ನಿವ್ವಳ ಲಾಭ ರೂ.1,91,483.10, ಶೇ.12 ಡಿವಿಡೆಂಟ್, ಲೀ.50 ಪೈಸೆ ಬೋನಸ್ ಘೋಷಣೆ
ಪುತ್ತೂರು: ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರಿ ಸಂಘದ 2022-23 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಶ್ರೀಧರ ಪೂಜಾರಿ ಬಾಳೆವಡ್ಡು ರವರು ಅಧ್ಯಕ್ಷತೆಯಲ್ಲಿ ಸೆ.20 ರಂದು ನಡೆಯಿತು.
ಸಂಘದ ಅಧ್ಯಕ್ಷರು ಮಾತನಾಡಿ, ಸಂಘವು 2022-23 ನೇ ಸಾಲಿನಲ್ಲಿ ರೂ. 1,91,483.10 ನಿವ್ವಳ ಲಾಭ ಗಳಿಸಿದ್ದು, ಲಾಭದಲ್ಲಿ ಶೇ.12 ಡಿವಿಡೆಂಡ್, ಹಾಲು ಉತ್ಪಾದಕರಿಗೆ ಲೀಟರ್ ಹಾಲಿಗೆ 50 ಪೈಸೆ ಬೋನಸ್ ನೀಡಲಾಗುವುದು, ಸಂಘದಲ್ಲಿ ಒಟ್ಟು 390 ಸದಸ್ಯರಿದ್ದು ರೂ.62570/-ಪಾಲು ಬಂಡವಾಳ ಇರುತ್ತದೆ. ವರದಿ ಸಾಲಿನಲ್ಲಿ ಒಟ್ಟು 1,93,896 ಲೀ ಹಾಲು ಸಂಗ್ರಹವಾಗಿದ್ದು, 129 ಮಂದಿ ಹಾಲು ಹಾಕುತ್ತಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದರು. ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ವಾಡ್ಯಪ್ಪ ಗೌಡ ಚಾಮೆತಕುಮೇರು, (ಪಥಮ) ರತ್ನ. ಕೊಂರ್ಬಡ್ಕ (ದ್ವಿತೀಯ) ಹಾಗೂ ಸರೋಜಿನಿ ಬಿ.ಮೇರಡ್ಕ (ತೃತೀಯ) ಇವರಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೆ 2022-23 ನೇ ಸಾಲಿನಲ್ಲಿ ಹಾಲು ಹಾಕಿದ ಎಲ್ಲಾ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಿ ಗೌರವಿಸಲಾಯಿತು.
ದ.ಕ ಹಾಲು ಒಕ್ಕೂಟದ ಮಂಗಳೂರು ಇದರ ಪುತ್ತೂರು ವಿಭಾಗದ ವಿಸ್ತರಣಾಧಿಕಾರಿ ಕೆ.ನಾಗೇಶ್, ಸಂಘದ ಉಪಾಧ್ಯಕ್ಷ ಗಣಪತಿ ಭಟ್.ಎಸ್, ನಿರ್ದೇಶಕರಾದ ಡಿ.ವಿಶ್ವಾನಾಥ ಶೆಟ್ಟಿ, ಬೆಳ್ಯಪ್ಪ ಗೌಡ, ಕೆ.ಗಣಪಯ್ಯ ನಾಯ್ಕ, ತಿರುಮಲೇಶ್ವರ ಗೌಡ, ಪ್ರದೀಪ ಪೂಜಾರಿ, ಕೆವ ಗೌಡ, ಸುಬ್ರಹಣ್ಯ ಗೌಡ ಸಿ.ಆರ್, ತಾರಾನಾಥ ಗೌಡ, ಪೂರ್ಣಿಮಾ, ನಳಿನಾಕ್ಷಿ, ಸಂಘದ ಸ್ಥಾಪಕಾಧ್ಯಕ್ಷ ಕೆ.ಆರ್.ಲಕ್ಷಣ ಗೌಡ ಹಾಗೂ ಮಾಜಿ ಅಧ್ಯಕ್ಷರುಗಳು, ನಿರ್ದೇಶಕರು ಸೇರಿದಂತೆ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
ಸನ್ಮಾನ ಕಾರ್ಯಕ್ರಮ:
ಸಂಘದ ಹಿರಿಯ ಸದಸ್ಯರಾದ ತಿಮ್ಮಪ್ಪ ಗೌಡ ಕೆ ಶಿವರಾಮ ಭಟ್, ಶ್ಯಾಮಸುಂದರ ರೈ, ಕಮಲ ಬಿ., ರಾಜೇಂದ್ರ, ಕೆ.ದಾಸಪ್ಪ ಗೌಡರವರಿಗೆ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ನಿರ್ದೇಶಕ ಕೆ.ಆರ್.ಲಕ್ಷಣ ಗೌಡ ಕುಂಟಿಕಾನರವರು ಸನ್ಮಾನಿಸಿದರು. ಸಂಘದ ಸಹಾಯಕಿ ಸುಮಾ ಪ್ರಾರ್ಥಿಸಿದರು, ಉಪಾಧ್ಯಕ್ಷ ಗಣಪತಿ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಹರ್ಷಿತ್ ಕೆ. ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕಿ ನಳಿನಾಕ್ಷಿ ವಂದಿಸಿದರು. ಹಾಲು ಪರೀಕ್ಷಕಿ ವಿಜಯಕುಮಾರಿ, ಸಹಾಯಕಿ ಸವಿತಾ ಹಾಗೂ ಕೃತಕ ಗರ್ಭದಾರಣಾ ಕಾರ್ಯಕರ್ತರಾದ ದುರ್ಗಾಪ್ರಸಾದ್ ಭಟ್ ಸಹಕರಿಸಿದರು.