ಪುತ್ತೂರು: ಮುರ ಧರಿತ್ರಿ ಸೌಹಾರ್ದ ಸಹಕಾರಿ ಎರಡನೇ ವರ್ಷದ ಮಹಾಸಭೆ ಸಂಘದ ಅಧ್ಯಕ್ಷ ವಸಂತಗೌಡ ಪಿ.ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ನೋಟಿಸ್ ಉಪಾಧ್ಯಕ್ಷೆ ನೇತ್ರಾವತಿ ಸಭೆಯ ನೊಟೀಸ್ ವಾಚಿಸಿದರು. ವಸಂತ ಗೌಡ ಬಿರ್ವ 2022-23ನೇ ಸಾಲಿನ ವಾರ್ಷಿಕ ಆಡಳಿತ ವರದಿ ಓದಿ ಮಂಡಿಸಿದರು. 2022-23ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಹಾಗೂ ಲೆಕ್ಕ ಮಂಡನೆಯನ್ನು ಕಾವ್ಯ ಎ. ಲೆಕ್ಕ ಸಹಾಯಕಿ ಅನುಮೋದಿಸಿದರು.
ಅದ್ಯಕ್ಷ ಶ್ರೀವಸಂತ ಗೌಡ 2023-24 ನೇ ಸಾಲಿನಲ್ಲಿ ಮುಂಗಡ ಪತ್ರ ಓದಿ ಮಂಡಿಸಿ ಮಾತನಾಡಿ ಸಂಘದ ವ್ಯವಹಾರವನ್ನು ವೃದ್ಧಿಸುವಲ್ಲಿ ನಮ್ಮೆಲ್ಲರ ನಿರಂತರ ಪ್ರಯತ್ನ ಅತಿ ಅಗತ್ಯವಾಗಿರುತ್ತದೆ ಆದುದರಿಂದ ಸಂಘದಲ್ಲಿ ಈ ವರ್ಷ ಠೇವಣಿ ಸಂಗ್ರಹಣೆಯ ಗುರಿ 75 ಲಕ್ಷಕ್ಕೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಹಾಗೂ ಬೈಲ ತಿದ್ದುಪಡಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಮತ್ತು ಸಭೆಯಲ್ಲಿ ಕಚೇರಿ ಸಿಬ್ಬಂದಿಗಳಾದ ರೇಣುಕ ಕಚೇರಿ ವ್ಯವಸ್ಥಾಪಕರು ಹಾಗೂ ಕಾವ್ಯ ಲೆಕ್ಕ ಸಹಾಯಕಿ ಮತ್ತು ಪಿಗ್ಮಿ ಸಂಗ್ರಹಕರಾದ ರಮೇಶ್ ಯ ಜ್ಞಾತ ರೈ , ಕೆ.ಗಿರಿಶ್ ಆಚಾರ್ಯ ಹಾಗೂ ಜಯಪ್ರಕಾಶ್ ರವರನ್ನು ಗುರುತಿಸಲಾಯಿತು. 2023-24ನೇ ಸಾಲಿನ ಮುನ್ನೋಟವನ್ನು ಅಧ್ಯಕ್ಷ ವಸಂತಗೌಡ ಪಿ.ರವರು ಓದಿ ಮಂಡಿಸಿದರು.
ಸಂಘದ ಲೆಕ್ಕಪರಿಶೋಧಕ ಆನಂದ ಗೌಡ ಖಂಡಿಗ ಹಾಗೂ ಕಚೇರಿ ಸಿಬ್ಬಂದಿಯಾದ ಕಾವ್ಯರವರನ್ನು ಸನ್ಮಾನ ಮಾಡಲಾಯಿತು. ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ 2022-23ನೇ ಶೈಕ್ಷಣಿಕ ವರ್ಷದಲ್ಲಿ 600 ರಲ್ಲಿ 547 ಅಂಕ ಪಡೆದಂತಹ ನಿಹಾಂತ್ ಬಿ ರವರಿಗೆ ಕೂಡ ಸನ್ಮಾನ ಮಾಡಲಾಯಿತು ನಿರ್ದೇಶಕಿ ಪ್ರೇಮ ಪ್ರಾರಂಭಿಸಿದರು. ಲೆಕ್ಕ ಸಹಾಯಕಿ ಕುಮಾರಿ ಕಾವ್ಯ ಎ. ಸಾಗತಿಸಿದರು ರಮೇಶ್ ವಂದಿಸಿದರು. ನಿರ್ದೇಶಕರಾದ ರವೀಂದ್ರ ಆಚಾರ್ಯ, ಮೋಹನ ಗೌಡ, ಪ್ರೇಮ, ಚಿತ್ರ, ಪ್ರತಿಮಾ, ಕಛೇರಿ ವ್ಯವಸ್ಥಾಪಕ ರೇಣುಕಾ ಹೆಚ್. ಲೆಕ್ಕ ಸಹಾಯಕಿ ಕಾವ್ಯ, ಪಿಗ್ಮಿ ಸಂಗ್ರಹಕರಾದ ರಮೇಶ, ಕೆ. ಗಿರೀಶ್ ಆಚಾರ್ಯ, ಜಯಪ್ರಕಾಶ್ ಯಜ್ಞತರ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.