ಉತ್ತಮ ಗುಣಮಟ್ಟ, ವಿವಿಧ ವಿನ್ಯಾಸದ ಕಾಂಜೀವರಂ ಸಾರಿ ಖರೀದಿಗೆ ಅವಕಾಶ- ಅನಿತಾ ಹೇಮನಾಥ ಶೆಟ್ಟಿ
ಪುತ್ತೂರು: ಬೊಳುವಾರು ಇನ್‌ಲ್ಯಾಂಡ್ ಮಯೂರ ಬಿಲ್ಡಿಂಗ್‌ನಲ್ಲಿ ಕಾಂಜೀವರಂ ಸಾರಿಗಳ ಶೋರೂಮ್ ತಮನ್ವಿ ಸಿಲ್ಕ್ಸ್ ಮತ್ತು ಸಾರೀಸ್ ಶುಭಾರಂಭಗೊಂಡಿತು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ರಿಬ್ಬನ್ ಕಟ್ ಮಾಡಿ ಉದ್ಘಾಟಿಸಿ ಮಾತನಾಡಿ ಬೆಳೆಯುತ್ತಿರುವ ಪುತ್ತೂರು ನಗರದಲ್ಲಿ ಮಹಿಳೆಯರಿಗಾಗಿ ಮಳಿಗೆ ಆರಂಭಗೊಂಡಿದೆ. ಮಹಿಳೆಯರಿಗೆ ಸಾರಿ ಎಂದರೆ ತುಂಬಾ ಇಷ್ಟಾವಾದುದು. ಮಹಿಳೆಯರಿಗೆ ಉತ್ತಮ ಆಯ್ಕೆಯ ಮಳಿಗೆಯಾಗಿದೆ. ಮಹಿಳೆಯರ ಇಷ್ಟವಾದ ಕಾಂಜೀವರಂ ಸಾರಿ ಖರೀದಿಗೆ ಒಂದು ಅವಕಾಶವನ್ನು ಈ ಸಂಸ್ಥೆ ಒದಗಿಸಿದೆ. ಕಂಪೆನಿಯಿಂದಲೇ ನೇರವಾಗಿ ಗ್ರಾಹಕರಿಗೆ ಇಲ್ಲಿ ಲಭ್ಯವಿದೆ. ಉತ್ತಮ ಗುಣಮಟ್ಟ, ವಿವಿಧ ವಿನ್ಯಾಸ ಗ್ರಾಹಕರನ್ನು ಆಕರ್ಷಿಸುತ್ತಿದೆ. ಈ ಸಂಸ್ಥೆಗೆ ಸಹಸಂಸ್ಥೆಗಳನ್ನು ಹುಟ್ಟುಹಾಕುವ ಅವಕಾಶ ಸಿಗಲಿ ಎಂದು ಹೇಳಿ ಹಾರೈಸಿದರು.
ಲಯನ್ಸ್ ಕ್ಲಬ್ ಮಾಜಿ ಜಿಲ್ಲಾ ಗವರ್ನರ್ ಡಾ|ಗೀತಾಪ್ರಕಾಶ್ ದೀಪ ಪ್ರಜ್ವಲಿಸಿ ಮಾತನಾಡಿ ಹಸಿವಾದಾಗ ಊಟ ಮಾಡಿದರೆ ಹಸಿವು ನೀಗುತ್ತದೆ. ಕೇವಲ ಜ್ಞಾನ ಸಾಕಾಗುವುದಿಲ್ಲ. ಜ್ಞಾನದ ಅನುಷ್ಠಾನ ಆಗಬೇಕು. ಮಹಿಳೆಯರು ಸ್ವಾವಲಂಬಿಗಳಾಗಬೇಕು. ಸ್ವಾವಲಂಬನೆಯಿಂದ ಬದುಕಬೇಕು. ಇದಕ್ಕೆ ಅರ್ಥಪೂರ್ಣವಾಗಿ ಈ ಮಳಿಗೆಯನ್ನು ಪ್ರಾರಂಭಿಸಿದ್ದಾರೆ. ಬಗೆ ಬಗೆಯ ವಿನ್ಯಾಸ ಆವಿಷ್ಕಾರವಾಗುವ ಇಂದಿನ ದಿನಗಳಲ್ಲಿ ವಿವಿಧ ವಿನ್ಯಾಸದ ಸಾರಿಗಳನ್ನು ಮಹಿಳೆಯರಿಗೆ ಒದಗಿಸಿದ್ದಾರೆ. ಈ ಸಂಸ್ಥೆ ಉತ್ತರೋತ್ತರವಾಗಿ ಬೆಳಗಲಿ ಎಂದು ಹಾರೈಸಿದರು. ಅಕ್ಷಯ ಸಮೂಹ ಸಂಸ್ಥೆಗಳ ಚೆಯರ್‌ಮೇನ್ ಜಯಂತ್ ನಡುಬೈಲು ಮಾತನಾಡಿ ಬೆಳೆಯುತ್ತಿರುವ ನಗರ ಪುತ್ತೂರಿನ ಹೃದಯ ಭಾಗದಲ್ಲಿ ಉತ್ತಮ ಬ್ರಾಂಡೆಡ್‌ಗಳ ಸಾರಿ ಮಳಿಗೆ ಆರಂಭಿಸಿದ್ದಾರೆ. ಗ್ರಾಹಕರು ಬೆನ್ನ ಹಿಂದೆ ಸಹಕಾರ ನೀಡಿದರೆ ಸಂಸ್ಥೆ ಬೆಳೆಯುತ್ತದೆ. ಗ್ರಾಹಕರಿಗೆ ನಗುಮೊಖದ ಸೇವೆ, ಗುಣಮಟ್ಟ ನೀಡಿದರೆ ಗ್ರಾಹಕರು ಸಂಸ್ಥೆಯೊಂದಿಗೆ ನಿಲ್ಲುತ್ತಾರೆ. ಈ ಸಂಸ್ಥೆ ವಿವಿಧೆಡೆ ಶಾಖೆಗಳನ್ನು ತೆರೆದು ಅಭಿವೃದ್ಧಿ ಹೊಂದಲಿ ಎಂದರು.
ವಿಟ್ಲ ಸುರಕ್ಷಾ ಆಸ್ಪತ್ರೆಯ ಡಾ.ಗಾಯತ್ರಿ ಜಿ. ಪ್ರಕಾಶ್ ಮಾತನಾಡಿ ಮಾಲಕರು ಹೊಸ ಅಧ್ಯಾಯ ಪ್ರಾರಂಭ ಮಾಡಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಹೊಸ ಹೆಜ್ಜೆ ಇಟ್ಟಿದ್ದಾರೆ. ಅವರು ನಂಬಿದ ದೈವ ದೇವರುಗಳು, ಗುರುಹಿರಿಯರ ಆಶೀರ್ವಾದದಿಂದ ಸಂಸ್ಥೆ ಬೆಳೆಯಲಿ ಎಂದು ಹಾರೈಸಿದರು. ಪುತ್ತೂರು ನಗರಸಭಾ ಮಾಜಿ ಸದಸ್ಯ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ ನಾವು ನೀಡುವ ಸೇವೆ ಹಾಗೂ ಗುಣಮಟ್ಟದಿಂದ ಗ್ರಾಹಕರನ್ನು ಸೆಳೆಯಲು ಸಾಧ್ಯ. ಪುತ್ತೂರು ಶ್ರಿಮಹಾಲಿಂಗೇಶ್ವರನ ನೆಲೆಯಲ್ಲಿ ಯಾರು ಉದ್ಯಮ ಆರಂಭಿಸುತ್ತಾರೊ ಅವರಿಗೆ ಶ್ರೀಮಹಾಲಿಂಗೇಶ್ವರ ಬೇಗ ಅನುಗ್ರಹಿಸುತ್ತಾನೆ. ಎಲ್ಲರ ಸಂಪೂರ್ಣ ಆಶೀರ್ವಾದ ಇರುತ್ತದೆ. ಸಂಸ್ಥೆ ರಾಜ್ಯದಾದ್ಯಂತ ವಿಸ್ತರಿಸಲಿ ಎಂದು ಹಾರೈಸಿದರು. ಐಶ್ವರ್ಯ ಬ್ಯೂಟಿ ಪಾರ್ಲರ್‌ನ ಮಾಲಕಿ ಐಶ್ವರ್ಯ ಚಂದ್ರಶೇಖರ್ ಶುಭ ಹಾರೈಸಿದರು.
ವಿಜಯ ಸುಪಾರಿ ಇಂಡಸ್ಟ್ರೀಸ್ ಮಾಲಕ ರಾಮ ಭಟ್, ಇನ್‌ಲ್ಯಾಂಡ್ ಮಯೂರ್‌ನ ಮೆನೇಜರ್ ಮಹೇಶ್, ಆರ್ಕಿಟೆಕ್ಚರ್ ಮಯೂರ ಜಾಧವ್, ಪೆಟ್ ಪ್ಲಾನೆಟ್‌ನ ಪ್ರವೀಣ್‌ರಾಜ್, ಸಾಯಿಪೂಜಾ ಗ್ರೂಪ್ಸ್‌ನ ಮಾಲಕ ಯತಿಶ್ ಸುವರ್ಣ, ರೋಟರಿ ಮಾಜಿ ಅಧ್ಯಕ್ಷ ಪಶುಪತಿ ಶರ್ಮಾ, ಪುರಂದರ ರೈ ಕೊಂರ್ಬಡ್ಕ ಬೀಡು, ರಾಧಾಕೃಷ್ಣ ಪೂಜಾರಿ, ಭಾಸ್ಕರ ಕುಡುಪು, ಭರತ್ ಸೇರಿದಂತೆ ವಿವಿಧ ಗಣ್ಯರು ಆಗಮಿಸಿ ಶುಭ ಹಾರೈಸಿದರು. ಮಾಲಕಿ ಮಾಲಾಶ್ರೀ ವಿಜೇತ್ ಸ್ವಾಗತಿಸಿ ಮಾಲಕರ ಪತಿ ವಿಜೇತ್ ವಂದಿಸಿದರು.
ಬ್ರಾಂಡೆಡ್ ಕಂಪೆನಿಗಳ ವಿವಿಧ ವಿನ್ಯಾಸದ ಸಾರಿಗಳು ರೂ.3000ದ ಆರಂಭದ ಬೆಲೆಯಲ್ಲಿ ಲಭ್ಯವಿದೆ. ಗ್ರಾಹಕರು ತಮ್ಮ ಇಷ್ಟವಾದ ಸಾರಿಗಳನ್ನು ಖರೀದಿಸಬಹುದು. ಗ್ರಾಹಕರ ಸಂಪೂರ್ಣ ಸಹಕಾರ ಕೋರುತ್ತೇವೆ.
ಮಾಲಾಶ್ರೀ ವಿಜೇತ್
ಮಾಲಕರು