ಪುತ್ತೂರು ಅಗ್ನಿಶಾಮಕ ದಳದ ರುಕ್ಮಯ್ಯ ಗೌಡರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಪ್ರದಾನ

0

ಪುತ್ತೂರು: ಪುತ್ತೂರು ಅಗ್ನಿಶಾಮಕ ದಳದ ಪ್ರಮುಖ ಅಗ್ನಿಶಾಮಕ ರುಕ್ಮಯ್ಯ ಗೌಡ ಅವರಿಗೆ 2023ನೇ ಸಾಲಿನ ’ಮುಖ್ಯಮಂತ್ರಿಗಳ ಚಿನ್ನದ ಪದಕ’ವನ್ನು ಸೆ.22ರಂದು ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು.


ಬೆಂಗಳೂರಿನ ಆರ್.ಎ.ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿ ಸೆ.22ರಂದು ಬೆಳಗ್ಗೆ 8.30ಕ್ಕೆ ಏರ್ಪಡಿಸಿರುವ ಮುಖ್ಯಮಂತ್ರಿ ಪದಕ ಪ್ರಧಾನ ಹಾಗೂ ಅಗ್ನಿಶಾಮಕ ಠಾಣಾಧಿಕಾರಿಗಳ ನಿರ್ಗಮನ ಪಥ ಸಂಚಲನ ಸಮಾರಂಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪದಕ ಪ್ರದಾನ ಮಾಡಿದರು.


ರುಕ್ಮಯ್ಯ ಗೌಡ ಅವರು 2018ರಿಂದ ಪುತ್ತೂರು ಅಗ್ನಿ ಶಾಮಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಈಗಾಗಲೇ ಹಲವು ಪ್ರಕರಣಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಜನಮನ್ನಣೆ ಗಳಿಸಿದ್ದಾರೆ. ರುಕ್ಮಯ್ಯ ಗೌಡ ಅವರು ಈ ಹಿಂದೆ ಸುದ್ದಿ ಜನಾಂದೋಲನ ವೇದಿಕೆ ಮೂಲಕ ನಡೆದಿದ್ದ ಆನ್‌ಲೈನ್ ವೋಟಿಂಗ್‌ನಲ್ಲಿ ಅಗ್ನಿ ಶಾಮಕ ದಳದ ’ಉತ್ತಮ ಅಧಿಕಾರಿ’ಯಾಗಿ ಜನರಿಂದ ಆಯ್ಕೆಯಾಗಿದ್ದರು. ಮೂಲತಃ ಕಡಬ ತಾಲೂಕು ಕೊಂಬಾರು ಗ್ರಾಮದ ದಿ.ಕೊರಗಪ್ಪ ಗೌಡ ಮತ್ತು ದಿ.ನಾಗಮ್ಮ ದಂಪತಿ ಪುತ್ರ ಆಗಿರುವ ರುಕ್ಮಯ್ಯ ಗೌಡ ಅವರು ಪ್ರಸ್ತುತ ಪುತ್ತೂರು ನರಿಮೊಗರು ಗ್ರಾಮದ ಪಂಜಳದಲ್ಲಿ ವಾಸ್ತವ್ಯ ಹೊಂದಿದ್ದಾರೆ.

LEAVE A REPLY

Please enter your comment!
Please enter your name here