ಪುತ್ತೂರು: ಅಜ್ಜಿನಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಸೆ. 19 ರಂದು ಶ್ರೀ ಸಾರ್ವಜನಿಕ ಗಣೇಶೋತ್ಸವ ಜರಗಿತು.
ಬೆಳಗ್ಗೆ ಗಣಪತಿ ಹವನ, ವಿಗ್ರಹ ಪ್ರತಿಷ್ಠೆ ಮಹಾಮಂಗಳಾರತಿ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ನಿವೃತ್ತ ಸೈನಿಕ ವೆಂಕಪ್ಪ ಗೌಡ ಆಜೇರುಮಜಲು, ಹಾಗೂ ಧಾರ್ಮಿಕ ಭಾಷಣಗಾರರಾಗಿ ವಿವೇಕಾನಂದ ಕಾಲೇಜಿನ ಸ್ನಾತಕೋತರ ವಿಭಾಗದ ಡಾ| ವಿಜಯ ಸರಸ್ವತಿ ಅವರು ಭಾಗವಹಿಸಿದರು. ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಾಯಂಕಾಲ ವಿಜ್ರಂಭಣೆಯಿಂದ ಶೋಭಾಯಾತ್ರೆ ಮತ್ತು ವಿಗ್ರಹ ವಿಸರ್ಜನೆ ನಡೆಯಿತು.
ಕಾರ್ಯಕ್ರಮದಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕಿರಣ್ ಕುಮಾರ್, ಉಪಾಧ್ಯಕ್ಷ ಹರೀಶ್ ಪಟಿಕ್ಕಲ್ಲು,ಕಾರ್ಯದರ್ಶಿ ಪುನೀತ್ ಕುಮಾರ್ ನಾರ್ನಡ್ಕ ಜತೆಕಾರ್ಯದರ್ಶಿ ರವಿಚಂದ್ರ ನೀರ್ಕಜೆ, ಕೋಶಾಧಿಕಾರಿ ಹಾಗೂ ವಿಗ್ರಹ ಸಮರ್ಪಣೆಯನ್ನು ಮಾಡಿದ ಚೋಮಣ್ಣ ಗೌಡ, ಅಜ್ಜಿನಡ್ಕ. ಗಣ್ಯರಾದ ಆನಂದ ನಡುಸಾರು, ಕರುಣಾಕರ ಗೌಡ ಸಂಕೇಸ, ಐತ್ತಪ್ಪ ವಳಕಟ್ಟೆ, ವಿನಯಕೃಷ್ಣ, ಸಂತೋಷ ಅಜ್ಜಿನಡ್ಕ, ಲೋಕೇಶ್ ನಡುಸಾರು , ಹರೀಶ್ ಓಂಕಾರ ಮೂಲೆ ಲೋಕೇಶ್ ಅಜ್ಜಿನಡ್ಕ ಶಿವಪ್ರಸಾದ್ ಅಜ್ಜಿನಡ್ಕ ,ಪುಷ್ಪರಾಜ, ಕೃಷ್ಣ ಅಜ್ಜಿನಡ್ಕ ಹರಿಪ್ರಸಾದ್ ಮಣ್ಣಗುಳಿ, ಸುಮನ ನೀರ್ಕಜೆ, ಅಕ್ಷತಾ ಮಧುಶ್ರೀ ಸಹಕರಿಸಿದರು.