ಕಾಣಿಯೂರು ಪ್ರಗತಿಯ ಮೋನಿಷ್ ತಂಟೆಪ್ಪಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ದಾಖಲು

0

ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಏಳನೇ ತರಗತಿ ವಿದ್ಯಾರ್ಥಿ ಮೋನಿಷ್ ಟಿ. ಅವರ ಹೆಸರು ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ.
ಮೋನಿಷ್ ಅವರು ಈಗಾಗಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್, ಮತ್ತು ನೊಬೆಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಬರೆಸಿಕೊಂಡಿದ್ದರು.

ಇದೀಗ ಪೂರ್ಣ ಉಷ್ಟ್ರಪನಾದಲ್ಲಿ ಇಪ್ಪತ್ತೈದು ನಿಮಿಷ ಹದಿನೇಳು ಸೆಕೆಂಡುಗಳ ಕಾಲ ಒಂದೇ ಸ್ಥಿತಿಯಲ್ಲಿ ಇರುವುದರ ಮೂಲಕ ತನ್ನ ಹೆಸರನ್ನು ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಿಸಿದ್ದಾರೆ. ವಿಶ್ವನಾಥ ತಂಟೆಪ್ಪಾಡಿ ಮತ್ತು ದಯಾಮಣಿ ರವರ ಪುತ್ರರಾಗಿರುವ ಇವರು ಯೋಗಗುರು ಸಂತೋಷ್ ಮುಂಡಕಜೆ ಮತ್ತು ಪ್ರಗತಿ ವಿದ್ಯಾಸಂಸ್ಥೆಯ ಯೋಗ ಶಿಕ್ಷಕಿ ಶಶಿಕಲಾ ಅವರಿಂದ ಯೋಗಾಭ್ಯಾಸವನ್ನು ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here