ರೂ.49,94,998 ವಹಿವಾಟು, ರೂ.6,34,970 ಲಾಭ, ಶೇ.12 ಡಿವಿಡೆಂಡ್
ಪುತ್ತೂರು: ಸ್ನೇಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 202-23ನೇ ಸಾಲಿನ ಸಾಮಾನ್ಯ ಸಭೆ ನೆಹರೂ ನಗರದ ಮಾಸ್ಟರ್ ಪ್ಲಾನರಿಯ ಸರ್.ಯ.ವಿ. ಸಭಾಭವನದಲ್ಲಿ ನಡೆಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇಖಾ ಆನಂದ್ 2022-23ನೇ ಸಾಲಿನ ವರದಿ ವಾಚಿಸಿದರು. ಸಂಘವು 1888 ಸದಸ್ಯರನ್ನು ಹೊಂದಿದ್ದು ರೂ.6,89,72,071 ಬಂಡವಾಳ ಹೊಂದಿದೆ. ವರದಿ ಸಾಲಿನಲ್ಲಿ ಸಂಘವು ರೂ.49,94,998 ವಹಿವಾಟು ನಡೆಸಿ ರೂ.6,34,970 ಲಾಭ ಗಳಿಸಿದೆ ಎಂದು ಹೇಳಿದರು. ಗೌರವಾಧ್ಯಕ್ಷ ಆನಂದ್ ಎಸ್.ಕೆ. ಮಾತನಾಡಿ ಬದಲಾವಣೆ ಪ್ರಕೃತಿ ನಿಯಮ, ಸಂಘಕ್ಕೆ ಹೊಸ ಅಧ್ಯಕ್ಷರ ನೇಮಕ ಮಾಡುವುದರ ಮೂಲಕ ಹೊಸತನ ತಂದಿದ್ದೇವೆ ಎಂದರು.
ಸಂಘದ ಅಭಿವೃದ್ಧಿಗೆ ಸದಸ್ಯರೇ ಪೂರಕವಾಗಿರುತ್ತಾರೆ. ಸಂಘ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭಹಾರೈಸಿದರು. ಅಧ್ಯಕ್ಷ ಅರ್ಜುನ್ ಎಸ್.ಕೆ. ಮಾತನಾಡಿ ಸಂಘ 15 ವರ್ಷದ ಹಿಂದೆ ಸ್ಥಾಪನೆ ಆಗಿದೆ. ಇದೊಂದು ಕುಟುಂಬ ಆಗಿದೆ. ಸದಸ್ಯರೇ ಸಂಘದ ಬೆನ್ನೆಲುಬು ಆಗಿದ್ದಾರೆ ಎಂದರು. ಲಾಭ ಗಳಿಸುವುದು ಮಾತ್ರ ಮುಖ್ಯ ಅಲ್ಲ. ಲಾಭ ಗಳಿಸಲು ನೀವೆಲ್ಲಾ ಕಾರಣಕರ್ತರು ಎಂದು ಹೇಳಿ ಈ ಬಾರಿ ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡಲಾಗವುದು ಎಂದು ಹೇಳಿದರು. ಸಂಘದ ವ್ಯಾಪ್ತಿಯನ್ನು ಪುತ್ತೂರು ತಾಲೂಕಿನಿಂದ ದ.ಕ. ಜಿಲ್ಲೆಗೂ ವಿಸ್ತರಿಸುವ ಯೋಚನೆ ಇದೆ. ಸದಸ್ಯರು ಒಳ್ಳೆಯೆ ಉದ್ದೇಶಕ್ಕೆ ಸಾಲ ಪಡೆಯಿರಿ. ಸ್ನೇಹವೆಂಬ ಕುಟುಂಬ ಸದಾ ನಿಮ್ಮೊಂದಿಗಿರುತ್ತದೆ. ಎಲ್ಲರೂ ಸೇರಿ ಸಂಘವನ್ನು ಬಲಿಷ್ಟವಾಗಿ ಕಟ್ಟೋಣ ಎಂದರು.
ಉಪಾಧ್ಯಕ್ಷ ರಾಘವೇಂದ್ರ ಎಚ್.ಎಮ್., ನಿರ್ದೇಶಕರಾದ ಆಕಾಶ್ ಎಸ್.ಕೆ., ನವೀನ್ ನಾಯಕ್, ರವಿರಾಜ್ ನಾಯ್ಕ್ ಕೆ., ಶ್ರೀನಿವಾಸ ಎನ್., ವಿನಯ ಕುಮಾರ್ ಎಂ.ಎಸ್., ಕೇಶವ ಕೆ., ಸಿಬಂದಿಗಳಾದ ಸುಶ್ಮಿತಾ ಎಸ್.ಎಸ್., ನವ್ಯ ಬಿ.ಎಸ್., ಅಭೀಕ್ಷಾ ಆರ್.ಕೆ. ಸಹಕರಿಸಿದರು. ನಿರ್ದೇಶಕಿ ಮುಕ್ತಾ ಎಸ್. ನಾಯಕ್ ಅಂದಾಜು ಆಯವ್ಯಯ, ಮುಂಗಡ ಪತ್ರ ಮಂಡಿಸಿದರು. ಲೆಕ್ಕಿಗ ಪಾಂಡುರAಗ ನಾಯಕ್ ಲೆಕ್ಕಪರಿಶೋಧನಾ ವರದಿ ಮತ್ತು ಅನುಪಾಲನಾ ವರದಿ ಮಂಡಿಸಿದರು. ಸದಸ್ಯೆ ಮೀನಾಕ್ಷಿ ಬಿ. ಸ್ವಾಗತಿಸಿ ವಂದಿಸಿದರು. ವ್ಯವಸ್ಥಾಪಕ ಹರೀಶ್ ಕಾರ್ಯಕ್ರಮ ನಿರೂಪಿಸಿದರು.