ಸೆ. 19: ʻಗಯಾಪದ ಕಲಾವಿದೆರ್‌ ಉಬಾರ್‌ʼ ತಂಡದ ʻಮುರಳಿ ಈ ಪಿರ ಬರೊಲಿʼ ನಾಟಕ ರಂಗಾರ್ಪಣೆ

0

ಪುತ್ತೂರು: ಬಾಲಕೃಷ್ಣ ಪೂಜಾರಿ ಪೆರುವಾಯಿ ಸಾರಥ್ಯದ, ಕಿಶೋರ್‌ ಜೋಗಿ ಉಬಾರ್‌ ಸಂಚಾಲಕತ್ವದಲ್ಲಿ ಐದನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ʻಗಯಾಪದ ಕಲಾವಿದೆರ್‌ ಉಬಾರ್‌ʼ ನಾಟಕ ತಂಡದ ಈ ವರ್ಷದ ನೂತನ ಕಲಾಕಾಣಿಕೆ ʻಮುರಳಿ ಈ ಪಿರ ಬರೊಲಿʼ ನಾಟಕದ ರಂಗಾರ್ಪಣೆ ಸೆ. 19 ರಂದು ಪಂಜ ಬಳ್ಳಕ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವದ ವೇದಿಕೆಯಲ್ಲಿ ನಡೆಯಲಿದೆ.


ಶಶಿಕುಮಾರ್‌ ಕೂಳೂರು ಕುಡ್ಲ ಇವರು ರಚಿಸಿ ನಿರ್ದೇಶನ ಮಾಡಿರುವ ಈ ನಾಟಕಕ್ಕೆ ಕಾರ್ತಿಕ್‌ ಡಿ. ಪುಣಚ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜೇಶ್‌ ಶಾಂತಿನಗರರವರ ಸಲಹೆ ಸಹಕಾರದಲ್ಲಿ, ಲಿತು ಸೌಂಡ್ಸ್‌ & ಲೈಟ್ಸ್‌ ಧ್ವನಿ ಬೆಳಕಿನಲ್ಲಿ, ಸಿದ್ದು ಬೆದ್ರರವರ ರಂಗಾಲಂಕಾರ, ವೇದಸ್ಯ ಕುಲಾಲ್‌ ರಾಮಕುಂಜರವರ ವರ್ಣಾಲಂಕಾರ, ಗುಣಕರ ಅಗ್ನಾಡಿಯವರ ಸಹಕಾರ, ದಿವಾಕರ ಸುರ್ಯ ಮತ್ತು ಕಿಶನ್‌ ಶೆಟ್ಟಿ ಸುರ್ಯ ರವರ ಸಮಗ್ರ ನಿರ್ವಹಣೆಯಲ್ಲಿ ನಾಟಕ ಮೂಡಿಬರಲಿದೆ.


ರಂಗ ಕಲಾವಿದರಾಗಿ ಗಂಗಾಧರ ಟೈಲರ್‌ ಉಬಾರ್‌, ರಾಜೇಶ್‌ ಶಾಂತಿನಗರ, ಕೀಶೋರ್‌ ಜೋಗಿ ಉಬಾರ್‌, ರಂಗಯ್ಯ ಬಲ್ಲಾಳ್‌ ಕೆದಂಬಾಡಿಬೀಡು, ಅಶೋಕ ಬನ್ನೂರು, ರಾಜಶೇಖರ ಶಾಂತಿನಗರ, ದಿವಾಕರ ಸುರ್ಯ, ಸತೀಶ್‌ ಶೆಟ್ಟಿ ಹಿರೇಬಂಡಾಡಿ, ಅನಿಲ್‌ ಇರ್ದೆ, ಉದಯ್‌ ಪುತ್ತೂರು, ಲಕ್ಷ್ಮಣ ಬೆಳ್ಳಿಪ್ಪಾಡಿ, ಚೇತನ್‌ ಅರಿಯಡ್ಕ, ವೈಶಾಲಿ ಎಂ. ಕುಂದರ್‌, ಉಷಾಲಕ್ಷ್ಮಣ ಬೆಳ್ಳಿಪ್ಪಾಡಿ,  ಅನುಷಾ ಜೋಗಿ ಪುರುಷರಕಟ್ಟೆ ಅಭಿನಯಿಸಲಿದ್ದಾರೆ

LEAVE A REPLY

Please enter your comment!
Please enter your name here