ಮುರ ಗೌಡ ಸಮುದಾಯ ಭವನದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

0

ಪುತ್ತೂರು: ಧರಿತ್ರಿ ಸೌಹಾರ್ದ ಸಹಕಾರಿ ನಿಯಮಿತ ಮರ, ರೊಟರ‍್ಯಾಕ್ಟ್ ಕ್ಲಬ್ ಪುತ್ತೂರು, ಕಲ್ಲೆಗ ಗೌಡ ಯುವ ಸಂಘ ಪುತ್ತೂರು, ಇವರ ಸಂಯುಕ್ತ ಆಶ್ರಯದಲ್ಲಿ ಎಜೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರ ಮಂಗಳೂರು ಇವರ ನುರಿತ ತಜ್ಞ ವೈದ್ಯರುಗಳಿಂದ ಉಚಿತ ನೇತ್ರ ತಪಾಸಣಾ ಶಿಬಿರ ಸೆ.20ರಂದು ಮುರ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಪುತ್ತೂರು ರೋಟರಿ ಅಧ್ಯಕ್ಷ ಜಯರಾಜ ಭಂಡಾರಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಸಾಮಾಜಿಕ ಕಾರ್ಯಕ್ರಮಗಳನ್ನು ಇನ್ನು ಮುಂದಿನ ದಿನಗಳಲ್ಲಿ ಸಂಘ ಸಂಸ್ಥೆಗಳಲ್ಲಿ ಸೇರಿ ಕೈಜೋಡಿಸಿ ಮಾಡಲು ನಾವು ಬದ್ಧರಿದ್ದೇವೆ ಎಂದು ತಿಳಿಸಿದರು. ಪುತ್ತೂರು ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷೆ ಜ್ಯೋತಿಕಾ, ಮುರ ಕಲ್ಲೆಗ ಗೌಡ ಯುವ ಸಂಘದ ಅಧ್ಯಕ್ಷ ಜಿನ್ನಪ್ಪ ಗೌಡ, ಒಕ್ಕಲಿಗ ಗೌಡ ಸಮುದಾಯ ಭವನ ಕಟ್ಟಡ ಸಮಿತಿ ಅಧ್ಯಕ್ಷ ಬಾಬುಗೌಡ, ಮಂಗಳೂರು ಎ.ಜೆ ಆಸ್ಪತ್ರೆಯ ಡಾ.ರೋಶಿಣಿ, ನೆಹರುನಗರ ಎಮ್.ವಿ ಗ್ರೂಫ್‌ನ ಸುಬ್ರಮಣಿ, ಧರಿತ್ರಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ವಸಂತಗೌಡ, ಧರಿತ್ರಿ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷೆ ನೇತ್ರಾವತಿ ಗೌಡ ಉಪಸ್ಥಿತರಿದ್ದರು.

ನಿರ್ದೇಶಕಿ ಪ್ರೇಮಾ ಪ್ರಾರ್ಥಿಸಿದರು. ವಸಂತಗೌಡ ಸ್ವಾಗತಿಸಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಕಾವ್ಯ ವಂದಿಸಿದರು. ಧರಿತ್ರಿ ಸೌಹಾರ್ದ ಸಹಕಾರ ಸಂಘದ ನಿರ್ದೇಶಕರು, ಕಬಕ ಸರಕಾರಿ ಪವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಹಾಗೂ ಕಚೇರಿ ಸಿಬ್ಬಂದಿಗಳು ಸಹಕರಿಸಿದರು.

110ಮಂದಿ ನೇತ್ರ ತಪಾಸಣೆ ಮಾಡಿಸಿದರು. 65 ಮಂದಿ ಉಚಿತ ಕನ್ನಡಕ ಪಡೆದುಕೊಂಡರು, ಕಾರ್ಯಕ್ರಮದಲ್ಲಿ ಆಧಾರ್ ನವೀಕರಣದ ಸೇವೆಯನ್ನು ಅಂಚೆ ಇಲಾಖೆಯವರು ನಡೆಸಿದರು.

LEAVE A REPLY

Please enter your comment!
Please enter your name here