ಪುತ್ತೂರು ಧೀಶಕ್ತಿ ಮಹಿಳಾ ಯಕ್ಷ ಬಳಗದಿಂದ ತಾಳಮದ್ದಳೆ 

0

ಪುತ್ತೂರು: ಶ್ರೀ ಎಡನೀರು ಮಠ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ತೃತೀಯ ಚಾತುರ್ಮಾಸ್ಯ ವ್ರತಾಚರಣೆ ಪ್ರಯುಕ್ತ ಧೀಶಕ್ತಿ ಮಹಿಳಾ ಯಕ್ಷಬಳಗ, ತೆಂಕಿಲ, ಪುತ್ತೂರು, ಇವರಿಂದ ಪವನ್ ಕಿರಣ್ಕೆರೆ ವಿರಚಿತ “ಶ್ರೀರಂಗ ತುಲಾಭಾರ” ಎನ್ನುವ ಆಖ್ಯಾನದ ತಾಳಮದ್ದಳೆಯು ನಡೆಯಿತು. 

ಹಿಮ್ಮೇಳದಲ್ಲಿ, ಭಾಗವತರಾಗಿ ಕು| ಸಿಂಚನಾ ಮೂಡುಕೋಡಿ, ಚೆಂಡೆ ಮದ್ದಲೆಗಳಲ್ಲಿ ಚಿಪ್ಪಾರು ರಾಜಾರಾಮ ಬಲ್ಲಾಳ್, ಪಿ. ಜಿ. ಜಗನ್ನಿವಾಸ ರಾವ್ ಪುತ್ತೂರು, ಮಾ|ಅದ್ವೈತ್ ಕನ್ಯಾನ ಸಹಕರಿಸಿದರು. ಮುಮ್ಮೇಳದಲ್ಲಿ ಪದ್ಮಾ ಕೆ ಆರ್ ಆಚಾರ್ಯ ಶ್ರೀಕೃಷ್ಣನಾಗಿ, ಜಯಲಕ್ಷ್ಮಿ ವಿ ಭಟ್ ನಾರದನಾಗಿ, ಪ್ರೇಮಾ ಕಿಶೋರ್ ಸತ್ಯಭಾಮೆಯಾಗಿ, ಶ್ರೀವಿದ್ಯಾ ಜೆ ರಾವ್ ರುಕ್ಮಿಣಿಯಾಗಿ, ಶಾಲಿನಿ ಅರುಣ್ ಶೆಟ್ಟಿ ಬಲರಾಮನಾಗಿ ಪಾತ್ರ ನಿರ್ವಹಣೆ ಮಾಡಿದರು. ಸರ್ವೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರಾದ ಶ್ರೀರಾಮ ಕಲ್ಲೂರಾಯರು ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದರು. ಸರ್ವಮಂಗಳಾ ಪುಣಿಂಚತ್ತಾಯ ಸ್ವಾಗತಿಸಿ, ವಂದಿಸಿದರು. ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರು ಕಲಾವಿದರಿಗೆ ಫಲ ಮಂತ್ರಾಕ್ಷತೆ ನೀಡಿ ಹಾರೈಸಿದರು.

LEAVE A REPLY

Please enter your comment!
Please enter your name here