ಪುತ್ತೂರು: ಕರೆಮನೆಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘ ಇದರ2022-23ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆ ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷೆ ಪುಷ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ವರದಿ ವರ್ಷದಲ್ಲಿ ಸಂಘವು 12005385.71ರೂಗಳ ವ್ಯವಹಾರ ನಡೆಸಿ 87725.80ಲೀ ಹಾಲನ್ನು 2756875.92ರೂಗಳಿಗೆ ಖರೀದಿಸಲಾಗಿದ್ದು ಜನರಿಗೆ ಸ್ಥಳೀಯವಾಗಿ 5971.ಲೀ ಹಾಲನ್ನು ಮಾರಾಟ ಮಾಡಿ ಉಳಿದ ಹಾಲನ್ನು ಒಕ್ಕೂಟಕ್ಕೆ ಕಳುಹಿಸಲಾಗಿದೆ.
ವರದಿ ಸಾಲಿನಲ್ಲಿ ಸಂಘವು 98606.55ರೂ ನಿವ್ವಳ ಲಾಭ ಗಳಸಿದ್ದು ಹಾಲು ಉತ್ಪಾದಕರಿಗೆ ಲೀ.ಗೆ 0.53ಪೈಸೆ ಬೋನಸ್ ನೀಡಲಾಗುವುದು ಹಾಗೂ 5% ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷೆ ಪುಷ್ಪಾ ಹೇಳಿದರು. ರೈತರು ಹೆಚ್ಚಿನ ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡಿ ಸಂಘದಿಂದ ಸಿಗುವ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ಹೇಳಿದರು.
ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಸಂಘಕ್ಕೆ ಸ್ವಂತ ಕಟ್ಟಡ ಹೊಂದಲು ನಿವೇಶನವನ್ನು ಒದಗಿಸಿ ಕೊಡುವ ವ್ಯವಸ್ಥೆಯನ್ನು ಮಾಡಲಾಗುವುದು ಹಾಗೂ ಸಂಘದಲ್ಲಿ ಹಾಲಿನ ಉತ್ಪತ್ತಿ ಹೆಚ್ಚಲು ಕ್ರಮ ಕೈಗೊಳ್ಳುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.
ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್‌ರವರು ಸಂಘದಲ್ಲಿ ರೈತರಿಗೆ ಸಿಗುವ ಸೌಲಭ್ಯಗಳ ಕುರಿತು ವಿವರಿಸಿದರು. ಸಭೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ವಿಶ್ವನಾಥ ಗೌಡ, ನಿರ್ದೇಶಕರಾದ ಸದಸ್ಯರಾದ ಬಿ.ಸೀತಾರಾಮ ಗೌಡ, ಸುಬ್ರಾಯ ಬಿ.ಎಸ್, ಕೆ.ವಿಜಯ ಕುಮಾರ್, ಆನಂದ ಸಾಲಿಯಾನ್, ವಸಂತ ಪೂಜಾರಿ, ಚೋಮ ನಾಯ್ಕ, ವೇದಾವತಿ, ಶಿವಮ್ಮ, ಮಲ್ಲಿಕಾ ಜಯರಾಂ ಉಪಸ್ಥಿತರಿದ್ದರು.
ಇತ್ತೀಚೆಗೆ ನಿಧನ ಹೊಂದಿರುವ ಸಂಘದ ನಿರ್ದೇಶಕ ಸುದರ್ಶನ್ ನಾಡಾಜೆಯವರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಸಂಘದ ಕಾರ್ಯದರ್ಶಿ ಶ್ವೇತಾ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಹಾಲು ಪರೀಕ್ಷಕಿ ವೇದಾವತಿ ಸಹಕರಿಸಿದರು.