುಳಿತು ಪಂದ್ಯಾಟವನ್ನು ವೀಕ್ಷಿಸಬಹುದಾಗಿದೆ.
ಬೆಳಿಗ್ಗೆ ನಡೆಯುವ ಉದ್ಘಾಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ನಗರ ಸಭಾ ಸದಸ್ಯರು ಸಹಿತ ಅಧಿಕಾರಿಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಗರ ಸಭಾ ಮಾಜಿ ಅಧ್ಯಕ್ಷರು, ನಗರ ಸಭಾ ಸದಸ್ಯರು ಸಹಿತ ಹಲವು ಮಂದಿ ಗಣ್ಯರು ಆಗಮಿಸಲಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here