ಪುತ್ತೂರು: ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ-ಮಣ್ಣಾಪು ಶ್ರೀ ಕೊರಗಜ್ಜ ಮತ್ತು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಶ್ರೀ ಕೊರಗಜ್ಜನ ತುಳು ಭಕ್ತಿಗೀತೆ ‘ಮೈಮೆ ಮಣ್ಣಾಪು’ ಧ್ವನಿಸುರುಳಿಯ ಬಿಡುಗಡೆ ಸೆ.17 ರಂದು ಸಂಕ್ರಮಣ ಸೇವೆಯಂದು ನೆರವೇರಿತು.
ಶ್ರೀ ಕೊರಗಜ್ಜ ಕ್ಷೇತ್ರದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು ಧ್ವನಿಸುರುಳಿಯನ್ನು ಅನಾವರಣಗೊಳಿಸಿ ಮಾತನಾಡಿ, ಇಂದಿನ ಕಲಿಯುಗದಲ್ಲಿ ಶ್ರೀ ಕೊರಗಜ್ಜನ ಕಾರಣಿಕ ಎಂಬುದು ಬಹಳಷ್ಟು ಪ್ರಸಿದ್ಧಿ ಪಡೆದಿದೆ ಎಂಬುದು ಸತ್ಯ. ಭಕ್ತನು ಶ್ರೀ ಕೊರಗಜ್ಜನಲ್ಲಿ ಶ್ರದ್ಧೆಯಿಂದ ಪ್ರಾರ್ಥಿಸಿದಾಗ ತಾನು ನೆನೆಸಿದ ಕಾರ್ಯ ಸಿದ್ಧಿಯಾಗುತ್ತದೆ ಎಂಬ ಸಂದೇಶ ರವಾನೆಯಾಗಿದೆ. ಅದೇ ರೀತಿ ಕೊರಗಜ್ಜನ ಕುರಿತು ರಚಿಸಿದ ಭಕ್ತಿಗೀತೆ ಇಂದು ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳ್ಳುತ್ತಿರುವುದು ಉತ್ತಮ ವಿಚಾರವಾಗಿದ್ದು, ಈ ಭಕ್ತಿಗೀತೆಯು ಭಕ್ತರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ಮೂಲಕ ಹೆಸರು ಪಡೆಯಲಿ ಹಾಗೂ ಕೊರಗಜ್ಜನ ಕುರಿತಾಗಿ ಮತ್ತಷ್ಟು ಹಾಡುಗಳು ಉದಯವಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಮೈಮೆ ಮಣ್ಣಾಪು ಕುರಿತು:
ಆರ್.ಎಮ್ ಕ್ರಿಯೇಷನ್ಸ್ ಅರ್ಪಿಸುವ ಭಕ್ತಿಗೀತೆ ‘ಮೈಮೆ ಮಣ್ಣಾಪು’ ಕುರಿತು ಅಜಯ್ ರಾಜ್ ಹಾಗೂ ಯಶವಂತ ಕಲಾಯಿರವರು ಸಾಹಿತ್ಯವನ್ನು ರಚಿಸಿದ್ದು, ತುಳುನಾಡ ಗಾಯನ ಲೋಕದ ಸ್ವರಮಾಣಿಕ್ಯ ಗುಣಪ್ರಸಾದ್ ಕುಕ್ಕಟ್ಟೆ, ರಂಜಿತ್ ಮೊಗರು ಹಾಗೂ ಸವಿತಾ ಪಂಜರವರು ಹಾಡಿದ್ದಾರೆ. ಜಯರಾಂ ಗೌಡ ಬೊಳ್ಳಗುಡ್ಡೆ ಹಾಗೂ ರವಿಚಂದ್ರ ನಾಯ್ಕ್ ಉದಯಗಿರಿರವರ ನಿರ್ಮಾಣ, ಅನೀಶ್ ಕಿನ್ನಿಗೋಳಿ ಸಂಕಲನ, ಮಣ್ಣಾಪು ಶ್ರೀ ಕೊರಗಜ್ಜ ಮತ್ತು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ಹಾಗೂ ಪಂಜಳ ಜೈ ಶ್ರೀರಾಂ ಫ್ರೆಂಡ್ಸ್ ತಂಡದ ಸಹಕಾರದಲ್ಲಿ ಧ್ವನಿಸುರುಳಿ ಮೂಡಿಬಂದಿದೆ.
ಸನ್ಮಾನ:
ಈ ಸಂದರ್ಭದಲ್ಲಿ ಸಹಕರಿಸಿದ ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಸ್ವರಮಾಣಿಕ್ಯ ಗುಣಪ್ರಸಾದ್ ಕುಕ್ಕಟ್ಟೆ, ಹಾಡುಗಾರ್ತಿ ಸವಿತಾ ಪಂಜ, ನಿರ್ಮಾಪಕ ರವಿಚಂದ್ರ ನಾಯ್ಕ ಉದಯಗಿರಿರವರುಗಳನ್ನು ಸನ್ಮಾನಿಸಲಾಯಿತು.
ಶ್ರೀ ಕ್ಷೇತ್ರದ ಅರ್ಚಕರಾದ ಕುಂಡ ಮಣ್ಣಾಪು, ಅಣ್ಣು ಮಣ್ಣಾಪು, ಗಣೇಶ್ ಕೆಮ್ಮಿಂಜೆ, ರವಿ ಮಣ್ಣಾಪು, ಅಧ್ಯಕ್ಷ ವಿಶ್ವನಾಥ ಮಣ್ಣಾಪು, ಪ್ರಮುಖರಾದ ಗಿರಿಧರ್ ಗೌಡ ಆಮೆಮನೆ ಸಂಪ್ಯ, ಅಭಿಲಾಶ್, ಸುಜೀರ್ ಕುಮಾರ್ ರೈ ನುಳಿಯಾಲು, ಪಂಜಳ ಜೈ ಶ್ರೀರಾಂ ಫ್ರೆಂಡ್ಸ್ ಸದಸ್ಯರು ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪುರುಷೋತ್ತಮ ಕುಂಡಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಕ್ಷೇತ್ರದಲ್ಲಿ 6ನೇ ಧ್ವನಿಸುರುಳಿ ಬಿಡುಗಡೆ..
1)ಮಣ್ಣಾಪುದ ಮಾಯೆ
2) ಭಕ್ತಿ ತೊಟ್ಟಿಲ್
3) ಮಾಯೊದ ಪರೆಲ್, ಮಣ್ಣಾಪುದ ನಿರೆಲ್
4) ಮಣ್ಣಾಪುದ ಮಣ್ಣಸಿರಿ
5)ಮಣ್ಣಾಪು ಮಣ್ಣ, ಮಾಯೊದ ಕರಿಗಂಧ
6) ಇದೀಗ ಮೈಮೆ ಮಣ್ಣಾಪು