ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ

0

ರೂ.53,28,111ಲಕ್ಷ ಲಾಭ, ಶೇ.10.50, ಡಿವಿಡೆಂಟ್, ಶೇ.99.25 ಸಾಲ ವಸೂಲಾತಿ

ಪುತ್ತೂರು: ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 2022-23ನೇ ಸಾಲಿನಲ್ಲಿ ರೂ.53,28,111.13 ಲಾಭಗಳಿಸಿ ಶೇ.10.50 ಡಿವಿಡೆಂಡ್ ವಿತರಿಸಲಾಗುವುದು. ಸಾಲ ವಸೂಲಾತಿಯಲ್ಲಿ ಸಂಘವು ಶೇ.99.25 ಸಾಧನೆ ಮಾಡಿದೆ ಎಂದು ಸಂಘದ ಅಧ್ಯಕ್ಷ ಕೆ.ಎಸ್ ವೆಂಕಟರಮಣ ಗೌಡ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.
ಸಭೆಯು ಸೆ.22ರಂದು ಪೆರ್ಲಂಪಾಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ ಎ ತರಗತಿ ಸದಸ್ಯರಿಂದ ರೂ.2,01,41,370 ಹಾಗೂ ಡಿ ತರಗತಿ ಸದಸ್ಯರಿಂದ ರೂ.40,700 ಪಾಲು ಬಂಡವಾಳ, ವಿವಿಧ ನಿಧಿಗಳಲ್ಲಿ ರೂ.2.09, ಠೇವಣಾತಿಯಲ್ಲಿ ರೂ.18.48. ಕೋಟಿ ಹೊಂದಿದೆ. ವರದಿ ಸಾಲಿನಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ರೂ. 16.80ಕೋಟಿ ಸಾಲ ಪಡೆದುಕೊಂಡಿದ್ದು ಯಾವುದೇ ಸುಸ್ತಿ ಸಾಲವಿರುವುದಿಲ್ಲ. ರೂ.30.58 ಕೋಟಿಯನ್ನು ಸದಸ್ಯರಿಗೆ ವಿವಿಧ ರೂಪದಲ್ಲಿ ಸಾಲವಾಗಿ ವಿತರಿಲಾಗಿದೆ. ಸಾಲ ವಸೂಲಾತಿಯಲ್ಲಿ ಸಂಘವು ಶೇ.99.25 ಪ್ರಗತಿ ಸಾಧಿಸಿದೆ. ಲಾಭಾಂಶವನ್ನು ಉಪನಿಬಂಧನೆಯAತೆ ವಿಂಗಡಿಸಲಾಗಿದೆ ಎಂದರು.


ಮುಂದಿನ ಯೋಜನೆಗಳು:
ಹೊಸದಾಗಿ 150ಮಂದಿ ಸದಸ್ಯರನ್ನು ಸೇರ್ಪಡಗೊಳಿಸುವುದು, ರೂ.೨೫ಲಕ್ಷ ಹೆಚ್ಚುವರಿ ಪಾಲು ಬಂಡವಾಳ ಸಂಗ್ರಹ, ರೂ.2.5ಕೋಟಿ ಠೇವಣಾತಿ ಸಂಗ್ರಹ, ರೂ.3ಕೋಟಿ ಹೊಸ ಅಲ್ಪಾವಧಿ ಕೃಷಿ ಸಾಲ, ರೂ.3ಕೋಟಿ ಮಧ್ಯಮಾವಧಿ ಕೃಷಿ ಸಾಲಕ, ಇತರ ಉದ್ದೇಶಗಳಿಗೆ ರೂ.2.5ಕೋಟಿ ಸಾಲ, ಸ್ವ ಸಹಾಯ ಗುಂಪುಗಳಿಗೆ ರೂ.20ಲಕ್ಷ ಹೆಚ್ಚುವರಿ ಸಾಲ ನೀಡುವ ಗುರಿಯಿದೆ. ಸದಸ್ಯರ ಬೇಡಿಕೆಯಂತೆ ರಾಸಾಯನಿಕ ಗೊಬ್ಬರಗಳ ದಾಸ್ತಾನು ಮಾಡಿ ಸಕಾಲಕ್ಕೆ ಒದಗಿಸುವುದು, ಕೃಷಿಯಂತ್ರೋಪಕರಣಗಳು, ರಬ್ಬರ್ ಪರಿಕರಗಳು, ಕಟ್ಟಡ ಸಾಮಾಗ್ರಿಗಳ ಮಾರಾಟ ಸೇರಿದಂತೆ ಗ್ರಾಹಕರ ಇತರ ಆವಶ್ಯಕತೆಗಳ ಪೂರೈಕೆಗಳಿಗೆ ರೂ.2ಕೋಟಿಯ ವ್ಯವಹಾರ ನಡೆಸುವುದು, ಕೇಂದ್ರ ಕಚೇರಿ ಕಟ್ಟಡದ ಮೇಲ್ಬಾಗದಲ್ಲಿ ಸಭಾಂಗಣ ನಿರ್ಮಿಸುವುದು, ಕೇಂದ್ರ ಕಚೇರಿ ಹಾಗೂ ಶಾಖಾ ಕಟ್ಟಡಕ್ಕೆ ಇಂಟರ್‌ಲಾಕ್ ಅಳವಡಿಸುವುದು, ಕೇಂದ್ರ ಕಚೇರಿ ಮುಂಭಾಗದಲ್ಲಿ ಆವರಣಗೋಡೆ ಹಾಗೂ ವಾಹನ ನಿಲುಗಡೆ ಶೆಡ್‌ನ್ನು ರಚಿಸಲಾಗವುದು ಎಂದು ಅಧ್ಯಕ್ಷ ಕೆ.ಎಸ್ ವೆಂಕಟ್ರಮಣ ಗೌಡ ತಿಳಿಸಿದರು.


ಅ.27 ಉಚಿತ ವೈದ್ಯಕೀಯ ಶಿಬಿರ
ಸಂಘದ ಸಿಬಂದಿ ಜಯರಾಮರವರ ಸ್ಮರಣಾರ್ಥವಾಗಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಅ.27ರಂದು ಪೆಲಂಪಾಡಿ ಷಣ್ಮುಖ ದೇವ ಪ್ರೌಢಶಾಲಾ ಸಭಾಂಗಣದಲ್ಲಿ ಉಚಿತ ವೈದ್ಯಕೀಯ ಶಿಬಿರವು ನಡೆಯಲಿದೆ. ಗ್ರಾಮಸ್ಥರ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಅಧ್ಯಕ್ಷರು ತಿಳಿಸಿದರು.


ಸಹಕಾರ ಸಂಘದ ಮೂಲಕ ಬೆಳೆ ಸಮೀಕ್ಷೆ ನಡೆಸಲು ಆಗ್ರಹ:
ಬೆಳೆ ವಿಮೆ ಸೌಲಭ್ಯ ಪಡೆಯಲು ಫುಡ್ ಆಪ್ ನಲ್ಲಿ ಎಫ್.ಐ.ಡಿ ಮಾಡಬೇಕು. ಇದರ ಬಗ್ಗೆ ರೈತರಿಗೆ ಸರಿಯಾದ ಮಾಹಿತಿಯ ಇಲ್ಲದೆ ಕೆಲವು ರೈತರು ಯೋಜನೆಯ ಸೌಲಭ್ಯ ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ. ಇಲಾಖೆಯಿಂದ ನೇಮಿಸಲ್ಪಟ್ಟ ಸಿಬಂದಿಗಳು ಕನಿಷ್ಟ ವೇತನದಲ್ಲಿ ನಿಗದಿತ ಸಮಯದ ಪೂರ್ಣ ಗೊಳಿಸುವುದು ಅಸಾಧ್ಯ. ಹೀಗಾಗಿ ಎಲ್ಲರಿಗೂ ಪಡೆಯುವ ನಿಟ್ಟಿನಲ್ಲಿ ಸಹಕಾರಿ ಸಂಘದ ಮೂಲಕ ಸಿಬಂದಿ ನೇಮಿಸಿಕೊಂಡು ಯಶಸ್ವಿ ಗೊಳಿಸಲು ಸಹಕಾರ ನೀಡಬೇಕು ಕೊಳ್ತಿಗೆ ಗ್ರಾ.ಪಂ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್ ಒತ್ತಾಯಿಸಿದರು. ಶಾಸಕರ ಗಮನಕ್ಕೆ ತಂದು ಸರಕಾರದ ಗಮನಕ್ಕೆ ತರಲಾಗುವುದು ಎಂದು ಅಧ್ಯಕ್ಷ ವೆಂಕಟರಮಣ ಗೌಡ ತಿಳಿಸಿದರು.


ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಅಭಿವೃದ್ಧಿ ಕಾರ್ಯಗಳ ಕುರಿತು ಅಧ್ಯಕ್ಷರು ಮಾಹಿತಿ ನೀಡಿದಾಗ ಕೊಳ್ತಿಗೆ ಗ್ರಾ.ಪಂ.ಉಪಾಧ್ಯಕ್ಷ ಪ್ರಮೋದ್ ಕೆ.ಎಸ್. ಮಾತನಾಡಿ ಗ್ರಾ.ಪಂ.ಗೊಂದು ಸಹಕಾರ ಸಂಘ ಎಂಬ ಸುತ್ತೋಲೆ ಬಂದಿದೆ. ಇದರಿಂದ ಪಾಲ್ತಾಡಿ ಶಾಖೆಯ ಅಭಿವೃದ್ಧಿಗೆ ಹಣ ಇಡುವುದು ಬೇಡ ಎಂದರು. ಇದಕ್ಕೆ ಸದಸ್ಯ ಪ್ರವೀಣ್ ಚೆನ್ನಾವರ ಅವರು ಆಕ್ಷೇಪಿಸಿದರು. ಪಾಲ್ತಾಡಿ ಗ್ರಾಮದ ಸದಸ್ಯರು ಕೊಳ್ತಿಗೆ ಸಹಕಾರ ಸಂಘದಲ್ಲಿಯೇ ವ್ಯವಹಾರ ಮಾಡುತ್ತಿದ್ದೇವೆ. ಕೊಳ್ತಿಗೆ ಸಹಕಾರ ಸಂಘದ ಭಾಗವಾಗಿಯೇ ಇದ್ದೇವೆ. ಕೊಳ್ತಿಗೆ ಸಹಕಾರ ಸಂಘದ ಎಲ್ಲಾ ಸೌಲಭ್ಯಗಳನ್ನು ಪಡೆಯುವ ಹಕ್ಕು ಪಾಲ್ತಾಡಿ ಗ್ರಾಮಸ್ಥರಿಗೆ ಇದೆ ಎಂದರು.


ಲಾಭಾಂಶದಲ್ಲಿ ಸದಸ್ಯರಿಗೆ ನೀಡುವ ಡಿವಿಡೆಂಡ್ ಏರಿಕೆ ಮಾಡಬೇಕು, ಕನಿಷ್ಠ ದಾಖಲೆಗಳ ಮೂಲಕ ವಾಹನ ಸಾಲ ನೀಡಬೇಕು, ಸಿಬಂದಿ ನೇಮಕ ಮಾಡುವಾಗ ಪಾಲ್ತಾಡಿ ಗ್ರಾಮಕ್ಕೂ ಆದ್ಯತೆ ನೀಡಬೇಕು ಎಂದು ಸದಸ್ಯ ಪ್ರವೀಣ್ ಚೆನ್ನಾವರ ಹೇಳಿದರು. ಡಿಸಿಸಿ ಬ್ಯಾಂಕ್‌ಗೆ ನಿರ್ದೇಶಕರನ್ನು ಆಯ್ಕೆ ಮಾಡುವ ಅವಕಾಶ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರದ ಸಂಘಕ್ಕಿದ್ದು ಸಿಬಂದಿ ನೇಮಕಕ್ಕೂ ಅವಕಾಶ ನೀಡಬೇಕು ಸೇರದಂತೆ ಹಲವು ಬೇಡಿಕೆಗಳನ್ನು ಸದಸ್ಯರು ತಿಳಿಸಿದರು. ಸದಸ್ಯರಾದ ಬಾಬು ರಾಜೇಂದ್ರ, ಭಾಸ್ಕರ ರೈ ಕಂಟ್ರಮಜಲು, ಸಂಜೀವ ಗೌಡ ಮೊದಲಾದವರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.


ಸನ್ಮಾನ:
ಸಂಘದ ಹಿರಿಯ ಸದಸ್ಯರಾದ ಮೋಹನ ಗೌಡ ಕೆಮ್ಮಾರ, ಹಸನ್ ಕುಂಞಿ ಕೆಮ್ಮಾರ, ಕಮಲ ವಿ.ಕೆ., ಪ್ರಭಾಕರ ಕೊಂರ್ಬಡ್ಕ, ಮುದರ ಕೆಮ್ಮತಕಾನ, ಅಬ್ಬಾಸ್ ಮೊಗಪ್ಪೆ, ಶೀನಪ್ಪ ಗೌಡ ಹೊಸಗದ್ದೆ, ರಾಮಚಂದ್ರ ಭಟ್ ಮೊಗಪ್ಪೆ, ಕೊರಗಪ್ಪ ಗೌಡ ಕಟ್ಟಪುಣಿ, ಚಳ್ಳ ಮುಳ್ಳುಕಾಡು, ಕೃಷ್ಣ ಮಣಿಯಾಣಿ ಬಾಯಂಬಾಡಿ, ನಾರಾಯಣ ರೈ ಕೊಳ್ತಿಗೆ ಕೆಳಗಿನ ಮನೆ, ಗಣೇಶ ಭಟ್ ಎಂ. ಗುಡ್ಡಪ್ಪ ನಾಯ್ಕ, ಎಸ್.ಜಿ.ಕೃಷ್ಣ ಸಿದ್ದಮೂಲೆ, ಆಲಿಕುಂಞಿ ಮಾಲೆತ್ತಕೋಡಿ, ರಾಮಚಂದ್ರ ನಾಯಕ್ ಆನಡ್ಕ, ಸೇಸಪ್ಪ ಪೂಜಾರಿ ಬೈಲಾಡಿ ಹಾಗೂ ನಾರಾಯಣ ಗೌಡ ಕುದ್ಕುಳಿಯರವರನ್ನು ಸನ್ಮಾನಿಸಲಾಯಿತು.


ಪ್ರತಿಭಾ ಪುರಸ್ಕಾರ:
ಸಂಘದ ವ್ಯಾಪ್ತಿಯಲ್ಲಿರುವ ಶೈಕ್ಷಣಿಕ ಕ್ಷೇತ್ರದ ಸಾಧಕರಾದ ಅವನಿ, ಸುಖೇಶ್, ವಿನುತಾ, ಸ್ರುದನ್ವಾ ಆಳ್ವ, ಪೂರ್ವಿ ಎ., ಸ್ಪಂದನಾ ಎ., ಲಿಖಿತಾ ರೈ, ಚೈತನ್ಯ, ಆಪ್ತಾ ಕೆ.ಜಿ., ತನ್ವಿ ಬಿ.ಆರ್., ಸೃಜನ ಆಳ್ವ ರವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಉಪಾಧ್ಯಕ್ಷೆ ಲಕ್ಷ್ಮೀ ಕೆ.ಜಿ, ನಿರ್ದೇಶಕರಾದ ಅಣ್ಣಪ್ಪ ನಾಯ್ಕ, ವಿಶಾಲಾಕ್ಷಿ, ನಾಗವೇಣಿ ಕೆ.ಕೆ., ಶಿವರಾಮ ಪೂಜಾರಿ, ಗುರುವಪ್ಪ ಎಂ., ಶ್ರೀಧರ ಗೌಡ ಅಂಗಡಿಹಿತ್ಲು, ಕೊಳ್ತಿಗೆ ರೈತ ಮಿತ್ರಕೂಟದ ಅಧ್ಯಕ್ಷ ಮುರಳೀಧರ ಎಸ್.ಪಿ., ನವೋದಯ ಸ್ವಸಹಾಯಕ ಸಂಘಗಳ ಕೊಳ್ತಿಗೆ ಒಕ್ಕೂಟದ ಅಧ್ಯಕ್ಷ ಅಶೋಕ್ ಒರ್ಕೊಂಬು, ಪಾಲ್ತಾಡಿ ಒಕ್ಕೂಟದ ಅಧ್ಯಕ್ಷೆ ವಸಂತಿ ಪ್ರೇರಕಿ ಕಲ್ಪವಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ರೇಶ್ಮಾ ಪ್ರಾರ್ಥಿಸಿದರು. ನಿರ್ದೇಶಕ ತೀರ್ಥಾನಂದ ದುಗ್ಗಳ ಸ್ವಾಗತಿಸಿದರು. ನಿರ್ದೇಶಕರಾದ ವಸಂತ ಕುಮಾರ್ ರೈ ವರದಿ ವಾಚಿಸಿದರು. ತಿಮ್ಮಪ್ಪಯ್ಯ ಆಯ-ವ್ಯಯ ಮಂಡಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಂಸಾವತಿ ಕೆ. ಲೆಕ್ಕಪರಿಶೋಧನಾ ವರದಿ ಮಂಡಿಸಿದರು. ಜಿಲ್ಲಾ ಕೇಂದ್ರದ ಸಹಕಾರಿ ಬ್ಯಾಂಕ್‌ನ ಮೇಲ್ವಿಚಾರಕ ಶರತ್ ಶೂನ್ಯ ಬಡ್ಡಿ ದರದ ಸಾಲಗಳ ಬಗ್ಗೆ ಮಾಹಿತಿ ನೀಡಿದರು. ಲೆಕ್ಕಿಗ ಬಾಲಗಂಗಾದರ ಕೆ., ಗಿರಿಜಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ಸತೀಶ್ ಪಾಂಬಾರು ವಂದಿಸಿದರು. ಸಿಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here