ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು, ಇವುಗಳ ಸಹಯೋಗದಲ್ಲಿ ಪುತ್ತೂರಿನ ವಿವೇಕಾನಂದ ಶಾಲೆಯಲ್ಲಿ ಸೆಪ್ಟೆಂಬರ್ .12ರಂದು ಆಯೋಜಿತವಾಗಿದ್ದ ಪುತ್ತೂರು ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಸುದಾನ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದ ’ರೋಗಗಳ ಮಾಯದಾಟ’ ಎಂಬ ವಿಜ್ಞಾನ ನಾಟಕವು ದ್ವಿತೀಯ ಸ್ಥಾನವನ್ನು ಪಡೆದಿದೆ.
ಈ ನಾಟಕವನ್ನು ಶ್ರೀಯುತ ಮೌನೇಶ್ ವಿಶ್ವಕರ್ಮರವರು ರಚಿಸಿ ನಿರ್ದೇಶಿಸಿದ್ದು, ವಿದ್ಯಾರ್ಥಿಗಳಾದ ವಿಘ್ನೇಶ್ ಸಿ. ರೈ (9ನೇ), ಆರ್ಣವ್ ಅನಂತ್ ಅರಿಗ (9ನೇ), ಖದೀಜತ್ ಅಫ್ನ(9ನೇ), ಭೂಮಿಕಾ ಎಚ್ (9ನೇ), ಅನಿಷಾ ಜಿ.ಎ(9ನೇ) ಮನ್ವಿತ್ ಎನ್(8ನೇ), ರಚನಾ ಯು ಎ (8ನೇ) ಮತ್ತು ಸಮೃದ್ಧಿ (8ನೇ) ಭಾಗವಹಿಸಿದ್ದರು. ಸಹ ಶಿಕ್ಷಕರಾದ ಪೂಜಾ ಎಂ.ವಿ, ಪ್ರೀತಮ್ ಡಿಸೋಜ ಮತ್ತು ಪುಷ್ಪಶ್ರೀ ಸಹಕರಿಸಿದ್ದರು. ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್ ಮತ್ತು ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ರವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.