ಪುತ್ತೂರು ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ಸರ್ವೆಯಲ್ಲಿ ತಾಳಮದ್ದಳೆ

0

ಪುತ್ತೂರು: ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಸನ್ನಿಧಿಯಲ್ಲಿ ಪ್ರಥಮ ಗಣೇಶೋತ್ಸವದ ಪ್ರಮುಖ ಆಕರ್ಷಣೆಯಾಗಿ ಪುತ್ತೂರು ತೆಂಕಿಲ ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ಯಕ್ಷಗಾನ ತಾಳಮದ್ದಳೆ “ಶ್ರೀ ರಾಮ ದರ್ಶನ” ಎಂಬ ಆಖ್ಯಾನವು ನಡೆಯಿತು.


ಹಿಮ್ಮೇಳದಲ್ಲಿ,ಸಾಂಪ್ರದಾಯಿಕ ಶೈಲಿಯ ಮೇರು ಭಾಗವತರಾದ ಸುಬ್ರಾಯ ಸಂಪಾಜೆಯವರ ಭಾಗವತಿಕೆಯೊಂದಿಗೆ,ಚೆಂಡೆ- ಮದ್ದಳೆಗಳಲ್ಲಿ,ನುರಿತ ಕಲಾವಿದರಾದ ಶಂಕರನಾರಾಯಣ ಭಟ್ ಪದ್ಯಾಣ ಮತ್ತು ಮುರಳೀಧರ ಕಲ್ಲೂರಾಯ,ಕುಂಜೂರುಪಂಜ ಸಹಕರಿಸಿದರು.


ಮುಮ್ಮೇಳದಲ್ಲಿ ಪದ್ಮಾ ಕೆ ಆರ್ ಆಚಾರ್ಯ ಹನುಮಂತನಾಗಿ, ಜಯಲಕ್ಷ್ಮಿ ವಿ ಭಟ್ ವೀರಮಣಿಯಾಗಿ, ಪ್ರೇಮಾ ಕಿಶೋರ್ ಈಶ್ವರನಾಗಿ, ಶಾಲಿನಿ ಅರುಣ್ ಶೆಟ್ಟಿ ಶತ್ರುಘ್ನನಾಗಿ, ಹೀರಾ ಉದಯ್ ಶ್ರೀರಾಮನಾಗಿ ಪಾತ್ರ ನಿರ್ವಹಣೆ ಮಾಡಿದರು.

LEAVE A REPLY

Please enter your comment!
Please enter your name here