ಬೊಳುವಾರು: ವಸಂತ ಫಿಟ್ನೆಸ್ ಜಿಮ್ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ಬೊಳುವಾರು ಅಹಮದ್ ಟವರ್‌ನಲ್ಲಿ ಕಳೆದ ಹತ್ತು ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಾ ಬಂದ ವಸಂತ ಫಿಟ್ನೆಸ್ ಜಿಮ್ ಇದೀಗ ವಿಶಾಲವಾದ ಜಾಗ, ಹೊಸ ಸಲಕರಣೆಯೊಂದಿಗೆ ಬೊಳುವಾರಿನ ಧ್ರುವ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಸೆ. 16ರಂದು ಶುಭಾರಂಭಗೊಂಡಿತು.

ನೂತನ ಸಂಸ್ಥೆಯನ್ನು ಬೊಳುವಾರು ಧ್ರುವ ಕಾಂಪ್ಲೆಕ್ಸ್ನ ಮಾಲಕ ರಘುವೀರ್ ಪ್ರಭುರವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಜೀವನಕ್ಕೆ ಅವಶ್ಯಕವಾದ ಹಾಗೂ ನಾವು ಆರೋಗ್ಯವಂತವಾಗಿರಲು ವ್ಯಾಯಾಮವು ನಮಗೆ ಬೇಕಾಗಿದ್ದು ಜೀವನಪರ್ಯಂತ ನಾವು ಆರೋಗ್ಯವಂತ ಆಗಿರಲು ಇಂತಹ ಜಿಮ್‌ನಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುವಂತೆ ತಿಳಿಸಿದರು. ದೀಪ ಬೆಳಗಿಸಿ ಉದ್ಘಾಟಿಸಿದ ವಸಂತ ಫಿಟ್ನೆಸ್ ಜಿಮ್ ಮಾಲಕ ವಸಂತ ಬಂಗೇರವರ ಮಾತೃಶ್ರೀ ಯಮುನಾರವರು ಮಾತನಾಡಿ ಶುಭ ಹಾರೈಸಿದರು. ಉಪ್ಪಿನಂಗಡಿ ಯೂನಿಯನ್ ಬ್ಯಾಂಕಿನ ಮ್ಯಾನೇಜರ್ ನಾಗರಾಜರವರು ಮಾತನಾಡಿ ಜಿಮ್ ವ್ಯಾಯಾಮ ಮನುಷ್ಯರನ್ನು ಆರೋಗ್ಯವಂತನಾಗಿಸಲು ಸಹಕರಿಸುತ್ತದೆ ಎಂದರು. ಉತ್ತಮ ಮೆಡಿಕಲ್‌ನ ಮಾಲಕ ಮಹಾಬಲೇಶ್ವರ ಶರ್ಮ, ವಸಂತ ಬಂಗೇರರವರ ಪತ್ನಿ ರಶ್ಮಿ ಕೆ., ಕೆ ಬಾಲುಸು ಪವರ್ ಝೋನ್ ಟ್ರೈನರ್ ಅವಿನಾಶ್ ಕೃಷ್ಣಪ್ಪ ಪೂಜಾರಿ ಕರುವೆಲ್ ಕಲಾವಿದ ಕೇಶವ ಮಚ್ಚಿಮಲೆ ಮೊಬೈಲ್ 21 ಮಾಲಕ ಅಬ್ದುಲ್ ರಶೀದ್ ಕಾವು ಮೊದಲಾದವರು ಅತಿಥಿಗಳಾಗಿ ಆಗಮಿಸಿದ್ದರು.

ವಸಂತ ಫಿಟ್ನೆಸ್ ಜಿಮ್ ಮಾಲಕ ಎಂ. ವಸಂತ ಬಂಗೇರ ಮಾತನಾಡಿ, ಜಿಮ್ಮಿನಿಂದ ಆಗುವ ಪ್ರಯೋಜನಗಳ ಮಾಹಿತಿ ನೀಡಿ ಕಳೆದ ಹತ್ತು ವರ್ಷಗಳಿಂದ ಬೊಳುವಾರು ಅಹಮದ್ ಟವರ್‌ನಲ್ಲಿ ಕಾರ್ಯಾಚರಿಸುತ್ತಿರುವ ಜಿಮ್ ಇದೀಗ ವಿಶಾಲವಾದ ಜಾಗದೊಂದಿಗೆ ಮತ್ತು ಹೊಸಹೊಸ ಸಲಕರಣೆಯೊಂದಿಗೆ ಬೊಳುವಾರಿನ ಧ್ರುವ ಕಾಂಪ್ಲೆಸ್ಸಿಗೆ ಸ್ಥಳಾಂತರ ಗೊಳಿಸಲಾಗಿದೆ. ಗ್ರಾಹಕರು ಈ ಹಿಂದಿನಂತೆ ಸಹಕರಿಸುವಂತೆ ವಿನಂತಿಸಿದರು. ಇಲ್ಲಿ ಮಹಿಳೆಯರ ಹಾಗೂ ಪುರುಷರ ಪ್ರತ್ಯೇಕ ಬ್ಯಾಚ್‌ಗಳಿದ್ದು ಮಹಿಳೆಯರಿಗೆ ಬೆಳಿಗ್ಗೆ ಗಂಟೆ 5ರಿಂದ 6 ಗಂಟೆ ಮತ್ತು 9:30 ರಿಂದ 11ರ ತನಕ ಹಾಗೂ ಮಹಿಳೆಯರಿಗೆ ಮತ್ತು ಪುರುಷರಿಗೆ ಬೆಳಗ್ಗೆ ಗಂಟೆ 5.30 ಬಗ್ಗೆ ರಿಂದ 9:30 ಮತ್ತು 3 ಗಂಟೆಯಿಂದ ರಾತ್ರಿ ಗಂಟೆ 10ರ ತನಕ ಜಿಮ್ ನಡೆಯಲಿದೆ ಆಸಕ್ತರು ವಿಚಾರಿಸುವಂತೆ ವಸಂತ ಬಂಗೇರರವರು ತಿಳಿಸಿದ್ದಾರೆ ಮಿಥುನ್ ಕುಮಾರ್ ಸುಬ್ರಹ್ಮಣ್ಯ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here