ದ.ಕ. ಜಿಲ್ಲೆಯ ಮನೆ ಮನೆಯಲ್ಲಿ ಕೃಷಿ ಭೂಮಿಯಲ್ಲಿ ಮಳೆಕೊಯ್ಲು-ನೀರಿನ ಸಂಗ್ರಹಣೆ

0

ಜಿಲ್ಲೆಯ ಪ್ರತಿ ಮನೆಯಲ್ಲೂ ಕಟ್ಟಡಗಳಲ್ಲೂ ಸೋಲಾರ್ ಪವರ್-ವಿದ್ಯುತ್ ಉತ್ಪಾದನೆ


ಧಾರಾಳ ಮಳೆ ಮತ್ತು ಬಿಸಿಲು ಇರುವ ದ.ಕ. ಜಿಲ್ಲೆಯಲ್ಲಿ ಈ ಎರಡನ್ನು ಉಪಯೋಗಿಸಿ ದ.ಕ. ಜಿಲ್ಲೆಯನ್ನು ಧಾರಾಳ ನೀರಿನ ಆಶ್ರಯವಿರುವ, ಮಾತ್ರವಲ್ಲ ಶುದ್ಧವಾದ ನೀರನ್ನು ಬೇರೆ ಜಿಲ್ಲೆಗಳಿಗೆ ನೀಡುವ ಕೇಂದ್ರವಾಗಬೇಕು. ಸೋಲಾರ್ ಪವರ್ ಉಪಯೋಗಿಸಿ ವಿದ್ಯುತ್ ಉತ್ಪಾದಿಸಿ ಸ್ವಾವಲಂಬಿಯಾಗುವುದಲ್ಲದೆ, ಉಳಿದ ಜಿಲ್ಲೆಗಳಿಗೆ ವಿದ್ಯುತ್ ನೀಡುವಂತಾಗಬೇಕು. ನೀರು ಮತ್ತು ವಿದ್ಯುತ್ ವಿಚಾರದಲ್ಲಿ ನಾವು ಸ್ವಾವಲಂಬಿಗಳಾದರೆ ಪ್ರತಿಯೊಂದು ಮನೆಯಲ್ಲಿಯೂ ದಾರಾಳ ನೀರು ಮತ್ತು ವಿದ್ಯುತ್ ಪವರ್ ಇರುವುದರಿಂದ ಎಲ್ಲಾ ವಿಭಾಗದ ಉತ್ಪಾದನೆಗಳಲ್ಲಿ ಹಾಗೂ ಎಲ್ಲಾ ಕೃಷಿ ವಿಭಾಗಗಳಲ್ಲಿ ಅಭಿವೃದ್ಧಿ ಆಗುವುದು ಖಂಡಿತ ಎಂಬ ನಂಬಿಕೆ ನಮ್ಮದು.


ಈ ಮೇಲಿನ ವಿಚಾರದ ಅನುಷ್ಠಾನಕ್ಕಾಗಿ ಸುದ್ದಿ ಮಾಹಿತಿ ಟ್ರಸ್ಟ್ ಪುತ್ತೂರು (ರಿ.)’ ಇದರ ಆಶ್ರಯದಲ್ಲಿಸುದ್ದಿ ಜನಾಂದೋಲನ ವೇದಿಕೆ’ಯು ಸುದ್ದಿ ಕೃಷಿ ಸೇವಾ ಕೇಂದ್ರd ‘ಅರಿವು’ ಎಂಬ ವಿಭಾಗದಡಿ ಯೋಜನೆಯನ್ನು ಕಾರ್‍ಯರೂಪಕ್ಕೆ ತರಲು ಯೋಚಿಸಿದೆ. ಸುದ್ದಿ ಮಾಧ್ಯಮ ಅದಕ್ಕೆ ಬೆಂಬಲವಾಗಿ ನಿಲ್ಲಲಿದೆ. ಈ ಯೋಜನೆಯನ್ನು ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲಿ ಪ್ರಾರಂಭಿಸಿ ಮತ್ತೆ ಜಿಲ್ಲೆಗೆ ವಿಸ್ತರಿಸುವುದರಿಂದ ಈ ಯೋಜನೆಗೆ ಆಯಾ ತಾಲೂಕಿನ ಶಾಸಕರನ್ನು, ಪ್ರಮುಖರನ್ನು, ಜನಪ್ರತಿನಿಧಿಗಳನ್ನು, ಸಂಘ ಸಂಸ್ಥೆಗಳನ್ನು, ಶಿಕ್ಷಣ ಸಂಸ್ಥೆಗಳನ್ನು, ಪಂಚಾಯತ್‌ಗಳನ್ನು ಮತ್ತು ಸರಕಾರದ ಎಲ್ಲಾ ವಿಭಾಗಗಳನ್ನು ಜಿಲ್ಲಾ ಮಟ್ಟದಲ್ಲಿ ತೊಡಗಿಸಿಕೊಳ್ಳಲಾಗುವುದು. ಈ ವಿಚಾರದಲ್ಲಿ ಆಸಕ್ತಿವುಳ್ಳವರು ಸುದ್ದಿ ಕೃಷಿ ಸೇವಾ ಕೇಂದ್ರದ `ಅರಿವು’ ಎಂಬ ವಿಭಾಗಕ್ಕೆ ಮಾಹಿತಿಯನ್ನು ಕಳುಹಿಸಬೇಕಾಗಿ ಕೇಳಿಕೊಳ್ಳುತ್ತೇವೆ.


ಸಂಪರ್ಕಿಸಿರಿ
ಪುತ್ತೂರು: 6364570738, 8050293990 ¸ಸುಳ್ಯ: 94811 86949 ಬೆಳ್ತಂಗಡಿ:: 9449527728 , ಮಂಗಳೂರು: 7090723170

LEAVE A REPLY

Please enter your comment!
Please enter your name here