ಬನ್ನೂರು ಶಾಲೆಗೆ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದಿಂದ ಪ್ರಿಂಟರ್ ಕೊಡುಗೆ

0

ಪುತ್ತೂರು: ಬನ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದಿಂದ ಸಾರ್ವಜನಿಕ ಉಪಕಾರ ನಿಧಿ ವತಿಯಿಂದ ಅಗತ್ಯವಿರುವ ಪ್ರಿಂಟರ್ ಅನ್ನು ಕೊಡುಗೆಯಾಗಿ ನೀಡಲಾಯಿತು.
ಸಂಘದ ಅಧ್ಯಕ್ಷೆ ಗೌರಿ ಬನ್ನೂರು ಅವರು ಶಾಲೆಗೆ ಪ್ರಿಂಟರ್ ಅನ್ನು ಹಸ್ತಾಂತರಿಸಿದರು. ಸಂಘದ ನಿರ್ದೇಶಕರಾದ ಮೋಹಿನಿ ದಿವಾಕರ್, ಪ್ರೇಮಲತಾ ರಂಗನಾಥ ರಾವ್, ಜಯಶ್ರೀ ಎಸ್ ಶೆಟ್ಟಿ ಈ ಸಂದರ್ಭ ಜೊತೆಗಿದ್ದರು. ಕಾರ್ಯಕ್ರಮದಲ್ಲಿ ಎಸ್ .ಡಿ. ಎಂ .ಸಿ ಅಧ್ಯಕ್ಷ ಗುರುಪ್ರಸಾದ್, ಉಪಾಧ್ಯಕ್ಷರು, ಶಾಲಾ ಶಿಕ್ಷಕ ವೃಂದ, ಅಕ್ಷರ ದಾಸೋಹ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here